ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ
ಮೂಡುಬಿದಿರೆ: ವಿದ್ಯಾರ್ಥಿ ಜೀವನ ಮುಗಿದ ಕ್ಷಣ ಇದು ಜೀವನದ ಹೊಸ ಆರಂಭದ ಸೂಚನೆ. ಕಲಿತ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಅಭಿವೃದ್ದಿಯ ಹೆಸರಿನಲ್ಲಿ ಇವತ್ತು ನಾವೆಲ್ಲ ಅದರ ಪರಿಕಲ್ಪನೆಯನ್ನು ಅರಿಯದೆ ಅಂದರಾಗಿದ್ದೇವೆ. ವಿಪರೀತ ಪ್ಲಾಸ್ಟಿಕ್ ಬಳಕೆ, ಪರಿಸರನಾಶ, ನದಿಗಳ ಮಲೀನ ಇವುಗಳ ಬಗ್ಗೆ ಜಾಗೃತರಾಗಬೇಕಿದೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ, ಆಡಳಿತ ನಿರ್ದೇಶಕ ಆಲೈನ್ ಸಿ.ಪಿರೇರಾ ಹೇಳಿದರು.
ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿ ಮಾತಾನಾಡಿ, ಪರಿಶ್ರಮ, ಶಿಸ್ತು, ಕಾರ್ಯದಕ್ಷತೆ ಸಾಧನೆ ಸಾಧ್ಯ ಎಂದರು.
ಚಿರ್ಪ್ ಕ್ಲಬ್‍ನ ವತಿಯಿಂದ ವಿದ್ಯಾಥಿಗಳಿಂದ ರಚಿತಾವಾದ ಬುಡ್ಸ್ ಆಫ್ ಶೊಭವನ ಕ್ಯಾಂಪಸ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.