ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ, ವ್ಯಂಗ್ಯಚಿತ್ರಸಿರಿ ಪ್ರಶಸ್ತಿ ; ಗಣೇಶ್ ಸೋಮಯಾಜಿ, ಎಸ್.ತಿಪ್ಪೇಸ್ವಾಮಿ, ಕೆ.ಆರ್.ಸ್ವಾಮಿ ಆಯ್ಕೆ

Spread the love

ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ, ವ್ಯಂಗ್ಯಚಿತ್ರಸಿರಿ ಪ್ರಶಸ್ತಿ ; ಗಣೇಶ್ ಸೋಮಯಾಜಿ, ಎಸ್.ತಿಪ್ಪೇಸ್ವಾಮಿ, ಕೆ.ಆರ್.ಸ್ವಾಮಿ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2018ರ ಅಂಗವಾಗಿ ನಡೆಯುವ ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ ನಡೆಯಲಿದ್ದು, ಮೂರೂ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಮೂವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತ ನೀಡಿ ಗೌರವಿಸಲಿದೆ.

ಪ್ರಶಸ್ತಿಯು 25,000 ನಗದು, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.ಮಂಗಳೂರಿನ ಗಣೇಶ್ ಸೋಮಯಾಜಿ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿಗೆ, ಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹಕ ಎಸ್.ತಿಪ್ಪೇಸ್ವಾಮಿಆಳ್ವಾಸ್ ಛಾಯಾಚಿತ್ರಸಿರಿ ಪ್ರಶಸ್ತಿಗೆ ಹಾಗೂ ವ್ಯಂಗ್ಯಚಿತ್ರ ಪ್ರವೀಣರಾದಶ್ರೀ ಕೆ.ಆರ್.ಸ್ವಾಮಿ ಆಳ್ವಾಸ್ ವ್ಯಂಗ್ಯಚಿತ್ರಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.. ನ.13ರಂದು ಬೆಳಗ್ಗೆ 11ಗಂಟೆಗೆ ವಿದ್ಯಾಗಿರಿಯ ಡಾ.ಎಸ್.ಆಚಾರ್ಯ ಸಭಾಂಗಣದಲ್ಲಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಆಯ್ದ ಛಾಯಾಚಿತ್ರಸಿರಿಯಲ್ಲಿ ಆಯ್ದ ಛಾಯಾಚಿತ್ರಗಳ ಪ್ರದರ್ಶನಗಳೂ ನಡೆಯಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ 2018 ಚಿತ್ರಕಲಾವಿದ, ಗಣೇಶ ಸೋಮಯಾಜಿ
ಗಣೇಶ ಸೋಮಯಾಜಿಯವರುಕಲಾವಿದ, ಕಲಾಶಿಕ್ಷಕ, ಕಲಾಸಂಘಟಕರಾಗಿದ್ದು, ಜಿ.ಡಿ.ಆರ್ಟ್‍ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಮಂಗಳೂರಿನ ರೊಜಾರಿಯೋ ಪ್ರೌಢಶಾಲೆಯಲ್ಲಿಕಲಾಶಿಕ್ಷಕರಾಗಿ ನಾಲ್ಕು ದಶಕಗಳ ಸೇವೆ ಸಲ್ಲಿಸಿ ನಿವೃತ್ತರಾದರು.ಜಲವರ್ಣ, ತೈಲವರ್ಣಗಳಲ್ಲಿ ಭಾವಚಿತ್ರ, ಸಾದೃಶ್ಯಗಳನ್ನು ರಚಿಸಿರುವರು. ಸ್ಥಳದಲ್ಲಿಯೇ ಚಿತ್ರರಚಿಸುವುದರಲ್ಲಿ ನೈಪುಣ್ಯತೆ ಪ್ರದರ್ಶಿಸಿದ್ದಾರೆ.ರಾಜ್ಯ, ಹೊರರಾಜ್ಯಗಳಲ್ಲೂ ಚಿತ್ರ ಪ್ರಾತ್ಯಕ್ಷಿಕೆ, ಕಲಾಶಿಬಿರ-ಕಮ್ಮಟಗಳಲ್ಲಿ ಪಾಲ್ಗೊಂಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ್ದಲ್ಲದೇ ಕರ್ನಾಟಕ ಲಲಿತಕಲಾಅಕಾಡೆಮಿ ಸದಸ್ಯ (1993-96), ಸಂಪನ್ಮೂಲ ಕಲಾವಿದರಾಗಿ, ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ವರ್ಣಚಿತ್ರಕಾರರಾಗಿ ಪ್ರಸಾದ್‍ಆರ್ಟ್‍ಗ್ಯಾಲರಿ, ಆರ್ಟಿಸ್ಟ್ಸ್‍ಕಂಬೈನ್ ಕಲಾಸಂಸ್ಥೆ, ಕರಾವಳಿಚಿತ್ರಕಲಾಚಾವಡಿ (ರಿ) ಸ್ಥಾಪಕ ಅಧ್ಯಕ್ಷರಾಗಿ, ದ.ಕ.ಜಿಲ್ಲೆಯ ಕಲಾಶಿಕ್ಷಕರ ಸಂಘದ ನಿರಂತರ 24 ವರ್ಷಗಳ ಅವಧಿಯಲ್ಲಿ ಅಧ್ಯಕ್ಷರಾಗಿ, ಕಿರಿಯರಿಗೆ ಪ್ರೇರಣೆ ನೀಡಿದ್ದಾರೆ. ಕಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಉತ್ತಮ ಚಿತ್ರಕಲಾವಿದರಾಗುವಂತೆ ಬೆಂಬಲವನ್ನಿತ್ತಿರುವ ಗಣೇಶ ಸೋಮಯಾಜಿಯವರುಕರ್ನಾಟಕ ಸರಕಾರದಚಿತ್ರಕಲಾ ಪಠ್ಯಪುಸ್ತಕರಚನಾ ಸಮಿತಿಯಲ್ಲಿ ಸದಸ್ಯರಾಗಿ ನವಸ್ಪರ್ಶ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿರುವರು.ಹಲವಾರು ಸಾಹಿತ್ಯ ಕೃತಿಗಳಿಗೆ ಮುಖಪುಟ, ಚಿತ್ರರಚನೆ ಮಾಡಿರುವರು.ನೂರಾರುರಾಜ್ಯ, ರಾಷ್ಟ್ರೀಯ ಕಲಾಶಿಬಿರ, ಕಲಾಪ್ರದರ್ಶನಗಳ ಯಶಸ್ವಿ ಸಂಘಟಕರಾಗಿದುಡಿದಿದ್ದಾರೆ.

