Home Mangalorean News Kannada News ಇಟಲಿಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಅಪ್ಪಿಕೊಂಡ ಪ್ರಧಾನಿ ಮೋದಿ

ಇಟಲಿಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಅಪ್ಪಿಕೊಂಡ ಪ್ರಧಾನಿ ಮೋದಿ

Spread the love

ಇಟಲಿಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಅಪ್ಪಿಕೊಂಡ ಪ್ರಧಾನಿ ಮೋದಿ

ನವದೆಹಲಿ: G7 ಶೃಂಗಸಭೆ ಇಟಲಿಯಲ್ಲಿ ನಡೆಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಯಲ್ಲಿ ನಡೆದ G7 ಔಟ್ರೀಚ್ ಶೃಂಗಸಭೆಯಲ್ಲಿ ರೋಮನ್ ಕ್ಯಾಥೊಲಿಕ್ ಸಮುದಾಯದ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಅಪ್ಪಿಕೊಂಡು ಮಾತನಾಡಿಸಿದ್ದಾರೆ. ಇಟಾಲಿಯನ್ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ವೀಲ್ಚೇರ್ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಶೃಂಗಸಭೆಗೆ ಕರೆದೊಯ್ಯಲಾಯಿತು.

ಫ್ರಾನ್ಸ್ನ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುರೋಪಿಯನ್ ಪಾರ್ಲಿಮೆಂಟ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ ಸೇರಿದಂತೆ ಹಲವಾರು ನಾಯಕರು ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಿದರು. ಪೋಪ್ ಫ್ರಾನ್ಸಿಸ್ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದ ನಂತರ, ಅವರನ್ನು ಪಿಎಂ ನರೇಂದ್ರ ಮೋದಿ ಸ್ವಾಗತಿಸಿದರು. ಅವರು ಅಪ್ಪಿಕೊಂಡು ಮಾತನಾಡಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ದಕ್ಷಿಣ ಇಟಲಿಯಲ್ಲಿ G7 ಶೃಂಗಸಭೆಯ ನಾಯಕರನ್ನು ಉದ್ದೇಶಿಸಿ ಮಾತನಾಡುವ ಮೊದಲ ಪೋಪ್ ಆಗಿದ್ದಾರೆ. ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪೋಪ್ ಅವರನ್ನು ಆಹ್ವಾನಿಸಿದರು.


Spread the love

Exit mobile version