ಶತಮಾನದ ನಮನ-ಡಿ ದೇವರಾಜ ಅರಸು- ಬಿ ಎಲ್ ಶಂಕರ
ಮೂಡಬಿದಿರೆ: ತಲೆಯಲ್ಲಿ ಮಲಹೊರುವ ಪದ್ಧತಿಯನ್ನು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಿಲ್ಲಿಸಿ, ಭೂ ಸುಧಾರಣೆ ಚಳುವಳಿ ಪ್ರಾರಂಭ ಮಾಡಿದ ದೇವರಾಜ ಅರಸರು ಭಾರತದಲ್ಲಿ ಸಾರ್ವಕಾಲಿಕ ಮಾದರಿ ರಾಜಕರಣಿಯಾಗಿ ಮಿಂಚಿದವ ಎಂದು ಬಿ. ಎಲ್ ಶಂಕರ್ ತಿಳಿಸಿದರು. ಅವರು ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-2016 ರ ಎರಡನೇ ದಿನದ ‘’ಶತಮಾನದ ನಮನ ಡಿ. ದೇವರಾಜ್ ಅರಸು’’ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಹಳ್ಳಿಗಳಲ್ಲಿ ಯಾರು ಸೋಮಾರಿಗಳಾಗ ಬಾರದು ಎಂಬ ಸದ್ದೂದೇಶದಿಂದ ನಿರುದ್ಯೋಗಿಗಳಿಗೆಲ್ಲ ಉಪಹಾರ ಗೃಹದಲ್ಲಿ ಕೆಲಸ ಕೊಡಿಸಿ ಮಾನವ ಕಲ್ಯಾಣ ಮಾಡಿದ ಪ್ರಾಮಣಿಕವಾಗಿ ರಾಜಕಾರಣಿ ಎಂದು ತಿಳಿಸಿದರು. ದಲಿತ ಸಾಹಿತ್ಯ ಹಾಗೂ ಹಿಂದುಳಿದ ಸಾಹಿತ್ಯ ಮುಂಚೂಣಿಗೆ ಬರುವಂತೆ ಮಾಡಿದುದರಲ್ಲಿ ದೇವರಾಜ್ ಅರಸರ ಕಾರ್ಯ ಶ್ಲಾಘನೀಯ ಎಂದು ತಿ ಳಿಸಿದರು. ಖಾಸಗಿಯಾಗಿ ಬಡ್ಡಿ ವ್ಯವಹಾರ ಮಾಡುವವರಿಗೆ ಕಡಿವಾಣ ಹಾಕುವಂತಹ ಕೆಲಸ ಮಾಡಿದ ದೇವರಾಜ ಅರಸರದ್ದು ಭಾರತದಲ್ಲಿ ಶತಮಾನ ಕಳೆದರು ನೆನಪು ಮಾಡುವಂತಹ ವ್ಯಕ್ತಿತ್ವ ಅವರದ್ದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷರಾದ ಡಾ. ಬಿ ಎನ್ ಸುಮಿತ್ರಾ ಬಾಯಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಮೋಹನ್ ಆಳ್ವ ಹಾಗೂ ನಾ.ದ ಶೆಟ್ಟಿ ಉಪಸ್ಥಿತರಿದ್ದರು. ಸದಾಶಿವ ನಿರೂಪಿಸಿದರು
ಶತಮಾನದ ನಮನ: ಡಾ ದೇ.ಜವರೇಗೌಡ: ಎರಡನೇ ದಿನದ ಆಳ್ವಾಸ್ ನುಡಿಸಿರಿಯಲ್ಲಿ ಡಾ. ದೇ ಜವರೇಗೌಡರ ಶತಮಾನದ ನಮನ ಕಾರ್ಯಕ್ರಮವನ್ನು ಕನ್ನಡ ಪ್ರಾಧ್ಯಪಕ ಹಾಗೂ ಪ್ರಾಚಾರ್ಯರಾದ ಡಾ. ಸಿ. ಪಿ ಕೃಷ್ಣ ಕುಮಾರ್ ನೆರವೇರಿಸಿದರು.
