Home Mangalorean News Kannada News ಉಡುಪಿಯಲ್ಲಿ ಎಂಸಿಸಿ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಸ್ಥಾಪನೆ: ನೂತನ ಅಧ್ಯಕ್ಷ ಅನಿಲ್ ಲೋಬೊ

ಉಡುಪಿಯಲ್ಲಿ ಎಂಸಿಸಿ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಸ್ಥಾಪನೆ: ನೂತನ ಅಧ್ಯಕ್ಷ ಅನಿಲ್ ಲೋಬೊ

Spread the love

ಉಡುಪಿಯಲ್ಲಿ ಎಂಸಿಸಿ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಸ್ಥಾಪನೆ: ನೂತನ ಅಧ್ಯಕ್ಷ ಅನಿಲ್ ಲೋಬೊ

ಮಂಗಳೂರು : ಉಡುಪಿಯಲ್ಲಿ ಪ್ರಾದೇಶಿಕ ಕಚೇರಿಯ ಸ್ಥಾಪನೆ, ಹೆಚ್ಚುವರಿ ಶಾಖೆಗಳನ್ನು ತೆರೆಯುವ ಗುರಿಯೊಂದಿಗೆ ಯುವಜನರಿಗೆ ಉದ್ಯೋಗವಕಾಶ ಕಲ್ಪಿಸುವ ಯೋಜನೆ ಸಹಿತ ಮುಂದಿನ 5 ವರ್ಷಗಳೊಳಗೆ ಹಲವು ಸಾಧನೆಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಮ್ಯಾಂಗಳೂರು ಕೆಥೊಲಿಕ್ ಕೋ-ಅಪರೇಟಿವ್ ಬ್ಯಾಂಕ್(ಎಂಸಿಸಿ ಬ್ಯಾಂಕ್)ನ ನೂತನ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.

ಬ್ಯಾಂಕ್‌ನ ಸಭಾಂಗಣದಲ್ಲಿ ಬುಧವಾರ ಪದಗ್ರಹಣದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು,ಎಮ್.ಸಿ.ಸಿ. ಬ್ಯಾಂಕಿಗೆ ನೂರಾ ಅರು ವರ್ಷಗಳ ಇತಿಹಾಸವಿದ್ದು, ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಮ್ಮ ಬ್ಯಾಂಕ್ ಈಗಾಗಲೇ 16 ಶಾಖೆಗಳನ್ನು ಹೊಂದಿದೆ. ಕಳೆದ ಭಾನುವಾರ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಬ್ಯಾಂಕಿನ ಸದಸ್ಯರು ನನ್ನ ನಾಯಕತ್ವದ ತಂಡದ ಎಲ್ಲಾ 13 ( ಸಾಮಾನ್ಯ 11 ಹಾಗೂ ಮಹಿಳಾ ಮೀಸಲು 2 ) ಸದಸ್ಯರನ್ನು ಆರಿಸಿ ಸಂಪೂರ್ಣ ಬಹುಮತವನ್ನು ನೀಡಿರುತ್ತಾರೆ.

ಮೊತ್ತಮೊದಲಾಗಿ ನಮ್ಮನ್ನು ಆರಿಸಿದ ಬ್ಯಾಂಕಿನ ಎಲ್ಲಾ ಸದಸ್ಯರಿಗೆ, ಚುನಾವಣೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟ ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ, ಬ್ಯಾಂಕಿನ ಸಿಬ್ಬಂದಿಯವರಿಗೆ ಹಾಗೂ ನನ್ನ ನಾಯಕತ್ವದ ತಂಡದ ಪರವಾಗಿ ಅಹರ್ನಿಶಿ ದುಡಿದ ಮಿತ್ರರು ಹಾಗೂ ಹಿತೈಶಿಗಳಿಗೆ ತಮ್ಮ ಮಾದ್ಯಮದ ಮೂಲಕ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ.

