ಆಳ್ವಾಸ್ ವಿಕಿಪೀಡಿಯ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಡುಗೆ
ಮೂಡುಬಿದಿರೆ: ಸ್ಥಳೀಯ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ವಿಷಯಗಳನ್ನು ವಿಕಿಪೀಡಿಯಾದಲ್ಲಿ ಸೇರಿಸುವ ಸಲುವಾಗಿ ಭಾರತೀಯ ವಿಕಿ ಸಮುದಾಯಗಳಿಗೆ ವಿಕಿಮೀಡಿಯ ಫೌಂಡೇಶನ್ ಮತ್ತು ಗೂಗಲ್ ಸದಾ ಬೆಂಬಲ ನೀಡುತ್ತಿದೆ. ಈ ನಿಟ್ಟಿನಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿಯ ಸಹಕಾರದೊಂದಿಗೆ ಪ್ರಾಜೆಕ್ಟ್ ಟೈಗರ್ 2.0 ಯೋಜನೆಯಡಿಯಲ್ಲಿ ವಿಕಿಸಮುದಾಯಗಳಿಗೆ ಸ್ಥಳೀಯ ಮಾಹಿತಿಯನ್ನು ಸೇರಿಸಬೇಕೆಂಬ ಉದ್ದೇಶದಿಂದ ಆಯ್ದ ವಿಕಿ ಸಂಪಾದಕರಿಗೆ ಲ್ಯಾಪ್ಟಾಪ್ ಮತ್ತುಇಂಟರ್ನೆಟ್ ವಿತರಿಸಿ ಪ್ರೋತ್ಸಾಹಿಸಲಾಯಿತು.
ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ ವಿದ್ಯಾರ್ಥಿಗಳು ಕನ್ನಡ ಹಾಗೂ ತುಳು ವಿಕಿಪೀಡಿಯಾಕ್ಕೆ ಮಾಹಿತಿಗಳನ್ನು ಸೇರಿಸುತ್ತಿದ್ದಾರೆ. ಪ್ರಾಜೆಕ್ಟ್ ಟೈಗರ್ 2.0 ಯೋಜನೆಯಡಿಯಲ್ಲಿ ಆಳ್ವಾಸ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಾದ ತೃತೀಯ ಬಿ.ಎ.ಯ ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ಪ್ರಣವ್ ಶಿವಕುಮಾರ್ ಹಾಗೂ ದುರ್ಗಾಪ್ರಸನ್ನ, ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿಗಳಾದ ಯಕ್ಷಿತ ಮತ್ತು ಅಶ್ವಿನಿ ಅವರಿಗೆ ಲ್ಯಾಪ್ಟಾಪ್ ಬೆಂಬಲ ದೊರೆತಿದೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಪಾದನೆ ಮತ್ತು ಸ್ಥಳೀಯ ವಿಷಯಗಳನ್ನು ವಿಕಿಪೀಡಿಯಾಕ್ಕೆ ಸೇರಿಸಲು ಉಪಯೋಗವಾಗಲಿದೆ. ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪತ್ರಿಕೋದ್ಯಮ ವಿಭಾಗ ಸಂಯೋಜಕ ಶ್ರೀನಿವಾಸ ಪೆeತ್ತಾಯ, ಆಳ್ವಾಸ್ ವಿಕಿಪೀಡಿಯ ಅಸೋಸಿಯೇಶನ್ ಸಂಯೋಜಕ ಅಶೋಕ್ ಕೆ. ಜಿ ಅಭಿನಂದಿಸಿದ್ದಾರೆ.