ಕನ್ನಡದ ಶತಪುರುಷರೆಂದೇ ಹೆಸರಾಗಿರುವ ಇವರು ಚೆನ್ನರಾಯ ಪಟ್ಟಣದ ಒಂದು ಕುಗ್ರಾಮದಲ್ಲಿ ಜನಿಸಿದರು. ಇವರು ತಮ್ಮ ವೈಯಕ್ತಿಕ ಜೀವನ ಹೋರಾಟದ ನಡುವೆಯೂ ಕನ್ನಡ ಪರವಾದ ಪ್ರಬಲ ಹೋರಾಟರಾಗಿ ಗುರುತಿಸಿಕೊಂಡವರು. ಕನ್ನಡಕ್ಕೆ ತನ್ನದೆ ಆದ ಮಹಾವೃತ್ತವಿದ್ದು ಅದು ತ್ರಿಕೋನ ಆಕೃತಿಯಲ್ಲಿ ಕನ್ನಡ, ಕಾಯಕ, ಹಾಗೂ ಹೋರಾಟ ಎಂಬ ಮೂರು ವಿಭಾಗವಾಗಿದೆ. ಅಷ್ಟೇ ಅಲ್ಲದೆ ಇವರೊಬ್ಬ ಉತ್ತಮ ಆಡಳಿತಗಾರ, ಶಿಕ್ಷಣತಜÐ, ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ. ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದಾ ಇವರು ಕನ್ನಡಕ್ಕೆ ಶ್ರೇಷ್ಠ ಸ್ಥಾನಮಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಕಾರ್ಯಕ್ರಮದ ನಿರೂಪಣೆಯನ್ನು ಆಳ್ವಾಸ್ ಪದವಿ ಕಾಲೇಜಿನ ಪದವಿ ವಿಬಾಗದ ಟಿ. ಎನ್. ಎ. ಖಂಡಿಗೆ ಯವರು ನಡೆಸಿಕೊಟ್ಟರು
ಕರಾವಳಿ ವಿಕೀಮೀಡಿಯನ್ನರ ಸಂಘ ಉದ್ಘಾಟನೆ
ಮೂಡಬಿದರೆ : ಆಳ್ವಾಸ್ ನುಡಿಸಿರಿ 2016ರ ಸಮ್ಮೇಳನದ ಎರಡನೆ ದಿನವಾದ ಇಂದು ತುಳು ವಿಕಿಪೀಡಿಯ ಉದ್ಗಾಟಿಸಿ ಮಾತನಾಡಿದ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾ ತುಳು ಭಾಷೆ ಕೆಲವೇ ಜನರ ಮಾತೃ ಭಾಷೆಯಾಗಿದ್ದರು ಅದನ್ನು ಯಾವುದೆ ಜಾತಿ ಧರ್ಮ ಎನ್ನದೆ ಬಳಕೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ, ಮಾತೃ ಭಾಷೆಯಲ್ಲದಿದ್ದರು ಸಹ ತುಳು ಭಾಷೆಯನ್ನು ಸುಲಲಿತವಾಗಿ ಆಡು ಭಾóಷೆಯಾಗಿ ಬಳಕೆ ಮಾಡುತ್ತಿದ್ದಾರೆ, ತುಳು ಭಾಷೆಯು ಬ್ಯಾರಿ, ಕೊಂಕಣಿಯೊಂದಿಗೆ ಒಂದು ಅವಿಭಾಜ್ಯ ಅಂಗವಾಗಿ ಬೇರೆತಿರುವುದ್ದನ್ನು ಕಾಣಬಹುದು, ಇಂದಿನ ನುಡಿಸಿರಿಯ ಮೂಲ ಪರಿಕಲ್ಪನೆಯಾಗಿರುವ ‘ನಾಳೆಗಳ ನಿರ್ಮಾಣಕ್ಕೆ’ ಸೂಕ್ತ ಎಂಬಂತೆ ತುಳು ವಿಕಿಪೀಡಿಯ ತಂತ್ರಜಾÐವನ್ನು ಪ್ರಾರಂಭಿಸಿರುವುದು ಸಂತೊಷವಾಗಿದೆ ಮುಂದೆ ಕ್ರಾಂತಿಕಾರ ಬದಲಾವಣೆ ತರಬಹುದು. ತುಳುಭಾಷೆ ಲಿಪಿಯನ್ನು ಹೊಂದಿದ್ದರು ಸಹ ಆಡು ಭಾಷೆಯಾಗಿಯೇ ಪ್ರಚಲಿತವಾಗಿದೆ. ತುಳು ವಿಕಿಪೀಡಿಯ ಬಳಕೆಯಿಂದ ನಾಳೆಯ ಪೀಳಿಗೆಯಲ್ಲಿ ತುಳು ಭಾಷೆಯಲ್ಲಿ ಬಹು ದೊಡ್ಡ ಬದಲಾವಣೆ ಕಾಣಬಹುದು ಎಂದರು.
ತುಳು ವಿಕಿಪೀಡಿಯದ ನಿರ್ವಾಹಕರಾದ ಡಾ. ಯು.ಬಿ ಪವನಜರವರು ಮಾತನಾಡಿ ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳದ ಉತ್ತರ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಭಾಷೆಗಳ ವಿಕಿಪೀಡಿಯ ಮತ್ತು ಸಂಬಂಧಿತ ಇತರೆ ಯೋಜನೆಗಳ ಕೆಲಸ ಮಾಡುವ ಒಂದು ಸಂಘವಾಗಿದೆ. ವಿಕಿಪೀಡಿಯ ಕನ್ನಡ, ಕೊಂಕಣಿ, ತುಳು ಈ ಮೂರು ಭಾಷೆಯಲ್ಲಿ ಲಭ್ಯವಿದೆ. ಕೊಂಕಣಿ ಮತ್ತು ತುಳು ವಿಕಿಪೀಡಿಗಳು ಇತ್ತಿಚೀಗೆ ಜೀವಂತವಾಗಿದೆ. ಇದ್ದಕ್ಕೆ ಯಾರು ಬೇಕಾದರೂ ಸದಸ್ಯರಾಗಬಹುದು ತುಳು ಭಾಷೆಯನ್ನು ಶಾಲೆಗಳಲ್ಲಿ ಕಲಿಸಲಾಗುತ್ತಿದೆ ಆದರೆ ಈ ಭಾಷೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಓದಲು ಒಂದೇ ಒಂದು ವಿಶ್ವಕೋಶವಿಲ್ಲ, ತುಳು ವಿಕಿಪೀಡಿಯ ಈ ಕೊರತೆಯನ್ನು ತುಂಬುವ ಕಾರ್ಯಮಾಡಬೇಕಿದೆ. ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಇದು ಒಂದು ಅಂತರಜಾಲಾಧಾರಿತ ಸಂಘ, ಇದಕ್ಕೆ ಯಾವುದೆ ಸದಸ್ಯತ್ವ ಶುಲ್ಕವಿಲ್ಲ ಆಸಕ್ತಿ ಹೊಂದಿದವರು ಸದಸ್ಯರಾಗಬಹುದು ಎಂದು ಹೇಳಿದರು ಉದ್ಘಾಟನ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಮೌಲ್ಯ ಜೀವನ್ ರಾಮ್ ಹಾಗೂ ಉಪನ್ಯಾಸಕರಾದ ಶ್ರೀನಿವಾಸ ಪೆಜತ್ತಾಯ, ಪ್ರಸಾದ ಶೆಟ್ಟಿ, ದೇವಿಶ್ರೀ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶೇಷೋಪನ್ಯಾಸ: ಶಿಕ್ಷಣ-ಡಾ ಮೋಹನ್ ಆಳ್ವ
ಸರಕಾರಿ ಶಾಲೆಯೇ ಇರಲಿ ಅಥವಾ ಖಾಸಗಿ ಶಾಲೆಯೇ ಇರಲಿ ಅವುಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಿ ಏಕರೂಪ ಶಿಕ್ಷಣ ನೀತಿಯನ್ನು ತರಬೇಕಿದೆ. ಈ ಎರಡೂ ವ್ಯವಸ್ಥೆಗಳ ಗೊಂದಲಗಳು ನಿರ್ಮಿಸುವ ಕಂದರಗಳನ್ನು ದಾಟುವುದು ಎಲ್ಲ ವಿದ್ಯಾರ್ಥಿಗಳಿಗೂ ಸಾಧ್ಯವಿಲ್ಲ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳಾಗಬೇಕಿದೆ. ದೇಸೀ ಚಿಂತನೆಗಳಿಗೆ ಒತ್ತು ಕೊಟ್ಟು ಅದನ್ನು ಅನುಷ್ಠಾನಗೋಳಿಸುವ ಗಟ್ಟಿತನ ನಮ್ಮ ನಾಯಕರಿಗೆ ಬೇಕಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ-2016ರಲ್ಲಿ ಶಿಕ್ಷಣದ ಕುರಿತು ವಿಶೇಷೋಪನ್ಯಾಸ ನೀಡಿದ ಅವರು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಕೆಲವು ಮಹತ್ವದ ಸಂಗತಿಗಳನ್ನು ವಿಶ್ಲೇಷಿಸಿದರು. ಇಂದು ಹೊರರಾಜ್ಯದ ಐಎಎಸ್ ಅಧಿಕಾರಿಗಳ ಜೊತೆಗೆ ಎಸಿ ರೂಮಿನಲ್ಲಿ ಚರ್ಚೆ ಮಾಡಿ ನಮ್ಮ ರಾಜ್ಯದ ಶಿಕ್ಷಣ ನೀತಿಗಳನ್ನು ರೂಪಿಸಲಾಗುತ್ತಿದೆ. ಆದರೆ ಇದು ಖಂಡಿತವಾಗಿಯೂ ಅನಪೇಕ್ಷಣೀಯ ಸಂಗತಿ. ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ ಅನುಭವಿಗಳ ಜೊತೆಗೆ ಚರ್ಚಿಸಿ ನಮ್ಮ ರಾಜ್ಯಕ್ಕೆ ಬೇಕಾದ ಪ್ರಬಲ ಶಿಕ್ಷಣ ನೀತಿಗಳನ್ನು ರೂಪಿಸುವ ಅವಶ್ಯಕತೆ ಖಂಡಿತಾ ಇದೆ. ಮಕ್ಕಳಲ್ಲಿ ಕ್ಷೀಣಿಸುತ್ತಿರುವ ಒಳ್ಳೆಯ ಗುಣಗಳು, ಹವ್ಯಾಸಗಳು ಹಾಗೂ ಸಂಬಂಧದ ಮೌಲ್ಯಗಳನ್ನು ಮತ್ತೆ ಪುನರ್ನಿರ್ಮಿಸುವ ಶಿಕ್ಷಣ ಜಾರಿಗೆ ಬರಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಿದ ಡಾ. ಆಳ್ವ, ನಮ್ಮ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಮೊದಲು ಬಲಪಡಿಸಬೇಕು. ಹಾಗಾದಾಗ ಮಾತ್ರ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಯಾಗಿಸಲು ಸಾಧ್ಯ. ಕನ್ನಡ ಮಾಧ್ಯಮ ಶಾಲೆಗಳ ಪರಿಸ್ಥಿತಿ ಇಂದು ತುಂಬಾ ಚಿಂತಾಜನಕವಾಗಿದೆ. ಈ ಮಾಧ್ಯಮದ ಮಹತ್ವವನ್ನು ಅರಿಯಲು ಸೋಲುತ್ತಿರುವ ಸರಕಾರಗಳು ಹಾಗೂ ಪಾಲಕರೇ ಇದಕ್ಕೆ ಹೊಣೆಗಾರರಾಗುತ್ತಾರೆ. ಸಿಬಿಎಸ್ಇ ಶಾಲೆಗಳ ಮೇಲಿನ ವ್ಯಾಮೋಹ ಕನ್ನಡ ಶಾಲೆಗಳನ್ನು ಈ ಪರಿಸ್ಥಿತಿಗೆ ದೂಡಿವೆ. ಸಿಬಿಎಸ್ಇ ಶಾಲೆಗಳನ್ನು ಆರಂಭಿಸಿದ್ದು, ಕೇಂದ್ರ ಸರಕಾರದಿಂದ ಪದೇ ಪದೇ ವರ್ಗಾವಣೆಗೊಳ್ಳುತ್ತಿದ್ದ ನೌಕರರ ಮಕ್ಕಳ ಶಿಕ್ಷಣದ ಅಗತ್ಯತೆಯನ್ನು ಪೂರೈಸಲು. ಆದರೆ ಈ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡಿರುವ ಒಂದು ವರ್ಗದ ಜನರು ಸಿಬಿಎಸ್ಇ ಶಾಲೆಗಳನ್ನು ಒಂದು ದಂಧೆಯಾಗಿ ಮಾಡಿಕೊಂಡಿವೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದರು.
ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಅದ್ಭುತವಾದುದನ್ನು ಸಾಧಿಸುವ ಸಾಮಥ್ರ್ಯವಿದೆ ಎಂದ ಡಾ. ಮೋಹನ್ ಆಳ್ವ, ಪದವಿಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ವಿದ್ಯಾರ್ಥಿಗಳು ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಯನ್ನೂ ಮೀರಿಸುತ್ತದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು. ಸಿಬಿಎಸ್ಇ ಹಾಗೂ ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ದೊಡ್ಡ ಅಸಮಾನತೆಗಳು ವಿದ್ಯಾರ್ಥಿಗಳ ಸಾಧನೆಯನ್ನು ಬುಡಮೇಲುಗೊಳಿಸಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಪದವಿ ಹಂತದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದಾಗ ಅಲ್ಲಿ ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಹಾಗೂ ಡೀಮ್ಡ್ ವಿಶ್ವ ವಿದ್ಯಾಲಯಗಳ ಆಟಾಟೋಪಗಳು ಹೆಚ್ಚಿವೆ. ಇಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುವುದರಿಂದ ಸರಕಾರ ಈ ವಿಷಯದತ್ತ ಗಂಭೀರ ಗಮನ ಹರಿಸಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಖಂಡಿತ ಭೇಕು ಆದರೆ ಅವುಗಳೆಲ್ಲವನ್ನೂ ಒಂದೇ ಚೌಕಟ್ಟಿನಡಿಯಲ್ಲಿ ತರುವ ಅವಶ್ಯಕತೆಯಿದೆ ಎಂದರು.
ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ, ಸೈಕಲ್ ವಿತರಣೆ ಕೇವಲ ಚುನಾವಣಾ ಪ್ರಚಾರ ತಂತ್ರಗಳು. ಸರಕಾರಕ್ಕೆ ಶಿಕ್ಷಣ ವ್ಯವಸ್ಥೆಯ ಮೇಲೆ ಗೌರವವಿದ್ದರೆ, ಡೀಮ್ಡ್ ಯುನಿವರ್ಸಿಟಿಗಳನ್ನು ತೆಗೆದುಹಾಕುವ ತಾಕತ್ತನ್ನು ತೋರಿಸಲಿ ಎಂದು ಸರಕಾರಕ್ಕೆ ಸವಾಲೆಸೆದರು.
ಆಳ್ವಾಸ್ ಕುಸ್ತಿಸಿರಿ: ರಾಜ್ಯ ಮಟ್ಟದ ಮುಕ್ತ ಪುರುಷರ ಹಾಗೂ ಮಹಿಳೆಯರ ಕುಸ್ತಿಪಂದ್ಯಾಟವು ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ ಅತ್ಯಂತ ರೋಮಂಚನಕಾರಿಯಾಗಿ ನಡೆಯಿತು. ಈ ಕುಸ್ತಿ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಪ್ರಶಸ್ತಿಗಾಗಿ ಜಿದ್ದಾ ಜಿದ್ದಿನ ಹೋರಾಟ ನಡೆಸಿದರು. ನುಡಿಸಿರಿ ಇತಿಹಾಸದಲ್ಲಿಯೆ ಪ್ರಥಮ ಬಾರಿಗೆ ಏರ್ಪಡಿಸಿದ ಕುಸ್ತಿ ಪಂದ್ಯಾಟ ಮುಖ್ಯ ಆಕರ್ಷಣೆಯಾಗಿತ್ತು. ಕ್ರೀಡಾ ಪ್ರೇಮಿಗಳು ತುದಿಗಾಲಿನಲ್ಲಿ ನಿಲ್ಲುವಂತಹ ರೋಚಕ ಕ್ಷಣಗಳು ಕಂಡು ಬಂದವು. ಅನುಭವಿ ಕ್ರೀಡಾಪಟುಗಳು ತಮ್ಮ ಚಾಣಾಕ್ಷತನ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಣಬಹುದಾದಂತಹ ರೋಚಕ ಕ್ಷಣಗಳಿಗೆ ಹರಿದಾಸ ಭಟ್ಟವೇದಿಕೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳು, ಹಿರಿಯರು, ಹಾಗೂ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕುಸ್ತಿ ಸಿರಿಯ ವೈಭವನ್ನು ಸವಿದರು. ಬಾಲಕಿಯರ ಕಲಾತ್ಮಕ ಶೈಲಿಯ ಪ್ರದರ್ಶನ ವೀಕ್ಷಕರ ಹೃದಯ ಬಡಿತವನ್ನು ಹೆಚ್ಚಿಸಿತು.
ಕುಸ್ತಿ ಸಿರಿಯಲ್ಲಿ ಅತ್ಯಂತ ಪ್ರಮುಖವಾದ ಪ್ರಶಸ್ತಿಗಳಾದ ಆಳ್ವಾಸ್ ನುಡಿಸಿರಿ ಕೇಸರಿ 2016, ಪುರುಷರ ವಿಭಾಗದಲ್ಲಿ ಆಳ್ವಾಸ್ ನುಡಿಸಿರಿ ಕುಮಾರ 2016, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ನುಡಿಸಿರಿ ಕುಮಾರಿ 2016 ಪ್ರಶಸ್ತಿಯನ್ನು ನಿಗದಿ ಪಡಿಸಲಾಗಿತ್ತು. ಕುಸ್ತಿ ಪಂದ್ಯಾಟದ ಮುಖ್ಯ ಆಕರ್ಷಣೆಯಾಗಿ ದೇಶದ ಸಿಪಾಯಿ ಹುದ್ದೆ ಹಾಗೂ ವಿವಿಧ ರಂಗದಲ್ಲಿ ಉದ್ಯೋಗದಲ್ಲಿರುವ ಆಟಗಾರರು ಭಾಗವಹಿಸಿ ವೀಕ್ಷಕರಿಗೆ ಕುಸ್ತಿಯ ರಸದೌತಣವನ್ನು ನೀಡಿದರು. ಅಂತಿಮವಾಗಿ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ನುಡಿಸಿರಿ ಕೇಸರಿಯನ್ನು ಎಸ್ ಟಿ ಸಿ ಧಾರವಡದ ರಿಯಾಝ್ ಆರ್ ಮುಲ್ಲಾ ಪಡೆದರೆ ಬೆಂಗಳೂರಿನ ಎಮ್ ಇ ಜಿಯ ನಾಗರಾಜ್ ಎನ್ ಆಳ್ವಾಸ್ ನುಡಿಸಿರಿ ಕುಮಾರ ಹಾಗೂ ಆಳ್ವಾಸ್ ನುಡಿಸಿರಿ ಕುಮಾರಿ ಪ್ರಶಸ್ತಿಯನ್ನು ಆಳ್ವಾಸ್ನ ಆತ್ಮಶ್ರೀಯವರು ಪಡೆದುಕೊಂಡರು.
