Home Mangalorean News Kannada News ಆ.31ರವರೆಗೆ ಶಾಲಾ, ಕಾಲೇಜಿಲ್ಲ – ಆ.5ರಿಂದ ಜಿಮ್ ಓಪನ್, ರಾತ್ರಿ ಕರ್ಫ್ಯೂ ರದ್ದು

ಆ.31ರವರೆಗೆ ಶಾಲಾ, ಕಾಲೇಜಿಲ್ಲ – ಆ.5ರಿಂದ ಜಿಮ್ ಓಪನ್, ರಾತ್ರಿ ಕರ್ಫ್ಯೂ ರದ್ದು

Spread the love

ಆ.31ರವರೆಗೆ ಶಾಲಾ, ಕಾಲೇಜಿಲ್ಲ – ಆ.5ರಿಂದ ಜಿಮ್ ಓಪನ್, ರಾತ್ರಿ ಕರ್ಫ್ಯೂ ರದ್ದು

ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಹೇರಿದ್ದ ಲಾಕ್‍ಡೌನ್ ಬಗ್ಗೆ ಇದೀಗ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡಿದ್ದು, ಅಗಸ್ಟ್ 1ರಿಂದ ಅನ್ಲಾಕ್ 3.0 ನಿಯಮಗಳು ಜಾರಿಯಾಗಲಿದೆ.

ಇದೂವರೆಗೆ ಹೇರಲಾಗಿದ್ದ ರಾತ್ರಿ ಕರ್ಫ್ಯೂ ರದ್ದು ಮಾಡಲಾಗಿದೆ. ಆ.31ರವರೆಗೆ ಶಾಲಾ, ಕಾಲೇಜು ಓಪನ್ ಮಾಡುವಂತಿಲ್ಲ ಎಂದು ಸೂಚಿಸಿದೆ. ಆಗಸ್ಟ್ 5ರಿಂದ ಯೋಗ, ಜಿಮ್, ಸ್ವಿಮ್ಮಿಂಗ್ ಪೂಲ್ ನಡೆಸಲು ಅವಕಾಶ ನೀಡಲಾಗುತ್ತಿದೆ. ಸಿನಿಮಾ ಮಂದಿರ, ಪಾರ್ಕ್ ತೆರೆಯಲು, ಬಾರ್ & ರೆಸ್ಟೋರೆಂಟ್ ಗೆ ಅವಕಾಶ ನೀಡಲಾಗಿದೆ.

ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶದಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಸಾಮಾಜಿಕ ರಾಜಕೀಯ, ಶೈಕ್ಷಣಿಕ ಧಾರ್ಮಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ಅಗಸ್ಟ್ 31ರ ವರೆಗೂ ಲಾಕ್‍ಡೌನ್ ಮುಂದುವರಿಯಲಿದ್ದು, ಮೂಲಭೂತ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 65 ವರ್ಷ ಮೆಲ್ಪಟ್ಟ ಹಾಗೂ ಹತ್ತು ವರ್ಷದ ಕೆಳಗಿನ ಮಕ್ಕಳು ಮನೆಯಲ್ಲಿ ಇರಬೇಕು. ಅವಶ್ಯಕ ಕೆಲಸಗಳಿಗೆ ಮಾತ್ರ ಹೊರಹೋಗಬೇಕು.

ಇನ್ನು ವಂದೇ ಭಾರತ್ ಮಿಷನ್ ಅಡಿ ಸೀಮಿತ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಈ ಹಿಂದೆ ತಿಳಿಸಂತೆ ಕೊರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಆರೋಗ್ಯ ಸೇತು ಬಳಕೆ ಮುಂದುವರಿಸುವಂತೆ ತಿಳಿಸಲಾಗಿದೆ.


Spread the love

Exit mobile version