ಏಕವ್ಯಕ್ತಿ, ಚಿತ್ರಪ್ರದರ್ಶನ ಮತ್ತುರಾಷ್ಟ್ರೀಯಚಿತ್ರಕಲಾ ಶಿಬಿರಗಳಲ್ಲಿ ಕಲಾವೈವಿಧ್ಯತೆಯನ್ನುಗಣೇಶ ಸೋಮಯಾಜಿಯವರು ಅನಾವರಣಗೊಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಎನ್.ಜಿ.ಪಾವಂಜೆದತ್ತಿಕಲಾಪೀಠದ ಸದಸ್ಯರಾಗಿ 20 ವರ್ಷಗಳಿಂದ ಸಲಹೆಗಾರರು. ಈಗಾಗಲೇ ಅತ್ಯತ್ತಮ, ಕಲಾಶಿಕ್ಷಕ (1993), ಸಂದೇಶ ಪ್ರತಿಷ್ಠಾನ ರಾಜ್ಯ ಕಲಾ ಶಿಕ್ಷಕ ಪ್ರಶಸ್ತಿ (2006), ಕರ್ನಾಟಕ ಲಲಿತ ಕಲಾ ಅಕಾಡಮಿಕಲಾವಿದ ಪ್ರಶಸ್ತಿ, ಕಾ.ವಾ.ಆಚಾರ್ಯ ವಿದ್ಯಾರ್ಥಿಟ್ರಸ್ಟ್‍ರಾಜ್ಯ ಪ್ರಶಸ್ತಿಗಳು ಸಂದಿವೆ. ಮೂಡುಬಿದಿರೆಯಜೈನಮಠದತ್ರಿಭುವನತಿಲಕಚೂಡಾಮಣಿಆರ್ಟ್‍ಗ್ಯಾಲರಿಯ ಪ್ರಧಾನ ಸಲಹೆಗಾರರಾಗಿಯೂಚಿತ್ರಕಲಾ ಶಿಬಿರಗಳ ಸಂಯೋಜನೆಯಲ್ಲಿತೊಡಗಿಸಿಕೊಂಡಿದ್ದಾರೆ. ಆಳ್ವಾಸ್ ವರ್ಣವಿರಾಸತ್, ಚಿತ್ರಸಿರಿ ಸಂಯೋಜಕ ಸಲಹಾ ಮಂಡಳಿ ಸದಸ್ಯರಾಗಿ ನಿರಂತರಕಲಾಸೇವೆಯನ್ನು ನೀಡುತ್ತಿರುವಗಣೇಶ ಸೋಮಯಾಜಿಯವರು ಆಳ್ವಾಸ್ ‘ಚಿತ್ರಸಿರಿ’ಗೌರವ ಪ್ರಶಸ್ತಿಗೆ ಭಾಜನರಾಗಿರುವುದು ಹಿರಿಯ ವರ್ಣಚಿತ್ರಕಲಾವಿದರನ್ನು ಗುರುತಿಸಿದಂತಾಗಿದೆ ಎಂದುಡಾ.ಮೋಹನ ಆಳ್ವ ಸಂತಸ ವ್ಯಕ್ತಪಡಿಸಿದ್ದಾರೆ.

