Home Mangalorean News Kannada News ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗದಿಂದ ಅಂತರ್ ವಿಭಾಗ ಮಟ್ಟದ `ಮ್ಯಾಥ್ಸ್ ಫಿಯೆಸ್ಟಾ’2020

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗದಿಂದ ಅಂತರ್ ವಿಭಾಗ ಮಟ್ಟದ `ಮ್ಯಾಥ್ಸ್ ಫಿಯೆಸ್ಟಾ’2020

Spread the love

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗದಿಂದ ಅಂತರ್ ವಿಭಾಗ ಮಟ್ಟದ `ಮ್ಯಾಥ್ಸ್ ಫಿಯೆಸ್ಟಾ’2020

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗದಿಂದ ಅಂತರ್ ವಿಭಾಗ ಮಟ್ಟದ `ಮ್ಯಾಥ್ಸ್ ಫಿಯೆಸ್ಟಾ – 2020’ನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ, ಆಳ್ವಾಸ್ ಪದವಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಮಚ್ಚೆಂದ್ರ, ವಿದ್ಯಾರ್ಥಿಗಳು ತಮ್ಮಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸದಾ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಥಿಂಕ್ ಔಟ್ ಆಫ್ ದಿ ಬಾಕ್ಸ್, ರೈಮ್ ದಿ ವಡ್ರ್ಸ್, ಚಾರಾ ಕ್ರಾವಿಂಗ್, ವಿಡಿಯೋ ಜಂಗ್ಲಿಂಗ್, ಕ್ವೆಸ್ಟ್ ಫಾರ್ ದಿ ಬೆಸ್ಟ್, ಸ್ಟಾರ್ ಆಫ್ ದಿ ಮ್ಯಾಥ್ಸ್ ಫಿಯೆಸ್ಟಾ ಎಂಬ ಸ್ಪರ್ಧೆಗಳನ್ನು ಆಯೋಜಿಸಿದ್ದು, ಸುಮಾರು 150 ಕ್ಕೂ ಅಧಿಕ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಗಳಲ್ಲಿ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕ ದೀಪಕ್, ಕಾರ್ಯಕ್ರಮ ಸಂಯೋಜಕ ವೇದಮೂರ್ತಿ, ವಿದ್ಯಾರ್ಥಿ ಸಂಯೋಜಕಿ ಡಾಲ್ಸಿನ್ ಡಿ’ಸೋಜಾ ಉಪಸ್ಥಿತರಿದ್ದರು.


Spread the love

Exit mobile version