ಸಾಂಸ್ಕøತಿಕ ಕರ್ನಾಟಕದ ನಾಳೆಗಳು: ಕೆ.ಚಿನ್ನಪ್ಪಗೌಡ
ಆಳ್ವಾಸ್ ನುಡಿಸಿರಿ-2016ರ ವಿಚಾರಗೋಷ್ಠಿಂiÀiಲ್ಲಿ ಕೆ. ಚೆನ್ನಪ್ಪಗೌಡ ಇವರು ಸಾಂಸ್ಕøತಿಕ ಕರ್ನಾಟಕದ ನಾಳೆಗಳ ನಿರ್ಮಾಣದ ಕುರಿತು ಮಾತನಾಡಿದರು. ಸಾಂಸ್ಕøತಿಕ ಕರ್ನಾಟಕದ ಭವಿಷ್ಯಗಳ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ ಮನಸ್ಸನ್ನು ಕಟ್ಟುವ ಅನೇಕ ಚರ್ಚೆಗಳ ಕಾರ್ಯ ನಡೆಸಬೇಕು.
ಶಿಕ್ಷಣ, ಭಾಷೆ, ಆಂಶಿಕವಾಗಿ ಹಾಗೂ ಪೂರ್ಣ ಪ್ರಮಾಣವಾಗಿ ಮಂಡಿಸುತ್ತಾ ಬಂದಿದೆ. ಸಂಸ್ಥೆಯ ಅಧ್ಯಕ್ಷರು ಡಾ. ಎಂ ಮೋಹನ್ ಆಳ್ವ ಅವರು ಕನ್ನಡ ಮನಸ್ಸು ಎಂಬ ಪದವನ್ನು ಅಥವಾ ಧಾತುವನ್ನು ನುಡಿಸಿರಿಯ ಮೂಲಕ ತಂದರು. ನುಡಿಸಿರಿಯು ಸಾಂಸ್ಕøತಿಕ ಜಗತ್ತನ್ನೇ ಸೃಷ್ಠಿ ಮಾಡಿದೆ. ಸಾಂಸ್ಕøತಿಕ ಕರ್ನಾಟಕದಲ್ಲಿ ರೂಪುಗೊಳ್ಳಬೇಕಾದ ಶಕ್ತಿಗಳು ಯಾವುದೆಂದರೆ ಶಿಕ್ಷಣ ಮತ್ತು ಮಾಧ್ಯಮ. ನಾಳೆಗಳ ಬಗ್ಗೆ ಮಾತನಾಡುವಾಗ ಸಮಸ್ಯೆಗಳನ್ನು ಹಾಗೂ ಲೋ¥ದೋಷಗಳನ್ನು ಎತ್ತಿಹಿಡಿಯುತ್ತಾರೆ. ಶ್ರೀ ವಿಜಯ ಬರೆದಿರುವ ಕವಿರಾಜ ಮಾರ್ಗದಲ್ಲಿ ಸಾಂಸ್ಕøತಿಕ ಕರ್ನಾಟಕದ ವಿಚಾರ ಬಂದಿರುತ್ತದೆ. ಏಕರೂಪತೆ ನಾಶಕ್ಕೆ ಕಾರಣವಾಗಿರುತ್ತದೆ. ಸಾಂಸ್ಕøತಿಕ ಕರ್ನಾಟಕ, ಸಾಂಸ್ಕøತಿಕ ಶಕ್ತಿಗಳಾಗಿ ರೂಪುಗೊಳ್ಳಬೇಕು. ಕನ್ನಡದ ಮನಸ್ಸು ಯಾವಾಗ ನೆಲದ ಜೊತೆಗೆ ಸಂಬಂಧ ಬೆಳೆಸುತ್ತದೆಯೋ ಆಗ ಅದು ಸಾಂಸ್ಕøತಿಕ ಕರ್ನಾಟಕವಾಗುತ್ತದೆ. ಕನ್ನಡದ ಮನಸ್ಸು ನೆಲದ ಮೇಲೆ ನಿಲ್ಲುವಂತೆ ಮಾಡಬೇಕು. ಇದು ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಬಾರದು. ಸಾಂಸ್ಕøತಿಕ ಕರ್ನಾಟಕದ ಬಹುತ್ವ ಉಳಿದುಕೊಳ್ಳಬೇಕಾದರೆ ಸ್ಪರ್ಧೆ ಮುಖ್ಯ ಅಲ್ಲ, ಪ್ರದರ್ಶನ ಮುಖ್ಯ ಎಂದು ಕೆ. ಚಿನ್ನಪ್ಪಗೌಡ ತಿಳಿಸಿದರು.
