Home Mangalorean News Kannada News ಇರ್ಮಾ ಚಂಡಮಾರುತ: ಸಂತ್ರಸ್ಥ ಕನ್ನಡಿಗರು ಸುರಕ್ಷಿತ

ಇರ್ಮಾ ಚಂಡಮಾರುತ: ಸಂತ್ರಸ್ಥ ಕನ್ನಡಿಗರು ಸುರಕ್ಷಿತ

Spread the love

ಇರ್ಮಾ ಚಂಡಮಾರುತ: ಸಂತ್ರಸ್ಥ ಕನ್ನಡಿಗರು ಸುರಕ್ಷಿತ

ಮ0ಗಳೂರು : ನೆದರ್‍ಲೆಂಡ್ ಸೆಂಟ್ ಮಾರ್ಟಿನ್ ದ್ವೀಪವು ಇರ್ಮಾ ಚಂಡಮಾರುತಕ್ಕೆ ತುತ್ತಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಈ ಸಂದರ್ಭದಲ್ಲಿ 20 ಮಂದಿ ಕನ್ನಡಿಗರು ಈ ಅವಗಡದಲ್ಲಿ ಸಿಲುಕಿರುವ ಮಾಹಿತಿಯು ನಮ್ಮ ಇಲಾಖೆಯ ಗಮನಕ್ಕೆ ಬಂದಂತಹ ಹಿನ್ನೆಲೆಯಲ್ಲಿ ಕೂಡಲೆ ನೆದರ್‍ಲೆಂಡ್‍ನ ಭಾರತ್ ರಾಯಭಾರಿಗಳೊಂದಿಗೆ ಚರ್ಚಿಸಿ ಸಂತ್ರಸ್ಥ ಕನ್ನಡಿಗರನ್ನ ಸುರಕ್ಷಿತ ಸ್ಥಳಕ್ಕೆ ಕರೆತಂದು ಅವರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿಕೊಳ್ಳಲಾಗಿತ್ತು.

ಅದಕ್ಕೆ ಸ್ಪಂದಿಸಿದ ರಾಯಭಾರಿ ಕಛೇರಿಯು ಸದರಿ ಸಂತ್ರಸ್ಥರು ಇರುವ ಸ್ಥಳದಲ್ಲಿಯೇ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಸಮಸ್ಯೆ ಅಥವಾ ಜೀವಹಾನಿಗೆ ಗುರಿಯಾಗಿಲ್ಲವೆಂದು ಹಾಗೂ ನೆದರ್‍ಲೆಂಡ್‍ನ ಸರ್ಕಾರವು ಎಲ್ಲಾ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬೋಯಿಂಗ್-747 ವಿಮಾನವನ್ನ ಸೆಪ್ಟಂಬರ್ 16 ರಂದು ಕಳುಹಿಸಿದ್ದು ಈಗಾಗಲೇ ಬಹಳಷ್ಟು ಜನರನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿರುತ್ತಾರೆ ಎಂದು ಅನಿವಾಸಿ ಭಾರತೀಯ ಸಮಿತಿ  ಉಪಾಧ್ಯಕ್ಷೆ ಆರತಿಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version