Home Mangalorean News Kannada News ಆಶ್ರಯ ಯೋಜನೆಯಡಿಯಲ್ಲಿ 930 ಬಡಜನರಿಗೆ ಫ್ಯಾಟ್ ಹಂಚಿಕೆ : ಜೆ.ಆರ್ ಲೋಬೊ

ಆಶ್ರಯ ಯೋಜನೆಯಡಿಯಲ್ಲಿ 930 ಬಡಜನರಿಗೆ ಫ್ಯಾಟ್ ಹಂಚಿಕೆ : ಜೆ.ಆರ್ ಲೋಬೊ

Spread the love

ಆಶ್ರಯ ಯೋಜನೆಯಡಿಯಲ್ಲಿ 930 ಬಡಜನರಿಗೆ ಫ್ಯಾಟ್ ಹಂಚಿಕೆ : ಜೆ.ಆರ್ ಲೋಬೊ

ಮಂಗಳೂರು: ನಗರದ ಶಕ್ತಿನಗರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಯೋಜನೆಯಡಿಯಲ್ಲಿ ಈಗಾಗಲೇ 930 ಬಡಜನರಿಗೆ ಫ್ಯಾಟ್ ಹಂಚಿಕೆ ಪತ್ರವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಜೆ.ಆರ್ ಲೋಬೊರವರು ಹಸ್ತಾಂತರಿಸಿದ್ದಾರೆ.

930ರಲ್ಲಿ ಬಾಕಿ ಉಳಿದ ಸುಮಾರು 180 ಬಡಜನರಿಗೆ ಹಂಚಿಕೆ ಪತ್ರವನ್ನು ಶಾಸಕರ ಕಛೇರಿಯಲ್ಲಿ ಇತ್ತೀಚೆಗೆ ಹಸ್ತಾಂತರ ಮಾಡಿ ಮಾತನಾಡಿದ, ಈಗಾಗಲೇ ಸುಮಾರು 4,000 ಅರ್ಜಿಗಳು ಬಂದಿವೆ. ಅದರಲ್ಲಿ ಒಟ್ಟು 930 ಜನರಿಗೆ ಹಂಚಿಕೆ ಪತ್ರಗಳನ್ನು ನೀಡಿದ್ದೇವೆ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಫ್ಯಾಟ್ ಮಾದರಿಯ ಮನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ.

ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ, ಯೋಜನೆಯನ್ನು ಹಾಕಿಕೊಳ್ಳಲಾಗುವುದು. ಬಡಜನರಿಗೆ ಮನೆಗಳನ್ನು ನೀಡುವ ಮೂಲಕ ಬಡಜನರಿಗೆ ನೆಮ್ಮದಿಯ ಜೀವನವನ್ನು ಮಾಡಲು ಬಹಳಷ್ಟು ಸಹಕಾರಿಯಾಗುತ್ತದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಹಿಂದೆ ಇದೇ ಶಕ್ತಿನಗರದಲ್ಲಿ ನಾನು ಮಹಾನಗರದ ಪಾಲಿಕೆಯ ಆಯುಕ್ತನಾಗಿ ಸೇವೆ ಸಲ್ಲಿಸುತ್ತಿರುವ  ಸಂದರ್ಭದಲ್ಲಿ ಸುಮಾರು 250 ಬಡಜನರಿಗೆ ಮನೆ ನಿವೇಶನವನ್ನು ಕೊಟ್ಟಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಂಟಿ ಆಯುಕ್ತ ಗೋಕುಲದಾಸ್ ನಾಯಕ್, ಪಾಲಿಕೆಯ ಅಧಿಕಾರಿ ಮಾಲಿನಿ ರೊಡ್ರಿಗಸ್, ಬ್ಯಾಪ್ಟಿಸ್ಟ್ ಡಿಸೋಜ, ನೀರಜ್ ಪಾಲ್, ಮೊಹಮ್ಮದ್ ನವಾಝ್, ಉಮೇಶ್ ದಂಡೇಕೇರಿ ಉಪಸ್ಥಿತರಿದ್ದರು.


Spread the love

Exit mobile version