Home Mangalorean News Kannada News ಆಳ್ವಾಸ್ ಸಿನಿಸಿರಿ  ನಾಗತಿಹಳ್ಳಿ ಚಂದ್ರಶೇಕರ್ ಉದ್ಘಾಟನೆ

ಆಳ್ವಾಸ್ ಸಿನಿಸಿರಿ  ನಾಗತಿಹಳ್ಳಿ ಚಂದ್ರಶೇಕರ್ ಉದ್ಘಾಟನೆ

Spread the love

ಆಳ್ವಾಸ್ ಸಿನಿಸಿರಿ  ನಾಗತಿಹಳ್ಳಿ ಚಂದ್ರಶೇಕರ್ ಉದ್ಘಾಟನೆ

ನುಡಿಸಿರಿಯು ಹಲವಾರು ರೀತಿಯ ಸಿರಿಗಳಿಂದ ಒಳಗೊಂಡು ಸಾಂಸ್ಕøತಿ ಸಾಹಿತ್ಯದ ಹಬ್ಬವಾಗಿ ರೂಪುಗೊಂಡಿದೆ ಆದರೆ ಬಹುಕಲೆಯ ಸಿರಿಯಲ್ಲಿ ಚಲನಚಿತ್ರದ ಕೊರತೆ ಇದ್ದು ಅದನ್ನು  ನೀಗಿಸಲು ಚಲನಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಕಲಾತ್ಮಕ ಸಿನಿಮಾಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನವಿಲ್ಲದ ಕಾರಣ, ಸಿನೆಮಾ ನೋಡುಗರ ಸಂಖ್ಯೆ ಕಡಿಮೆಯಾಗಿದೆ. ಇಂದಿನ ಯುವಜನತೆ ಹೊಂದಿಕೊಂಡಿರುವ ಸಾಮಾಜಿಕ ಜಾಲತಾಣವನ್ನು, ಸಾಂಸ್ಕøತಿಕ ಜಾಲತಾಣವನ್ನಾಗಿ ಪರಿವರ್ತಿಸುವ ಕಾರ್ಯ ನಡೆಯಬೇಕಾಗಿದೆ ಆ ನಿಟ್ಟಿನಲ್ಲಿ ಕಲಾತ್ಮಕ ಸಿನಿಮಾಗಳಿಗೆ ಯಾವುದೇ ರೀತಿಯ ಮೋಸವಾಗಬಾರದು ಎಂದು ಈ ರೀತಿ ಸಿನಿಮಾ ಉತ್ಸವವನ್ನು ನಡೆಸಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಡಾ. ನಾಗತಿಹಳ್ಳಿ ಚಂದ್ರಶೇಕರ್ ಹೇಳಿದರು.

ಕರ್ನಾಟಕ ಚಲನಚಿತ್ರಅಕಾಡೆಮಿ ಬೆಂಗಳೂರು ವತಿಯಿಂದ ಹಾಗೂ ಆಳ್ವಾಸ್ ನುಡಿಸಿರಿಯ ಅಂಗವಾಗಿ ನಡೆಯುವ ಸಿನಿಸಿರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ. ನಾ. ದಾಮೋದರ ಶೆಟ್ಟಿ ಮುಖ್ಯಅತಿಥಿಯಾಗಿ ಮಾತನಾಡಿ, ಆಧುನಿಕಯುಗದಲ್ಲಿ ಜನರ ಸದಾಭಿರುಚಿ ತಕ್ಕಂತೆ ಮಕ್ಕಳ ಆಸಕ್ತಿಗೆ ಯೋಗ್ಯವಾದ ಸಿನಿಮಾಗಳ ಪ್ರದರ್ಶನ ಈ ಸಂಸ್ಥೆಯೊಳಗೆ ನಡೆಯುತ್ತಿದ್ದು, ಸಿನಿಸಿರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಮೌಲ್ಯಾಧಾರಿತ ಸಿನಿಮಾಗಳನ್ನು ಮಕ್ಕಳಿಗೆ ಪ್ರದರ್ಶಿಸುವುದರಿಂದ ಇದರಲ್ಲಿನ ಶ್ರೇಷ್ಠವಾದ ಅಂಶವನ್ನು ಪರಿಗಣಿಸುವ ಅವಕಾಶ ಸಿಕ್ಕಂತಾಗುತ್ತದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಅಧ್ಯಕ್ಷಡಾ.ಮೋಹನ್ ಆಳ್ವ ಮಾತನಾಡಿ, ಕನ್ನಡ ಚಲನಚಿತ್ರರಂಗ ಬೇರೆ ಬೇರೆಚಿತ್ರವನ್ನು ನೀಡಿಅದ್ಭುತ ಸಾಧನೆಯನ್ನು ಮಾಡಿದೆ. ಕನ್ನಡಚಿತ್ರರಂಗದ ಈ ಸಾಧನೆಯುಕನ್ನಡ ಭಾಷೆಯನ್ನುಇನ್ನಷ್ಟು ಭಾಷೆಯ ಕಂಪು ಹರಡಿಸುವ ಪ್ರಯತ್ನ ಮಾಡುತ್ತಿದೆ. ಕಲಾತ್ಮಕ ಚಿತ್ರದಿಂದ ಕಮರ್ಶಿಯಲ್ ಸಿನಿಮಾಗಳಿಗೆ ನಮ್ಮ ಚಿತ್ರರಂಗ ಬದಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಿನಿಸಿರಿಯ ಸಂಚಾಲಕ ಶ್ರೀನಿವಾಸ ಹೊಡೆಯಾಲ ಮತ್ತು ಪ್ರದರ್ಶನಗೊಳ್ಳಲಿರುವ ಸಿನಿಮಾದ ನಿರ್ದೇಕರು ಮತ್ತ ನಿರ್ಮಾಕರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಮೌಲ್ಯಜೀವನ್ ರಾಮ್ ನಿರೂಪಿಸಿದರು.

ಸಿನಿಸಿರಿಯಲ್ಲಿ ಪ್ರಾದೇಶಿಕ ಆರು ಭಾಷೆಗಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.


Spread the love

Exit mobile version