Home Mangalorean News Kannada News ಉಜಿರೆಯಲ್ಲಿ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ

ಉಜಿರೆಯಲ್ಲಿ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ

Spread the love

ಉಜಿರೆ: ಧರ್ಮಸ್ಥಳದ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ತಡೆಗಟ್ಟುವಿಕೆಗಾಗಿ ಉಜಿರೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾದ ಜಾಗೃತಿ ಸೌಧ ಹಾಗೂ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ   ಧಮರ್ಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.

image001skdrp-janajagruthi-hall-20160611

ಜಾಗೃತಿ ಸೌಧವನ್ನು ಜನ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಉದ್ಘಾಟಿಸಿದರು.

ಮದ್ಯಪಾನ ಮಾಡುವವರನ್ನು ಮನಸ್ಸು ಪರಿವರ್ತನೆಯೊಂದಿಗೆ ಸ್ವಯಂ ಪ್ರೇರಣೆಯಿಂದ ವ್ಯಸನಮುಕ್ತರನ್ನಾಗಿ ಮಾಡುವ ಕಾರ್ಯ ಅತ್ಯಂತ ಪವಿತ್ರವಾಗಿದೆ. ಶ್ರದ್ಧೆ, ಬದ್ಧತೆ ಮತ್ತು ದೃಢ ಸಂಕಲ್ಪದೊಂದಿಗೆ ಜನ ಜಾಗೃತಿ ವೇದಿಕೆ ಮೂಲಕ ಮದ್ಯಪಾನದ ವಿರುದ್ಧ ಹೋರಾಟ ನಿರಂತರ ಮುಂದುವರಿಯಲಿದೆ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಮತ್ತು ಅಖಿಲ ಕನರ್ಾಟಕ ಜನ ಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ತಡೆಗಟ್ಟುವಿಕೆಗಾಗಿ ಉಜಿರೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾದ ಜಾಗೃತಿ ಸೌಧ ಹಾಗೂ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.

ಮದ್ಯಪಾನ ಮಾಡುವ ವಾಹನ ಚಾಲಕರಿಂದ ಹೆಚ್ಚಿನ ಅಪಘಾತಗಳು ನಡೆಯುತ್ತವೆ. ಆದರೆ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವುದರಿಂದ ಅಪಘಾತ ಸಂಭವಿಸಿದೆ ಎಂದು ಯಾವತ್ತೂ ವರದಿಯಾಗುವುದಿಲ್ಲ. ಮಾಧ್ಯಮದವರು ಕೂಡಾ ಈ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಇತ್ತೀಚೆಗೆ ಯುವಜನತೆ ಮದ್ಯಪಾನಕ್ಕೆ ಬಲಿಯಾಗುತ್ತಿರುವುದು ಖೇದಕರವಾಗಿದೆ. ಮದ್ಯಪಾನ ಮಾಡುವವರು ಪಾಪಿಗಳಲ್ಲ, ದುಷ್ಟರಲ್ಲ. ಯಾವುದೋ ಅನಿವಾರ್ಯ ಒತ್ತಡದ ಪರಿಸ್ಥಿತಿಯಿಂದ ಅವರು ಮದ್ಯಪಾನಕ್ಕೆ ಬಲಿಯಾಗಬಹುದು. ಮದ್ಯವರ್ಜನ ಶಿಬಿರಕ್ಕೆ ಸೇರಿ ಹೊರಗೆ ಬರುವಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟು ಪವಿತ್ರಾತ್ಮರಾಗುತ್ತಾರೆ. ಆತ್ಮ ನಿವೇದನೆಯೊಂದಿಗೆ ಅವರು ಮಾಡಿದ ತಪ್ಪಿಗೆ ಪಶ್ಚತ್ತಾಪ ಪಟ್ಟಾಗ ದೇವರು ಕೂಡಾ ಅವರನ್ನು ಕ್ಷಮಿಸುತ್ತಾರೆ. ಮದ್ಯವ್ಯಸನಿಗಳ ಸೇವೆ ಅತ್ಯಂತ ಪವಿತ್ರ ಹಾಗೂ ಪುಣ್ಯದ ಕಾಯಕವಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯ ಪಟ್ಟರು.

