ಆಸ್ಪತ್ರೆಗೆ ದಾಖಲಾದ ಯುವಕ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನ
ಮಂಗಳೂರು: ನಗರದ ಫಳ್ನೀರ್ ಬಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ರೋಗಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆಸ್ಪತ್ರೆಯ 4 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ಅತ್ತಾವರ ನಿವಾಸಿ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ
ವೈಯುಕ್ತಿಕ ಕಾರಣದಿಂದ ಬೇಸತ್ತು ಕೆಲದಿನಗಳ ಹಿಂದೆ ರಾಸಾಯನಿಕ ವಸ್ತುವೊಂದನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಇದನ್ನು ನೋಡಿದ ಆತನ ಸಂಬಂಧಿಕರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದ ಈತನ ಆರೋಗ್ಯ ಸುಧಾರಣೆಯಾಗಿತ್ತು ಎನ್ನಲಾಗಿದೆ.
ಈತ ಗುರುವಾರ ಮಧ್ಯಾಹ್ನ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿರುವ ಕಿಟಕಿಯ ಗ್ಲಾಸ್ ಹೊಡೆದು ಕೆಳಗೆ ಜಿಗಿದಿದ್ದು, ಇದನ್ನು ಗಮನಿಸಿದ ಆಸ್ಪತ್ರೆ ಸಿಬಂದಿ ತಕ್ಕಣವೇ ತೀವ್ರ ನಿಗಾ ಘಟಕ್ಕೆ ದಾಖಲಿಸಿದ್ದಾರೆ.
ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.