ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ
ಮೂಡುಬಿದಿರೆ: ಜೀವನದಲ್ಲಿ ಮಾನವಿಕ ಮೌಲ್ಯಗಳು, ಸಾಮಾಜಿಕ ಪ್ರಜ್ಞೆ ಹಾಗೂ ಜೀವನ ಕೌಶಲ್ಯಗಳನ್ನುಬೆಳೆಸಿಕೊಳ್ಳುವುದು ಅಗತ್ಯಎಂದು ಬೆಂಗಳೂರು ಎಚ್.ಎ.ಎಲ್‍ನ ಜನರಲ್ ಮ್ಯಾನೇಜರ್ ಪ್ರಕಾಶ್.ಕೆ ಎಂದು ಹೇಳಿದರು.
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಹನ್ನೊಂದನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪುಸ್ತಕ ಮತ್ತು ಇಂಟರ್ನೆಟ್‍ಗಳಿಂದ ಮಾತ್ರವಲ್ಲದೇ ಸಮಾಜ ಹಾಗೂ ಅನುಭವಸ್ಥರಿಂದಲೂ ಜ್ಞಾನ ಸಂಪಾದನೆ ಮಾಡುವುದು ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಪಡೆದುಕೊಂಡ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗಲೇ ಧ್ಯೇಯದ ಕಡೆಗೆ ಸಾಗಬಹುದು. ಕಠಿಣ ಪರಿಶ್ರಮದಿಂದ ಗುರಿಯನ್ನು ಸುಲಭವಾಗಿ ಸಾಧಿಸಬಹುದು. ಜೀವನದಲ್ಲಿ ಸಮಾಜ, ಕೆಲಸ ಮತ್ತು ಕುಟುಂಬವನ್ನು ಸಮಾನವಾಗಿ ನಿಭಾಯಿಸುವುದು ಅತ್ಯಗತ್ಯ ಎಂದವರು ಹೇಳಿದರು.
ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕøತಿಕ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ, ಪ್ರೋತ್ಸಾಹ ಧನ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಹಾಗೂ ವಿವಿಧ ವಿಭಾಗದ ಡೀನ್‍ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.