ಉಚಿತ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಮನವಿ
ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI), ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ವಿಭಾಗೀಯ ನಿಯಂತ್ರಣ ಅಧಿಕಾರಿ ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗಕ್ಕೆ ಮನವಿ ಪತ್ರ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಸಂಖ್ಯೆ ಹೆಚ್ಚಾಗಿದ್ದು ಹಾಗೆಯೇ ಎಷ್ಟೊ ಪ್ರದೇಶಗಳಲ್ಲಿ ಸರಕಾರಿ ಬಸ್ಸಿನ ಸೌಲಭ್ಯ ಇರುವುದಿಲ್ಲ.ಹಾಗಾಗಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಾರೆ.ಹಾಗಾಗಿ ಉಚಿತ ಬಸ್ಸ್ ಪಾಸ್ ಕೇವಲ ಸರಕಾರಿ ಬಸ್ಸುಗಳಿಗೆ ಅನ್ವಯ ಮಾಡದೆ ಖಾಸಗಿ ಬಸ್ಸುಗಳಿಗೂ ಅನ್ವಯ ಮಾಡಬೇಕೆಮದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ನ ಜಿಲ್ಲಾ ಅಧ್ಯಕ್ಷರಾದ ಚರಣ್ ಶೆಟ್ಟಿ ಪಂಜಿಮೊಗರು,ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ್,ಮಂಗಳೂರು ನಗರ ಕಾರ್ಯದರ್ಶಿ ಮಯೂರಿ ಬೋಳಾರ್,ಸುಹಾಸ್ ಬೆಳ್ತಂಗಡಿ,ಗಣೇಶ್ ಬೋಳಾರ್,ಕೌಶಿಕ್,ಶರಣಪ್ಪ ಉಪಸ್ಥಿತರಿದ್ದರು.