ಸ್ಪರ್ಧೆ ಜಗತ್ತಿನಲ್ಲಿ ಅಸೂಯೆಯನ್ನು ಹುಟ್ಟು ಹಾಕುತ್ತದೆ. ಸಾಂಸ್ಕøತಿಕ ಸ್ಪರ್ಧೆಗಳ ನೆಲೆಯಲ್ಲಿ ಶೈಕ್ಷಣಿಕ ನೆಲೆಯಾಗಿ, ಮಕ್ಕಳ ಸೃಜನಶೀಲತೆಯಲ್ಲಿ ಸಾಂಸ್ಕøತಿಕ ಕರ್ನಾಟಕ ತನ್ನ ಪಾತ್ರವಹಿಸುತ್ತದೆ. ಅಬ್ರಹಾಂ ಲಿಂಕನ್ ಹೇಳಿರುವಂತೆ ಮಗನಿಗೆ ಸೋಲುವುದನ್ನು ಕಲಿಸಿ, ಅಕ್ರಮ ವಿಧಾನಗಳಿಂದ ಸೋಲು ಎಷ್ಟು ಶ್ರೇಯಸ್ಸುಕರ ಎಂದು ಕಲಿಸಬೇಕು. ಮಾಧ್ಯಮಗಳು ಮಾಧ್ಯಮಗಳಾಗದೆ ಅದು ಇಂದು ಉದ್ಯಮವಾಗಿದೆ. ಸಾಂಸ್ಕøತಿಕ ಕರ್ನಾಟಕವು ಕಲೆಗಳನ್ನು ಪಡೆದುಕೊಂಡಿದೆ. ಜಾನಪದ ಕಲೆ ಮನೋರಂಜನೆಗಾಗಿ ಸಾಂಸ್ಕøತಿಕ ಕರ್ನಾಟಕದಲ್ಲಿ ದಾಖಲೀಕರಣ ಮುಖ್ಯವಾಗಿ ಆಗಬೇಕಾದುದು. ಯಕ್ಷಗಾನದ ಸಂಪೂರ್ಣ ಮಾಹಿತಿ ಕೊಡುವ ಕೇಂದ್ರ ಇಲ್ಲದಿರುವುದು ದುಃಖದ ವಿಚಾರ. ಬೆಳ್ತಂಗಡಿ 90 ಗ್ರಾಮಗಳಲ್ಲಿ 90 ಕಥೆಗಳು ಸಿಗುತ್ತದೆ. ಇದಕ್ಕಾಗಿ ಕರ್ನಾಟಕ ಫೋಕ್ಪ್ಲೋರ್ ಸಂಸ್ಥೆ ಸ್ಥಾಪನೆ ಮಾಡಬೇಕು ಎಂದು ಹೇಳಿದರು.
ಸರ ಸರನೆ ಏರಿದ ಕೋತಿರಾಜ್
ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನದ ವಿಶೇಷಕ್ಕೆ ಇನ್ನೊಂದು ಅಚ್ಚರಿ ಸೇರ್ಪಡೆಯಾಗಿತ್ತು. ಅದು ಕೋತಿರಾಜ್ ಅವರ ಆಗಮನ. ಕೋತಿರಾಜ್ ಎಂದೇ ಪ್ರಖ್ಯಾತರಾದ ಚಿತ್ರದುರ್ಗದ ಜ್ಯೋತಿರಾಜ್ ಆಲಿಯಾಸ್ ಕೋತಿರಾಜ್ ಆಳ್ವಾಸ್ ಆಯುರ್ವೇದ ಕಾಲೇಜಿನ ಮುಗಿಲೆತ್ತರದ ಕಟ್ಟಡವನ್ನು ಏರುತ್ತಾ ಹೋದಾಗ ಸೇರಿದ್ದ ನೂರಾರು ಜನ ಒಮ್ಮೆಗೇ ಚಕಿತಗೊಂಡರು.
ಕೋತಿರಾಜ್ಗೆ 27 ಮಂದಿ ಶಿಷ್ಯರಿದ್ದಾರಂತೆ. ಅವರಲ್ಲಿ ಹಲವರು ಮಿಲಿಟರಿ ಮತ್ತು ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಇವರ ಜತೆ ಇನ್ನೂ ಇಬ್ಬರು ಮಕ್ಕಳು ಆಗಮಿಸಿದ್ದಾರೆ. ಅವರಿಬ್ಬರೂ ಕೋತಿರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಕೇವಲ ಆಳ್ವಾಸ್ನ ಸಂಸ್ಕøತಿ ಉತ್ಸವವಲ್ಲ. ಇದು ಕರ್ನಾಟಕದ ಸಾಂಸ್ಕøತಿಕ ಹಬ್ಬ ಎಂದು ಬಣ್ಣಿಸಿದರು ಕೋತಿರಾಜ್.
ಕಲೆ ಮತ್ತು ಮಾಧ್ಯಮ-ನಾಳೆಗಳ ನಿರ್ಮಾಣ
ಮೂಡುಬಿದಿರೆ, ನವೆಂಬರ್19: ಆಳ್ವಾಸ್ ನುಡಿಸಿರಿ ಎರಡನೇ ದಿನ `ಕಲೆ ಮತ್ತು ಮಾಧ್ಯಮ-ನಾಳೆಗಳ ನಿರ್ಮಾಣ’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು. ಡಾ.ಎಂ.ಎಸ್. ಮೂರ್ತಿ ಹಾಗೂ ರವಿ ಹೆಗಡೆ ತಮ್ಮ ವಿಚಾರಗಳನ್ನು ಈ ಗೋಷ್ಠಿಯಲ್ಲಿ ಮಂಡಿಸಿದರು.