ಈಗಾಗಲೇ 23 ಜಿಲ್ಲೆಗಳಲ್ಲಿ 911 ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿದ್ದು 1000 ನೇ ಶಿಬಿರವನ್ನು ಮೂಡಬಿದ್ರೆಯ ಡಾ.ಎಂ ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಸಕರ್ಾರ ಮತ್ತು ಸಮಾಜ ಮದ್ಯವ್ಯಸನಿಗಳನ್ನು ಜಾಗೃತಿಗೊಳಿಸುವ ಮೂಲಕ ಕೆಲಸವನ್ನು ಮಾಢಬೇಕು ಎಂದು ಅವರು ಸಲಹೆ ನೀಡಿದರು.

ಭೂತದ ಕೋಲದಲ್ಲಿ ಕೆಲವರು ಭಯದಿಂದ ಮದ್ಯ ಸಮರ್ಪಣೆ ಮಾಡುತ್ತಾರೆ. ಆದರೆ ಭೂತ ಎಂದೂ ಮದ್ಯವನ್ನು  ನಿರೀಕೆ ಮಾಡುವುದಿಲ್ಲ.

ಮದ್ಯದ ಬದಲು ಹಾಲು ಸಮಪರ್ಿಸಿ ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಈ ಬಗ್ಗೆ ಯಾರಿಗಾದರೂ ಭಯವಿದ್ದಲ್ಲಿ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಮೂಲಕ “ಅಭಯ” ನೀಡುವುದಾಗಿ ಅವರು ಭರವಸೆ ನೀಡಿದರು. ಭೂತ ನರ್ತನ ಮಾಡುವವರೂ ಮದ್ಯಪಾನ ಮಾಡಬಾರದು. ಭೂತಕ್ಕೂ ಮದ್ಯ ಸಮರ್ಪಣೆ ಸಲ್ಲದು ಎಂದು ಅವರು ಸ್ಪಷ್ಟ ಪಡಿಸಿದರು.

ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಕಿರುಚಿತ್ರ ಬಿಡುಗಡೆ ಮಾಡಿದ ಸಂಸದ ನಳಿನ್ಕುಮಾರ್ ಕಟೀಲ್ ಮಾತನಾಡಿ ಗ್ರಾಮ ರಾಜ್ಯದ ಮೂಲಕ ರಾಮರಾಜ್ಯ ಕಟ್ಟುವ ಗಾಂಧಿಜಿ ಕಂಡ ಕನಸು ಧರ್ಮಸ್ಥಳದ ಮೂಲಕ ನನಸಾಗುತ್ತಿದೆ. ತಮ್ಮ ಕುಟುಂಬ ಮತ್ತು ಸಮಾಜದಿಂದ ಕಡೆಗಣಿಸಲ್ಪಟ್ಟ ಮದ್ಯವ್ಯಸನಿಗಳು ವ್ಯಸನಮುಕ್ತರಾಗಿ ಸ್ವಾಭಿಮಾನಿಗಳಾಗಿ ಬದುಕಲು ಪ್ರೇರೇಪಿಸುವ ಜನ ಜಾಗೃತಿ ವೇದಿಕೆಯ ಕಾರ್ಯವನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.

ಜಾಗೃತಿ ಸೌಧವನ್ನು ಜನ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಉದ್ಘಾಟಿಸಿ ಶುಭ ಹಾರೈಸಿದರು. ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು.

ಕನರ್ಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಂ.ಆರ್ ರಂಗಶಾಮಯ್ಯ ಶುಭಾಶಂಸನೆ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಡಿ.ಸುರೇಂದ್ರ ಕುಮಾರ್ ಹರ್ಷೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸೌಮ್ಯಲತಾ, ತಾ.ಪಂ ಸದಸ್ಯ ಸುಧಾಕರ ಬಿ.ಎಲ್ ಮತ್ತು ಲಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ರಾವ್ ಉಪಸ್ಥಿತರಿದ್ದರು.

ಜನ ಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ.ಪಾಯಿಸ್ ಸ್ವಾಗತಿಸಿದರು. ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ನ ಕಾರ್ಯದರ್ಶಿ ಶಿಶುಪಾಲ ಪೂವಣಿ ಧನ್ಯವಾದವಿತ್ತರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಧನ್ಯವಾದವಿತ್ತರು.


Spread the love

Exit mobile version