ಆಸ್ಪತ್ರೆಯ ರೋಗಿಗಳಿಗೂ ಕ್ರಿಸ್ಮಸ್ ಸಂಭ್ರಮ ತಂದ ಶಾಸಕ ಜೆ.ಆರ್.ಲೋಬೊ
ಮಂಗಳೂರು: ಜಗತ್ತು ಕ್ರಿಸ್ಮಸ್ ಸಂಭ್ರಮದಲ್ಲಿ ತೇಲಾಡುತ್ತಿರುವಾಗ ಆಸ್ಪತ್ರೆಯಲ್ಲಿ ರೋಗಿಗಳು ತಮ್ಮ ರೋಗವಾಸ ಮಾಡಿಕೊಳ್ಳಲು ಹೆಣಗುತ್ತಾರೆ. ಈ ಕ್ಷಣವನ್ನು ಖುದ್ದು ವೀಕ್ಷಿಸಿದ ಶಾಸಕ ಜೆ.ಆರ್.ಲೋಬೊ ಅಲ್ಲಿದ್ದವರಿಗೆ ಕೂಡಾ ಹಣ್ಣು ಹಂಪಲು ವಿತರಿಸಿ ಯೋಗಕ್ಷೇಮ ವಿಚಾರಿಸಿಕೊಂಡರು.
ಲೇಡಿಗೋಷನ್ ಆಸ್ಪತ್ರೆಯಗೆ ತೆರಳಿದ ಶಾಸಕರು ಅಮೃತ ಸೋಶಿಯಲ್ ಟ್ರಸ್ಟ್ ವತಿಯಿಂದ ಆಸ್ಪತ್ರೆಯಲ್ಲಿದ್ದವರಿಗೆ ಹಣ್ಣು ವಿತರಿಸಿ ರೋಗದಿಂದ ಶೀಘ್ರ ಗುಣಮುಖರಾಗಲೆಂದು ಆಶಿಸಿದರು.
ಹೌದು ಇಷ್ಟೇ ಆಗಿದ್ದರೆ ವಿಶೇಷವೇನೂ ಇರಲಿಲ್ಲ. ಶಾಸಕ ಜೆ.ಆರ್.ಲೋಬೊ ಆಸ್ಪತ್ರೆಯಲ್ಲಿದ್ದ ವೈದ್ಯರನ್ನು ರೋಗಿಗಳಿಗೆ ಕೊಡುತ್ತಿರುವ ಚಿಕಿತ್ಸೆ ಮತ್ತು ಔಷಧಿಗಳ ಬಗ್ಗೆಯೂ ಮಾತುಕತೆ ನಡೆಸಿದರು. ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯದಿಂದ ಮತ್ತು ನೆರೆಯ ಕೇರಳ ರಾಜ್ಯದಿಂದಲೂ ವಿಶೇಷವಾಗಿ ಮಹಿಳೆಯರು ಹೆರಿಗೆಗಾಗಿ ಬರುತ್ತಾರೆ. ಸುಮಾರು 300 ಕ್ಕೂ ಹೆಚ್ಚು ಹೆರಿಗೆಗೆ ಬಂದ ಮಹಿಳೆರಿದ್ದರು.
ಇಲ್ಲಿ ಅನೇಕ ಸಂದರ್ಭದಲ್ಲಿ ಹೆರಿಗೆಗೆ ಬರುವ ಮಹಿಳೆಯರಿಗೆ ಸ್ಥಳಾವಕಾಶದ ಕೊರತೆ ಉಂಟಾಗುತ್ತದೆ. ಇದಕ್ಕಾಗಿ ಹೆಚ್ಚಿನ ಸ್ಥಳಾವಕಾಶ ಕಲಿಸುವ ಬಗ್ಗೆಯೂ ಶಾಸಕರು ಆಸಕ್ತಿವಹಿಸಿ ಅಧಿಕಾರಿಗಳೊಂದಿಗೆ ಮಾತುಅಕತೆ ನಡೆಸಿದರು.
ಶಾಸಕ ಜೆ.ಆರ್.ಲೋಬೊ ಹೆರಿಗೆಗೆ ಬಂದಿರುವ ಮಹಿಳೆಯರಿಗೆ ತೊಂದರೆಯಾಗಬಾರದೆಂದು ಅಲ್ಲೇ ಉಡುಪನ್ನು ಧರಿಸಿ ಭೇಟಿಕೊಟ್ಟರು, ಆಸ್ಪತ್ರೆಯಲ್ಲಿ ಸುತ್ತಾಡಿ ಎಲ್ಲರೊಂದಿಗೂ ಚರ್ಚಿಸಿದರು.
ಶಾಸಕ ಜೆ.ಆರ್.ಲೋಬೊ ಅವರು ಆಸ್ಪತ್ರೆಯ ಸಿಬ್ಬಂಧಿಗಳಿಗೆ ಇಲ್ಲಿಗೆ ಬರುವ ಹೆಂಗಸರನ್ನು ತಮ್ಮ ಮನೆಯವರೆಂದು ನೋಡಿಕೊಳ್ಳುವಂತೆ ನುಡಿದಾಗ ಆ ಆಸ್ಪತ್ರೆಗೆ ಬಂದಿದ್ದ ಮಹಿಳೆಯರು ತಾವು ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡವರಂತೆ ಹರ್ಷವ್ಯಕ್ತಪಡಿಸಿದ್ದೂ ವಿಶೇಷವಾಗಿತ್ತು.