ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್

Spread the love

ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್

ಮಂಗಳೂರು: ತನ್ನ ಸಹೋದರ ಇಫ್ತಿಕಾರ್ ಆಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಸಹಿತ ಕೆಲವು ಮಾಧ್ಯಮಗಳಲ್ಲಿ ಇಫ್ತಿಕಾರ್ ಆಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲ್ಲಿದ್ದಾರೆ ಎಂಬ ವರದಿಯ ಹಿನ್ನಲೆಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಖಾದರ್ ಅವರು ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯುಳ್ಳ ಕುಟುಂಬವಾಗಿದೆ.ಯಾವ ಕಾರಣಕ್ಕೂ ಈ ಕುಟುಂಬದ ಯಾವೊಬ್ಬ ಸದಸ್ಯ ಕೂಡ ಕಾಂಗ್ರೆಸ್ ತ್ಯಜಿಸಿ ಇತರ ಯಾವುದೇ ಪಕ್ಷಕ್ಕೂ ಸೇರ್ಪಡೆಗೊಳ್ಳುವ ಪ್ರಶ್ನೆಯೇ ಇಲ್ಲ. ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು ಹೀಗೆ ಗೊಂದಲ ಸೃಷ್ಟಿಸುವುದರಿಂದ ಇವರಿಗೆ ಏನು ಲಾಭ ಎಂಬುದು ಗೊತ್ತಾಗುತ್ತಿಲ್ಲ ಎಂದರು.


Spread the love