ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಮೋಟೋರಿಗ್ 2017 ನಾಲ್ಕನೇ ಆವೃತ್ತಿಯ ಆಟೋ ಎಕ್ಸ್‍ಪೋಗೆ ಚಾಲನೆ
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂ ಆ್ಯಂಡ್ ಟೆಕ್ನಾಲಜಿಯ ಅಡಿಯಲ್ಲಿ ಬಹುನಿರೀಕ್ಷಿತ ಆಳ್ವಾಸ್ ಮೋಟೋರಿಗ್-2017 ನಾಲ್ಕನೇ ಆವೃತ್ತಿಯ ಆಟೋ ಎಕ್ಸ್‍ಪೋವನ್ನು ಮಿಜಾರ್‍ನ ಶೋಭಾವನ ಆವರಣದಲ್ಲಿ ಮೇ 21ರ ಮುಂಜಾನೆ 10.45 ಕ್ಕೆ ಅಧಿಕೃತವಾಗಿ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಈ ಭಾರಿಯ ಆಳ್ವಾಸ್ ಮೋಟೋರಿಗ್ ಪ್ರತಿ ವರ್ಷದಂತೆ ಹತ್ತು ಹಲವು ಆಕರ್ಷಣೆಗಳೊಂದಿಗೆ ಜನರ ಮನ ಸೆಳೆಯಲಿದೆ. ವಿವಿಧ ಬಗೆಯ ವಾಹನಗಳ ಪ್ರದರ್ಶನ ( ಸೂಪರ್ ಬೈಕ್ಸ್, ಸೂಪರ್ ಕಾರ್ಸ್, ಲಕ್ಸುರಿ ಕಾರ್ಸ್, ವಿಂಟೇಜ್ ಕಾರ್ಸ್) ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಾಲಕರು ಮತ್ತು ಸವಾರರಿಂದ ವಿಭಿನ್ನ ಶೈಲಿಯ ವಾಹನಗಳ ಡ್ರಾಗ್ ಆಂಡ್ ಡ್ರೀಫ್ಟ ಸ್ಟಂಟ್ ಪ್ರದರ್ಶನ ನಡೆಯಲಿದೆ. ಈ ಎಕ್ಸಪೋ ದಲ್ಲಿ 200 ಕ್ಕೂ ಹೆಚ್ಚಿನ ದ್ವಿಚಕ್ರ ವಾಹನ ಹಾಗೂ ಕಾರುಗಳ ನವೀನ ಹಾಗೂ ವಿಂಟೇಜ್ ಮಾದರಿಯ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ವಾಹನಗಳನ್ನು ವೀಕ್ಷಿಸಬಹುದು.
ಈ ಕಾರ್ಯಕ್ರಮವನ್ನು ಅಧಾನಿ ಯುಪಿಸಿಎಲ್ ಸಮೂಹ ಸಂಸ್ಥೆಗಳ ಎಗ್ಝಿಗ್ಯೂಟಿವ್ ಡೈರೆಕ್ಟರ್ ಎಂ ಕಿಶೋರ್ ಆಳ್ವ ಉದ್ಘಾಟಿಸಲಿದ್ದಾರೆ. ಇಂಡಿಯನ್ ರ್ಯಾಲಿ ಚಾಂಪಿಯನ್ ಅಶ್ವಿನ್ ನಾಯ್ಕ, ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಮೂಡಬಿದಿರೆ ವಿಶ್ವಾಸ್ ಭಾವಾ ಬಿಲ್ಡರ್ಸ್‍ನ ಮಾಲಿಕ ಅಬೂಲಾಲ್ ಪುತ್ತಿಗೆ, ಮಂಗಳೂರಿನ ಮಾಂಡವಿ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಸಂಜಯ್ ರಾವ್ ಜೊತೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜೊತೆಯಲ್ಲಿ ಟಿಎಎಸ್ಸಿ, ಐಎಂಎಸ್ಸಿ, ಬೆದ್ರ ಆಂಡ್ವೆಂಚರಸ್ ಕ್ಲಬ್, ಕೋಸ್ಟಲ್ ರೈಡರ್ಸ್, ಕೆಎಲ್14 ಹಾಗೂ ಟೀಮ್ ಬೆದ್ರ ಯುನೈಟೆಡ್ ಇವರುಗಳ ಸಹಕಾರದಲ್ಲಿ ಜರುಗಲಿದೆ.
ವಿದ್ಯಾರ್ಥಿಗಳಿಗಾಗುವ ಹಾಗೂ ಸಾರ್ವಜನಿಕರಿಗಾಗುವ ಅನುಕೂಲಗಳು
ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶದ ವಿಧ್ಯಾರ್ಥಿ ಸಮೂಹದಲ್ಲಿ ವಾಹನಗಳೆಡೆಗಿನ ಹೊಸ ಬಗೆಯ ಕಲಿಕೆಗೆ ಅವಕಾಶ ನೀಡುತ್ತದೆ
ಈ ಕಾರ್ಯಕ್ರಮವು ವಿದ್ಯಾರ್ಥಿ ಸಮೂಹದಲ್ಲಿ ವಾಹನಗಳ ಬಗೆಗೆ ಆಸಕ್ತಿಯನ್ನು ಮೂಡಿಸುವುದರ ಜೊತೆಗೆ ಇಂಜಿನ್‍ಗಳ ನಿರ್ಮಾಣ, ಉಪಯೋಗ, ಬಿಡಿಭಾಗಗಳ ಉತ್ಪಾದನೆ ಹಾಗೂ ಅವುಗಳ ಬಳಕೆಯ ಅಧ್ಯಯನಕ್ಕೆ ವಿಫುಲ ಅವಕಾಶ ನೀಡುತ್ತದೆ.
