Home Mangalorean News Kannada News ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ ಹಾಕಿ ಅಪ್ರಪಚಾರ; ನಾಲ್ವರ ವಿರುದ್ದ ಪ್ರಕರಣ

ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ ಹಾಕಿ ಅಪ್ರಪಚಾರ; ನಾಲ್ವರ ವಿರುದ್ದ ಪ್ರಕರಣ

Spread the love
RedditLinkedinYoutubeEmailFacebook MessengerTelegramWhatsapp

ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ ಹಾಕಿ ಅಪ್ರಪಚಾರ; ನಾಲ್ವರ ವಿರುದ್ದ ಪ್ರಕರಣ

ಬೆಂಗಳೂರು: ರಾಜ್ಯ ಸರಕಾರದ ಬಹು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನಿನ ಊಟದಲ್ಲಿ ಜಿರಳೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ದ ಇಲ್ಲಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದರು ಬಂದಿದೆ.

ಉದ್ದೇಶಪೂರ್ವಕವಾಗಿ ತಿಂಡಿಯಲ್ಲಿ ಜಿರಳೆ ಹಾಕಿರುವ ಬಗ್ಗೆ ಬಿಬಿಎಂಪಿ ಅನುಮಾನ ವ್ಯಕ್ತಪಡಿಸಿದ್ದು, ಇಂದಿರಾ ಕ್ಯಾಂಟೀನ್‌ಲ್ಲಿ ಬೆಳಗಿನ ಉಪಹಾರದಲ್ಲಿ ಕಂಡುಬಂದಿದ್ದ ಜಿರಳೆ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ.

ಅಲ್ಲಿನ ಸಿಸಿಟಿವಿಯನ್ನು ಪರಿಶೀಲಿಸಿದ ಬಳಿಕ ಪ್ರಕರಣ ಹೊಸ ತಿರುವು ಪಡೆದಿದೆ. ಈ ಹಿನ್ನೆಲೆಯಲ್ಲಿ ತಿಂಡಿಗೆ ಬಂದಿದ್ದ ನಾಲ್ವರ ಮೇಲೆ ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅ. 20ರಂದು ಮಾಲಾಗಾಳದಲ್ಲಿರುವ ಇಂದಿರಾ ಕ್ಯಾಂಟೀನ್‌ಲ್ಲಿ ಬೆಳಗಿನ ಉಪಹಾರದಲ್ಲಿ ಜಿರಳೆ ಪತ್ತೆ ಅಗಿತ್ತು.

ಈ ಬಗ್ಗೆ ಹೇಮಂತ್‌ ಕುಮಾರ್‌ ಎಂಬಾತ ಫೇಸ್‌ಬುಕ್‌ನಲ್ಲಿ ವಿಡಿಯೋ ಮತ್ತು ಫೋಟೋ ಅಪ್‌ಲೋಡ್‌ ಮಾಡಿದ್ದ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಅಪರಿಚಿತ ವ್ಯಕ್ತಿಗಳಿಂದ ಉದ್ದೇಶಪೂರ್ವಕವಾಗಿ ಉಪಹಾರದಲ್ಲಿ ಜಿರಳೆ ಹಾಕಲಾಗಿತ್ತು ಎಂಬುದು ತಿಳಿದು ಬಂದಿದೆ.

ಈ ಸಂಬಂಧ ಹೇಮಂತ್ ಕುಮಾರ್‌ ಸೇರಿದಂತೆ ತಿಂಡಿಗೆ ಬಂದಿದ್ದ ನಾಲ್ವರ ಮೇಲೆ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಬಳಿಕ ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರಿಂದ ಎಫ್‌ಐಆರ್‌ ದಾಖಲಾಗಿದೆ. ಶೇಫ್‌ಟಾಕ್‌ ಸಂಸ್ಥೆಯಿಂದ ಈ ಕ್ಯಾಂಟೀನ್‌ಗೆ ಅಹಾರ ಸರಬರಾಜು ಮಾಡಲಾಗುತ್ತಿತ್ತು.


Spread the love
RedditLinkedinYoutubeEmailFacebook MessengerTelegramWhatsapp

Exit mobile version