Home Mangalorean News Kannada News ಆಳ್ವಾಸ್ ಬ್ಲಡ್ ಬ್ಯಾಂಕ್ ಕಾರ್ಯಾಗಾರ

ಆಳ್ವಾಸ್ ಬ್ಲಡ್ ಬ್ಯಾಂಕ್ ಕಾರ್ಯಾಗಾರ

Spread the love

ಆಳ್ವಾಸ್ ಬ್ಲಡ್ ಬ್ಯಾಂಕ್ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್‍ನ ಭಾಗವಾಗಿರುವ ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್‍ನಿಂದ ಒಂದು ದಿನದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಭಾರತೀಯ ವಾಯು ಸೇನೆಯ ಅಧಿಕಾರಿ ರಾಹುಲ್ ಶಿಂಧೆ ರಕ್ತದಾನ ಒಂದು ಉತ್ತಮ ಸಾಮಾಜಿಕ ಸೇವಾ ಕೈಂಕರ್ಯ ಎಂದರು.

ಭಾರತದ ಅಂಗಾಂಗ ದಾನ ಸಂಸ್ಥೆ(ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್)ಯ ಅಧ್ಯಕ್ಷ ಲಾಲ್ ಗೊಯೆಲ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಅಂಗಾಂಗ ದಾನದ ಮಹತ್ವದ ಕುರಿತಾಗಿ ತಿಳಿಸುವಂತಾಗಬೇಕು. ಹಲವು ಜೀವ ಉಳಿಸುವ ಅಂಗಾಂಗ ದಾನದ ಕುರಿತಾಗಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

ಮಣಿಪಾಲ್ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶಮೀ ಶಾಸ್ತ್ರಿ ಹಾಗೂ ಡಾ. ಚೆನ್ನ ದೀಪಿಕಾ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಕಿರಣ್ ಪೈಲೂರು ಹಾಗೂ ಪೆಥೋಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶರತ್ ಕುಮಾರ್ ರಾವ್ ಜೆ. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಎರಡು ಅವಧಿಗಳನ್ನೊಳಗೊಂಡಿದ್ದ ಕಾರ್ಯಾಗಾರದಿಂದ ವೈದ್ಯರು, ಮೆಡಿಕಲ್ ಸೈನ್ಸ್ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸ್‍ನ ವಿದ್ಯಾರ್ಥಿಗಳು ಪ್ರಯೋಜನ ಪಡೆದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್‍ಮೆಂಟ್ ಟ್ರಸ್ಟೀ ವಿನಯ್ ಆಳ್ವ, ಸ್ತ್ರೀರೋಗ ತಜ್ಞೆ ಡಾ. ಹನಾ ಶೆಟ್ಟಿ, ಡಾ.ಸ್ವರ್ಣಲೇಖಾ ಹಾಗೂ ಡಾ.ಸುಷ್ಮಾ ಉಪಸ್ಥಿತರಿದ್ದರು.


Spread the love

Exit mobile version