ಹೊಸ ಮಾದರಿಯ ವಾಹನಗಳ ಕಾರ್ಯವೈಖರಿಯ ಪರಿಚಯದ ಜೊತೆಗೆ ನವನವೀನ ಮಾದರಿಯ ಕಾರುಗಳ ವೈಶಿಷ್ಟ್ಯವನ್ನು ತಿಳಿಸುತ್ತದೆ.
ಒಂದೇ ವೇದಿಕೆಯಲ್ಲಿ ವಿವಿಧ ಬಗೆಯ, ವಿನೂತನ ಶೈಲಿಯ ವಿಂಟೇಜ್ ಹಾಗೂ ಲಕ್ಝುರಿ ಕಾರುಗಳ ಪರಿಚಯ ಕಾರ್ಯಕ್ರಮದ ಮುಖ್ಯ ಆಕರ್ಷಣೆಗಳು:
200 ಕ್ಕೂ ಮಿಕ್ಕಿದ ವಿನೂತನ ಹಾಗೂ ವಿಂಟೇಜ್ ಮಾದರಿಯ ಕಾರುಗಳ ಹಾಗೂ ದ್ವಿಚಕ್ರವಾಹನಗಳ ಪ್ರದರ್ಶನ
ಜೈಪುರದ ನ್ಯಾಷನಲ್ ಫ್ರೀ ಸ್ಟೈಲ್ ಮೋಟರ್‍ಸ್ಪೋರ್ಟ ರೈಡರ್ ಗೌರವ್ ಖಾತ್ರಿ ಹಾಗೂ ಅವರ ತಂಡ ಸೈಕ್ಲೋನ್ ದಿಂದ ವಿವಿಧ ಬಗೆಯ ಸಿಕ್ವೇನ್ಷಿಯಲ್ ಸ್ಟಂಟ್‍ಗಳು
ಮಂಗಳೂರಿನ ಇಂಡಿಯನ್ ರ್ಯಾಲಿ ಚಾಂಪಿಯನ್ ಅರ್ಜುನ್ ರಾವ್ ಹಾಗೂ ಇಂಡಿಯನ್ ರ್ಯಾಲಿ ಚಾಂಪಿಯನ್ ರಾಹುಲ್ ಕಾಂತರಾಜ್‍ರಿಂದ ರ್ಯಾಲಿ ಸಿಕ್ವೇನ್ಸ್ ಸ್ಟಂಟ್‍ಗಳು
ಇಂಡಿಯನ್ ಮೋಟಾರ್ ರ್ಯಾಲಿ ಸೂಪರ್ ಕ್ರಾಸ್ ಚಾಂಪಿಯನ್ನರುಗಳಾದ ಅದ್ನಾನ್ ಹಾಗೂ ಸುದೀಪ್ ಕೊಠಾರಿಯವರಿಂದ ಸೂಪರ್ ಕ್ರಾಸ್ ಸಿಕ್ವೇನ್ಸ್ ಮತ್ತು ಸ್ಟಂಟ್‍ಗಳು
ಉಡುಪಿಯ ಹಾಟ್ ಪಿಸ್ಟನ್ಸ್ ಗ್ರೂಪಿನಿಂದ ದ್ವಿಚಕ್ರವಾಹನಗಳಿಂದ ಫ್ರೀ ಸ್ಟೈಲ್ ಸ್ಟಂಟ್‍ಗಳು
ಮಂಗಳೂರಿನ ಸುತ್ತಮುತ್ತಲಿನ ಭಾಗಗಳಿಂದ ಆಗಮಿಸಿದ ಅತ್ಯಾಕರ್ಷಣೆಯ ಎಕ್ಸೋಟಿಕ್ ಹಾಗು ಪ್ರೀಮಿಯಮ್ ಕಾರುಗಳ ರ್ಯಾಂಪ್ ಷೋ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಾಹನಾಸಕ್ತರುಗಳ ಆಗಮಿಸಬೇಕಾಗಿ ಕೋರಲಾಗಿದೆ.
ಅಬೂಲಾಲ್ ಪುತ್ತಿಗೆ, ವಿಶ್ವಾಸ್ ಭಾವಾ ಬಿಲ್ಡರ್ಸ್‍ನ ಮಾಲಿಕರು, ಮೂಡಬಿದಿರೆ, ಕುಲದೀಪ್ ಎಂ, ಚೌಟರ ಅರಮನೆ, ಮೂಡಬಿದಿರೆ, ಗೌರವ್ ಖಾತ್ರಿ, ನ್ಯಾಷನಲ್ ಫ್ರೀ ಸ್ಟೈಲ್ ಮೋಟರ್‍ಸ್ಪೋರ್ಟ ರೈಡರ್, ಜೈಪುರ, ಮುದ್ದುಕೃಷ್ಣ, ಮೋಟೊರಿಗ್ ಸಂಯೋಜಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ. ಪ್ರಸಾದ್ ಶೆಟ್ಟಿ, ಉಪನ್ಯಾಸಕರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.