ಕೆ.ಆರ್. ಸ್ವಾಮಿಯವರುತಮ್ಮಕಾಲೇಜು ದಿನಗಳಿಂದಲೇ ವ್ಯಂಗ್ಯಚಿತ್ರಗಳನ್ನು ಬರೆಯಲು ಪ್ರಾರಂಭಿಸಿ, ಈವರೆಗೆ ಸುಮಾರು 400000(ನಲವತ್ತು ಸಾವಿರ)ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ಕರ್ನಾಟಕದಎಲ್ಲಾ ದಿನ ಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟಣೆಕಂಡಿದ್ದು, ತಮ್ಮ ಮೊನಚಾದಗೆರೆ, ಶೀರ್ಷಿಕೆಗಳಿಂದ ರಾಜಕೀಯ, ಸಾಮಾಜಿಕ ಹೀಗೆ ಸಮಾಜದಎಲ್ಲಾ ವರ್ಗದಜನರು, ವಸ್ತುಗಳು ಇವರ ವ್ಯಂಗ್ಯಚಿತ್ರಗಳಿಗೆ ಆಹಾರವಾಗಿವೆ. ಓದಿದ್ದುಇಂಜಿನಿಯರಿಂಗ್. ವೃತ್ತಿಯಲ್ಲಿಕರ್ನಾಟಕದ ವಿದ್ಯುತ್ ಮಂಡಳಿಯಲ್ಲಿದ್ದು ಕೊಂಡು ವಿದ್ಯುತ್ ಕಳ್ಳರಿಗೆ ಶಾಕ್ ನೀಡುವ ಮೂಲಕ ದಕ್ಷಅಧಿಕಾರಿ ಎನ್ನಿಸಿಕೊಂಡು ಪ್ರವೃತ್ತಿಯಲ್ಲಿ ಸಮಾಜದ ಅಂಕು ಡೊಂಕುಗಳಿಗೆ ಶಾಕ್ ನೀಡಿಜನರನ್ನುತಿದ್ದುವ ಮಹತ್ಕಾರ್ಯ ಮಾಡಿದ್ದಾರೆ.ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಇಂದಿಗೂ ತಮ್ಮ 78ನೇ ವಯಸ್ಸಿನಲ್ಲೂ ಅದೇಉತ್ಸಾಹದಿಂದ ವ್ಯಂಗ್ಯಚಿತ್ರಗಳನ್ನು ಬರೆಯುತ್ತಾತಮ್ಮ ನಿವೃತ್ತಿಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯುತ್ ಮಂಡಳಿ ಹೀಗೆ ಹಲವಾರು ಸಂಘ-ಸಂಸ್ಥೆ ಗಳಿಂದ ಪ್ರಶಸ್ತಿ ಪಡೆದಿರುವ ಸ್ವಾಮಿಯವರುತಮ್ಮಎರಡು ವ್ಯಂಗ್ಯಚಿತ್ರ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಹುಟ್ಟೂರು ತೀರ್ಥಹಳ್ಳಿಯವರಾದ ಇವರು ಸಧ್ಯ ಬೆಂಗಳೂರಿನಲ್ಲಿ ತಮ್ಮಕುಟುಂಬದಜೊತೆ ನೆಲೆಸಿದ್ದಾರೆ.