ದೃಶ್ಯಕಲೆ ಮಾಧ್ಯಮದಲ್ಲಿ ನಾಳೆಗಳ ನಿರ್ಮಾಣದ ಬಗ್ಗೆ ಮಾತನಾಡಿದ ಡಾ.ಎಂ.ಎಸ್. ಮೂರ್ತಿ, `ಲಲಿತಕಲಾ ಅಕಾಡೆಮಿ ಸ್ಥಾಪನೆಯಾಗಿ ಇಷ್ಟು ವರ್ಷಗಳೇ ಕಳೆದರೂ ದೃಶ್ಯ ಕಲೆ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಾಧನೆಗಳೇನೂ ಆಗಿಲ್ಲ. ನವ್ಯ-ನವೋದಯ-ಬಂಡಾಯ ಚಳುವಳಿಗಳ ಮೂಲಕ ಸಾಹಿತ್ಯ ಮಾಡಿದ ಕಲೆಸವನ್ನು ದೃಶ್ಯಕಲೆ ಮಾಡಲಿಲ್ಲ ಎಂಬ ಆರೋಪವಿದೆ. ತನಗೆ ಬೇಕಾದ ತಾತ್ವಿಕ ಚೌಕಟ್ಟನ್ನು ನಿರ್ಮಿಸಿಕೊಳ್ಳದಿರುವುದು ಈ ಮಾಧ್ಯಮದ ಸೋಲಿಗೆ ಕಾರಣವಾಗಿದೆ’ ಎಂದರು.
ನಮ್ಮ ಚರಿತ್ರೆಯನ್ನು ನಿರ್ಮಿಸುವ ಹಲವಾರು ಜಾನಪದ ಕಲೆಗಳು, ಬುಡಕಟ್ಟಿನ ಕಲೆಗಳನ್ನು ದೃಶ್ಯೀಕರಿಸುವದರತ್ತ ಕಲೆ ಎಂಬ ಮಾಧ್ಯಮ ದಿವ್ಯ ನಿರ್ಲಕ್ಷ್ಯ ವಹಿಸಿತು. ಅತ್ಯಂತ ಪ್ರಮುಖ ಆದಿವಾಸಿ ಕ್ಷೇತ್ರವನ್ನೂ ನಾವು ಕಡೆಗಣಿಸಿದ್ದೇವೆಂದರೆ ದೃಶ್ಯಕಲೆ ಎತ್ತ ಸಾಗುತ್ತಿದೆ ಎಂಬುದನ್ನು ಊಹಿಸಬಹುದು. ಇಡೀ ಪರಂಪರೆಯನ್ನು ಬೆಳೆಸಬೇಕಾದ ಜಾನಪದವನ್ನು ನಾವು ನಮ್ಮದೇ ಆಧುನಿಕ ಭಾಷೆಯಲ್ಲಿ ಅರ್ಥೈಸಲು ಪ್ರಯತ್ನಿಸುತ್ತಿದ್ದೇವೆ. ಆಧುನಿಕತೆಯ ಸ್ಪರ್ಶ ನೀಡಿ ಅದರ ಸೊಗಡನ್ನು ಮರೆಮಾಚುತ್ತಿದ್ದೇವೆ ಈ ಎಲ್ಲಾ ಕಾರಣಗಳಿಂದಾಗಿ ದೃಶ್ಯಮಾಧ್ಯಮ ಸೋಲುತ್ತಿದೆ ಎಂದು ವಿಶ್ಲೇಷಿಸಿದರು.
ಕಲೆ ಮತ್ತು ಒಬ್ಬ ಮನುಷ್ಯನ ಸಂಬಂಧ ತುಂಬಾ ಮುಖ್ಯವಾದದ್ದು. ಕಲೆಯ ಬಗ್ಗೆ ಪ್ರೀತಿ, ಶ್ರದ್ಧೆ, ನಂಬಿಕೆಯನ್ನು ಬೆಳೆಸಿಕೊಂಡಾಗ ಮಾತ್ರ ಒಂದು ಉತ್ತಮ ಕಲೆ ಹೊರಬರಲು ಸಾಧ್ಯ. ಇಂದು ನಾವೆಷ್ಟೋ ತಂತರಜ್ಞಾನವನ್ನು ಅಭಿವೃದ್ದಿಪಡಿಸಿದ್ದೇವೆ; ಆದರೆ ಒಬ್ಬ ಗೊಮ್ಮಟನನ್ನು, ಬೇಲೂರು ಶಿಲಾಬಾಲಿಕೆಯನ್ನು ಸೃಷ್ಟಿಸಲು ನಾವು ಸೋಲುತ್ತಿದ್ದೇವೆ. ಕೇವಲ ಚಿತ್ರ ಬರೆಯುವವರು ಮಾತ್ರ ಚಿತ್ರ ಕಲಾವಿದರಲ್ಲ; ಅದನ್ನು ಒಂದು ಸೌಂದರ್ಯಪ್ರಜ್ಞೆಯಿಂದ ನೋಡುವವರು, ಅದನ್ನು ಅಭಿವ್ಯಕ್ತಗೊಳಿಸುವವರೂ ಕೂಡ ಕಲಾವಿದರೇ ಆಗುತ್ತಾರೆ. ಕಲೆಯ ಬಗ್ಗೆ ಭಕ್ತಿ ಬೆಳೆಸಿಕೊಂಡಾಗ ಮಾತ್ರ ಒಳ್ಳೆಯ ನಾಳೆಗಳನ್ನು ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.
