Home Mangalorean News Kannada News ಈ ಬಾರಿ ಇಫ್ತಾರ್‌ ಕೂಟ ಇಲ್ಲ; ಪೇಜಾವರ ಶ್ರೀಗಳು

ಈ ಬಾರಿ ಇಫ್ತಾರ್‌ ಕೂಟ ಇಲ್ಲ; ಪೇಜಾವರ ಶ್ರೀಗಳು

Spread the love

ಈ ಬಾರಿ ಇಫ್ತಾರ್‌ ಕೂಟ ಇಲ್ಲ; ಪೇಜಾವರ ಶ್ರೀಗಳು

ತುಮಕೂರು: ಈ ಭಾರಿ ತಾವು ಪ್ರವಾಸದಲ್ಲಿ ಇರುವುದರಿಂದ ಇಫ್ರಿಯಾರ್‌ ಕೂಟ ಏರ್ಪಡಿಸಲು ಸಾಧ್ಯವಾಗಲಿಲ್ಲ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ತುಮಕೂರು ಜಿಲ್ಲಾ ಮಾಧ್ವ ಬ್ರಾಹ್ಮಣರ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಉಡುಪಿ ಮಠದಲ್ಲಿ ಇಫ್ತಾರ್‌ ಕೂಟ ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀಗಳು, ಕಳೆದ ಭಾರಿ ಆಯೋಜನೆ ಮಾಡಲಾಗಿತ್ತು. ಈ ಭಾರಿ ತಾವು ಪ್ರವಾಸದಲ್ಲಿ ಇರುವುದರಿಂದ ಇಫ್ರಿಯಾರ್‌ ಕೂಟ ಏರ್ಪಡಿಸಲು ಸಾಧ್ಯವಾಗಲಿಲ್ಲ. ಜತೆಗೆ ಮಠದಲ್ಲಿ ಇಫ್ತಾರ್‌ ಕೂಟ ಆಯೋಜನೆಗೆ ಮುಸ್ಲಿಂ ಬಾಂಧವರಲ್ಲಿ ಆಸಕ್ತಿ ಇದ್ದಂತಿಲ್ಲ. ಕಳೆದ ಬಾರಿ ದೇವರ ಮೂರ್ತಿ ಇರುವ ಕೊಠಡಿಯಲ್ಲಿ ಇಫ್ತಾರ್‌ ಆಯೋಜನೆ ಮಾಡಿದ್ದರು ಎಂಬ ಅಪನಂಬಿಕೆ ಅವರಲ್ಲಿದೆ. ಆದರೆ, ಆ ಕೊಠಡಿಯಲ್ಲಿ ಮೂರ್ತಿ ಇರಲಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಮೋದಿ ಸರಕಾರದ ವಿರುದ್ಧ ನಾನು ಟೀಕೆ ಮಾಡಿಲ್ಲ. ಕೇಂದ್ರ ಸರಕಾರಕ್ಕೆ ಸಲಹೆ ಅಷ್ಟೇ ನೀಡಿದ್ದೇನೆ. ಮೋದಿ ಸರಕಾರದ ವಿರುದ್ಧ ನಾನು ಟೀಕೆ ಮಾಡಿಲ್ಲ. ಕೇಂದ್ರ ಸರಕಾರಕ್ಕೆ ಸಲಹೆ ಅಷ್ಟೇ ನೀಡಿದ್ದೇನೆ.

ತಮ್ಮ ಹೇಳಿಕೆಯನ್ನು ಮಾಧ್ಯಮಗಳು ಅಪಾರ್ಥ ಮಾಡಿಕೊಂಡಿವೆ. ಗಂಗಾ ಶುದ್ಧೀಕರಣ ಕೆಲಸ ಮತ್ತಷ್ಟು ಚುರುಕುಗೊಳಿಸುವಂತೆ, ವಿದೇಶದಿಂದ ಕಪ್ಪುಹಣ ಶೀಘ್ರ ತರುವಂತೆ ಸಲಹೆ ನೀಡಿದ್ದೆ. ಇದನ್ನು ಮಾಧ್ಯಮಗಳು ಪ್ರಧಾನಿ ಮೋದಿ ವಿರುದ್ಧ ಟೀಕೆ ಎಂದು ಅಪಾರ್ಥ ಮಾಡಿಕೊಂಡಿವೆ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಎರಡು ಪಕ್ಷ ಕ್ಕಿಂತ ಸರ್ವ ಪಕ್ಷ ಆಡಳಿತ ಬಂದರೆ ಒಳ್ಳೆಯದು. ಆಗ ರೆಸಾರ್ಟ್‌ ರಾಜಕಾರಣ, ಕುದುರೆ ವ್ಯಾಪಾರ ನಿಲ್ಲುತ್ತದೆ ಎಂದ ಅವರು, ಚುನಾವಣೆಗೂ ಮುನ್ನ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳ ಮುಖಂಡರು ಬೈದಾಡಿಕೊಂಡಿದ್ದರು. ಈಗ ಜತೆಯಾಗಿದ್ದಾರೆ. ಇಂತಹವರಿಂದ ಸ್ಥಿರ ಸರಕಾರ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ವಿರೋಧ ಪಕ್ಷ ಇಲ್ಲದೇ ಇದ್ದರೂ ಪರವಾಗಿಲ್ಲ. ಸರ್ವ ಪಕ್ಷ ದ ಸರಕಾರ ಅಧಿಕಾರಕ್ಕೆ ಬರುವಂತಾಗಬೇಕು. ಯೂರೋಪ್‌ ಮತ್ತು ಇಂಗ್ಲೆಂಡ್‌ನಲ್ಲಿ ಸರ್ವ ಪಕ್ಷ ಸರಕಾರ ರಚನೆಯಾದ ಮಾದರಿ ಇದೆ. ಯಾವುದೇ ಪಕ್ಷ ಕ್ಕೆ ಬಹುಮತ ಬರದಿದ್ದಾಗ ಸರ್ವ ಪಕ್ಷ ಆಡಳಿತ ಬರಲಿ ಎಂಬುದು ನಮ್ಮ ಆಶಯ ಎಂದರು.


Spread the love

Exit mobile version