ಎಸ್.ತಿಪ್ಪೇಸ್ವಾಮಿಅವರುರಾಷ್ಟ್ರಪತಿಅವರಿಂದ ‘ವಯೋಶ್ರೇಷ್ಠ ಸಮ್ಮಾನ್’ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಸಾಧನ ಶೀಲ ಖ್ಯಾತ ವನ್ಯಜೀವಿ ಛಾಯಾಗ್ರಾಹಕ.ತಿಪ್ಪೇಸ್ವಾಮಿಅವರ ಸಾಧನೆಪರಿಗಣಿಸಿ ಫೋಟೊಗ್ರಾಫಿಕ್ ಸೊಸೈಟಿಆಫ್‍ಅಮೆರಿಕ ಕಳೆದ ವರ್ಷಅವರನ್ನು5ಣh iಟಿ ಣhe ತಿoಡಿಟಜ’ಎಂದು ಗೌರವಿಸಿತ್ತು.ತಿಪ್ಪೇಸ್ವಾಮಿ 11 ಬಾರಿ ವಿಶ್ವಕಪ್ ವನ್ಯಜೀವಿ ಛಾಯಾಗ್ರಹಣಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಾಲ್ಕು ಬಾರಿ ವಿಶ್ವಕಪ್ ಪಡೆದಿದ್ದಾರೆ. ಅವರಿಗೆ ಪ್ರತಿಷ್ಠಿತಅಂತಾರಾಷ್ಟ್ರೀಯ ಗೌರವಗಳು ಸಂದಿವೆ.
* ಇಂಗ್ಲೆಂಡ್‍ರಾಯಲ್ ಫೋಟೊಗ್ರಫಿಕ್ ಸೊಸೈಟಿ ಫೆಲೋಶಿಪ್
* ದಿ ರಾಯಲ್ ಫೋಟೊಗ್ರಫಿಕ್ ಸೊಸೈಟಿಆಫ್‍ಗ್ರೇಟ್ ಬ್ರಿಟನ್ ಲಂಡನ್ ಫೆಲೋಶಿಪ್
* ಅಮೆರಿಕದಇಮೇಜ್‍ಕೊಲೀಗ್ ಸೊಸೈಟಿಗೌರವ
* ದಿ ಫೋಟೊಗ್ರಫಿ ಸೊಸೈಟಿಆಫ್‍ಅಮೆರಿಕ ಫೆಲೋಶಿಪ್
* ಫ್ರಾನ್ಸ್‍ಎಕ್ಸಲೆನ್ಸೀ ಫೆಡರೇಷನ್‍ಇಂಟರ್ ನ್ಯಾಷನಲ್‍ಆರ್ಟ್ ಫೋಟೊಗ್ರಫಿಗೌರವ

ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ರಾಜ್ಯದಎಲ್ಲಾ ವಿವಿಗಳಲ್ಲಿ ಅವರುಅತಿಥಿಉಪನ್ಯಾಸಕರಾಗಿಕಾರ್ಯನಿರ್ವಹಿಸಿದ್ದಾರೆ.ಅವರ ಹತ್ತಾರುಶಿಷ್ಯಂದಿರು ಮಾಧ್ಯಮಗಳಲ್ಲಿ, ವನ್ಯಜೀವಿ ಛಾಯಾಗ್ರಹಣದಲ್ಲಿ ಸಕ್ರಿಯರಾಗಿದ್ದಾರೆ.ಭಾರತದ ಹೆಮ್ಮೆಯ ವನ್ಯಜೀವಿ ಛಾಯಾಗ್ರಾಹಕರಾದತಿಪ್ಪೇಸ್ವಾಮಿಅವರಿಗೀಗ 75 ವರ್ಷ.ಸದ್ಯಮೈಸೂರಿನಲ್ಲಿ ನೆಲಸಿದ್ದಾರೆ.


Spread the love