ಮಾಧ್ಯಮ-ನಾಳೆಗಳ ನಿರ್ಮಾಣ
`ಮಾಧ್ಯಮಗಳು ನಾಳೆಗಳನ್ನು ನಿರ್ಮಾಣ ಮಾಡುತ್ತಿವೆಯಾ ಅಥವಾ ನಿರ್ನಾಮ ಮಾಡುತ್ತಿವೆಯಾ ಎಂಬ ಪ್ರಶ್ನೆ ಇಂದಿನ ಮಾಧ್ಯಮಗಳನ್ನು ನೋಡಿದಾಗ ಉದ್ಭವಿಸುವುದು ಖಂಡಿತ!’ ಹೀಗೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಉದಯವಾಣಿ ಮಾಧ್ಯಮ ಸಮೂಹದ ಮುಖ್ಯಸ್ಥ ರವಿ ಹೆಗಡೆ. ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಮಾಧ್ಯಮ-ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಸ್ಪರ್ಧೆ ಇದ್ದಾಗ ಅದರಿಂದ ಹೊರಬರುವ ಫಲಿತಾಂಶ ಯಾವಾಗಲೂ ಗುಣಮಟ್ಟದ್ದಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ದುರದೃಷ್ಟವಶಾತ್ ಮಾಧ್ಯಮಗಳಲ್ಲಿ ಇದಕ್ಕೆ ವ್ಯತಿರಿಕ್ತ ಬದಲಾವಣೆ ಕಂಡು ಬರುತ್ತಿದೆ. ಮಾಧ್ಯಮಗಳಲ್ಲಿ ಪ್ರಬುದ್ಧತೆಯ ಕೊರತೆ ಉಂಟಾಗಿರುವುದರಿಂದ ಈ ನಕಾರಾತ್ಮಕ ಬೆಳವಣಿಗೆ ಉಂಟಾಗುತ್ತಿದೆ’ ಎಂದರು.
`ಮಾಧ್ಯಮಗಳು ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನು ಕೊಡುತ್ತವೆ ಎಂಬ ಆರೋಪ ಮಾಧ್ಯಮಗಳ ಮೇಲಿದೆ. ಆದರೆ ಇತ್ತೀಚೆಗೆ ನಡೆಸಿದ ಒಂದು ಟಿ.ಆರ್.ಪಿ. ಸಮೀಕ್ಷೆಯ ಪ್ರಕಾರ ಹೀಗೆ ಮಾಧ್ಯಮಗಳ ಮೇಲೆ ಆರೋಪ ಮಾಡಿದ ಜನರೇ ನಕಾರಾತ್ಮಕ ಸುದ್ದಿಗಳನ್ನು ನೋಡುತ್ತಿದ್ದರು ಎಂಬ ಅಂಶ ಗಮನಕ್ಕೆ ಬಂದಿದೆ. ಆದರೆ ಮಾಧ್ಯಮಗಳು ಈ ಬಗೆಯ ಸುದ್ದಿಯನ್ನು ಕೊಡುವುದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿದ್ದು ಖಂಡಿತ. ಖಾಸಗಿ ವಾಹಿನಿಯೊಂದು ಸತತವಾಗಿ ಒಂದು ಅಪಘಾತದ ಸುದ್ದಿಯನ್ನು ತೋರಿಸಿದ ಪರಿಣಾಮ ಇಂದು `ಹರೀಶ್ ಸಾಂತ್ವನ’ದಂತಹ ಯೋಜನೆ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಅನುಷ್ಠಾನಗೊಂಡಿದೆ’ ಎಂದು ಹಲವು ಉದಾಹರಣೆಗಳ ಸಮೇತ ವಿವರಿಸಿದರು.
ಮನರಂಜನಾ ಮಾಧ್ಯಮಗಳು ಕೆಲವು ಮಿತಿಗಳನ್ನು ದಾಟುತ್ತಿರುವುದು ಸತ್ಯ. ಆರ್ಥಿಕ ಯಶಸ್ಸೇ ಒಬ್ಬ ಸಂಪಾದಕನ ಯಶಸ್ಸಿನ ಮಾನದಂಡವಾಗಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ. ಇದರಿಂದ ಅನೇಕ ಅನರ್ಥಗಳು ಸೃಷ್ಟಿಯಾಗುತ್ತಿರುವುದು ಸುಳ್ಳಲ್ಲ. ಇನ್ನು ದೃಶ್ಯ ಮಾಧ್ಯಮಗಳಿಗಿಂತ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತಿರುವುದು ಸಾಮಾಜಿಕ ಜಾಲತಾಣಗಳು. ಸುಳ್ಳನ್ನೇ ಸತ್ಯವನ್ನಾಗಿಸಿ ಜನರನ್ನು ಪ್ರಚೋದಿಸುತ್ತಿರುವ ಕಾರ್ಯ ಈ ಸಾಮಾಜಿಕ ಜಾಲತಾಣಗಳಿಂದಾಗುತ್ತಿದೆ. ಇದನ್ನು ತಡೆಯಲು ಪ್ರಬಲ ಕಾನೂನುಗಳು ಬೇಕೆಂದು ವಿಶ್ಲೇಷಿಸಿದರು.
ಮಾಧ್ಯಮಗಳಲ್ಲಿ ಒಳ್ಳೆಯ ನಾಳೆಗಳು ಸೃಷ್ಟಿಯಾಗಬೇಕೆಂದರೆ ಮಾಧ್ಯಮದವರೇ ಸ್ವಯಂ ಪ್ರೇರಣೆಯಿಂದ ಕೆಲವು ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳಬೇಕಿದೆ. ಅಲ್ಲದೇ ಓದುಗರೂ ಕೂಡ ಋಣಾತ್ಮಕತೆಯನ್ನು ಬಿಂಬಿಸುವ ಸುದ್ದಿಗಳನ್ನು ನಿರ್ಲಕ್ಷಿಸಿದಾಗ ಒಳ್ಳೆಯ ಬದಲಾವಣೆಗಳನ್ನು ಕಾಣಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.