ಇಂಡಿಯನ್ ಸೋಶಿಯಲ್ ಫಾರಂ ನೆರವಿನಿಂದ ಸುಖಾಂತ್ಯಗೊಂಡ ಬೆಂಗಳೂರು ಮೂಲದ ದಂಪತಿಗಳ ಪ್ರಕರಣ

Spread the love

ಇಂಡಿಯನ್ ಸೋಶಿಯಲ್ ಫಾರಂ ನೆರವಿನಿಂದ ಸುಖಾಂತ್ಯಗೊಂಡ ಬೆಂಗಳೂರು ಮೂಲದ ದಂಪತಿಗಳ ಪ್ರಕರಣ

ರಿಯಾದ್: ಬೆಂಗಳೂರು ಮೂಲದ ಚಾಂದ್ ಪಾಶ ಮತ್ತು ಅವರ ಆಮಿನಾಬಿ ದಂಪತಿಗಳು ಏಜೆಂಟಿನ ಮಾತಿಗೆ ಮರುಳಾಗಿ ಸೌದಿ ಅರೇಬಿಯಾದ ಪ್ರಾಯೋಜಕನ ಮನೆಯಲ್ಲಿ ಖಾಸಗಿ ವಾಹನ ಚಾಲಕ ಮತ್ತು ಮನೆ ಕೆಲಸವನ್ನು ಮಾಡುವ ಸಲುವಾಗಿ ರಿಯಾದಿಗೆ ಬಂದಿದ್ದರು.

ಆದರೆ ಇವರ ಪ್ರಯೋಜಕನು ಈ ದಂಪತಿಗಳಿಗೆ ಕೆಲಸ ನೀಡಲು ನಿರಾಕರಿಸಿ, ವಾಸ್ತವ್ಯ ಕಾರ್ಡ್(ಇಕಾಮ) ಮತ್ತು ಪಾಸ್ ಪೊರ್ಟ್ ನೀಡದೆ. ಇವರ ಬಿಡುಗಡೆಗಾಗಿ ಸುಮಾರು18 ಸಾವಿರ ರಿಯಾಲಿನ ಬೇಡಿಕೆ ಇಟ್ಟಿದ್ದನು. ವಿದೇಶದಲ್ಲಿ ಕಂಗಾಲಾದ ದಂಪತಿಗಳು ತಿನ್ನಲು ಆಹಾರ ಮತ್ತು ಇರಲು ಮನೆ ಇಲ್ಲದೆ, ಅಲ್ಲಲ್ಲಿ ಬೇಡುತ್ತ ಬೀದಿಗಳಲ್ಲಿ ಅತ್ಯಂತ ಶೋಚನೀಯವಾಗಿ ದಿನಗಳನ್ನು ಕಳೆಯುತ್ತಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಇಂಡಿಯನ್ ಸೋಶಿಯಲ್ ಫಾರಂ ರಿಯಾದ್ ಘಟಕದ ಇಸ್ಮಾಯಿಲ್ ಮಂಗಳಪೇಟೆ, ನವೀದ್ ಕುಂದಾಪುರ ಮತ್ತು ಅಬ್ದುಲ್ ಸಾಬಿತ್ ಬಜ್ಪೆರವರ ಜೊತೆಗಿನ ತಂಡವು ದಂಪತಿಗಳಿಗೆ ಸಾಂತ್ವನ ಹೇಳಿ, ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿ, ಈಗಾಗಲೇ ಆಮೀನಾಬಿ ಯವರನ್ನು ಇಂಡಿಯನ್ ಸೋಶಿಯಲ್ ಫಾರಂನ ಪ್ರಯತ್ನದಿಂದ ಸ್ವದೇಶಕ್ಕೆ ಕಳುಹಿಸಿಕೊಡಲಾಗಿತ್ತು.

ಆದರೆ ಚಾಂದ್ ಪಾಷಾರವರ ದಾಖಲೆಪತ್ರ ಗಳಲ್ಲಿ ಕೊಂಚ ಸಮಸ್ಯೆಗಳಿದ್ದ ಕಾರಣ ಚಾಂದ್ ಪಾಷಾರವರು ಸೌದಿಯಲ್ಲೇ ಉಳಿಯಬೇಕಾಯಿತು. ಇನ್ನು ಚಾಂದ್ ಪಾಷಾ ರವರಿಗೆ ಭಾರತಕ್ಕೆ ಕಳುಹಿಸಿಕೊಡಲು, ಮತ್ತು ಸಮಸ್ಯೆ ಬಗೆಹರಿಯುವ ತನಕ ಇರಲು ರೂಮ್ ಮಾತ್ತು ಊಟದ ವ್ಯವಸ್ಥೆಯನ್ನು ಫಾರಂನ ವತಿಯಿಂದ ಮಾಡಲಾಯಿತು.

ಇವರ ದಾಖಲೆ ಮತ್ತು ಪಾಸ್ಪೋರ್ಟ್‍ಗಳನ್ನು ಸರಿಪಡಿಸುವ ಸಲುವಾಗಿ ಇಂಡಿಯನ್ ಸೋಶಿಯಲ್ ಫಾರಂನ ಅಬ್ದುಲ್ ಸಾಬಿತ್ ಬಜ್ಪೆರವರು ಸಾಕಷ್ಟು ಬಾರಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪಾಸ್ಪೋರ್ಟ್ ಮತ್ತು ಇತರ ದಾಖಲೆಗಳನ್ನು ಸರಿಪಡಿಸಲಾಯಿತು.

ಹಾಗೇ ಭಾರತೀಯ ರಾಯಭಾರಿ ಕಚೇರಿಯ ನಿದರ್ಶನದಂತೆ ಚಾಂದ್ ಪಾಷಾರವರನ್ನು ತರ್ಹಿಲ್ ಮೂಲಕ ಭಾರತಕ್ಕೆ ಕಳುಹಿಸಿಕೊಡಲು ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಯಿತು

ಅಂತಿಮವಾಗಿ ಚಾಂದ್‍ಪಾಷಾರವರನ್ನು ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸಿ ಕೊಡುವಲ್ಲಿ ಇಂಡಿಯನ್ ಸೋಶಿಯಲ್ ಫಾರಂ ಯಶಸ್ವೀಯಾಗಿದೆ.


Spread the love