ಬ್ಯಾಂಕಿನ ಸದಸ್ಯರು ನಮ್ಮ ತಂಡಕ್ಕೆ ಸಂಪೂರ್ಣ ಬಹುಮತವನ್ನು ನೀಡಿರುವುದರಿಂದ ನಾವು ಏನು ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳನ್ನು ನೀಡಿದ್ದೇವೆ ಅವುಗಳನ್ನು ಒಂದೊಂದಾಗಿ ಜಾರಿಗೊಳಿಸುವ ಮಹತ್ವದ ಜವಾಬ್ದಾರಿ ಈಗ ನಮ್ಮ ಮೇಲಿದೆ. ಈ ಜವಾಬ್ದಾರಿಯನ್ನು ಪಾಲಿಸಲು ನಾವೆಲ್ಲ ಬದ್ದರಾಗಿದ್ದೇವೆ.

ಈ ದಿನ ನಾನು, ಅನಿಲ್ ಲೋಬೊ, ಫೆರ್ಮಾಯ್ ಬ್ಯಾಂಕಿನ ನೂತನ ಅಧ್ಯಕ್ಷನಾಗಿ ಮತ್ತು ಶ್ರೀ ಜೆರಾಲ್ಡ್ ಜೂಡ್ ಡಿ’ಸಿಲ್ವ, ಮಿಯಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವೆಲ್ಲ ನಿಮ್ಮ ಆಶೀರ್ವಾದ ಮತ್ತು ಸಹಕಾರ ಕೋರುತ್ತಿದ್ದೇವೆ.

ನಿಮಗೆಲ್ಲಾ ತಿಳಿದಿರುವಂತೆ ನಾವು ಬ್ಯಾಂಕಿನ ಚುನಾವಣೆಯಲ್ಲಿ ವ್ಯಸ್ತರಾಗಿದ್ದುದರಿಂದ ನಮ್ಮ ನೆರೆಯ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾದ ಹಾನಿಗೆ ಸ್ಪಂದಿಸುವುದಕ್ಕೆ ಕೊಂಚ ವಿಳಂಬವಾಯಿತು. ಆದರೆ ಈ ದಿನ ನಾವೆಲ್ಲ ನಿರ್ದೇಶಕರು ಸೇರಿ ನಮ್ಮ ಖಾಸಗಿ ದೇಣಿಗೆಯಾಗಿ ರುಪಾಯಿ 25,000/- ಮಾನ್ಯ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿ ಕೊಡುತ್ತಿದ್ದೇವೆ. ಮುಂದೆ ಇನೂ ಹೆಚ್ಚಿನ ಸಹಾಯಹಸ್ತವನ್ನು ನೀಡಲು ಶ್ರಮಿಸುತ್ತೇವೆ.

ನನ್ನ ನಾಯಕತ್ವದ ತಂಡದ ಬಗ್ಗೆ ಹೇಳುವುದಾದಾರೆ, ನಮ್ಮ ತಂಡದಲ್ಲಿ ಬ್ಯಾಂಕಿಂಗ್, ಆಡಳಿತ, ಶಿಕ್ಷಣ ಕ್ಷೇತ್ರ, ಕಾನೂನು, ಸಹಕಾರಿ ಕ್ಷೇತ್ರ, ಮಾನವ ಸಂಪನ್ಮೂಲ ಅಭಿವೃದ್ದಿ ಹಾಗೂ ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಅಪಾರ ಅನುಭವವಿರುವ ನಿರ್ದೇಶಕರಿದ್ದಾರೆ.

ಸದ್ಯದಲ್ಲೇ ಬ್ಯಾಂಕಿನ ಗ್ರಾಹಕರು, ಹಿತಚಿಂತಕರು ಹಾಗೂ ಅನುಭವಿಗಳ ಸಲಹಾ ಸಮಿತಿಯನ್ನೂ ರಚಿಸಲಾಗುವುದು. ಸಮಿತಿಯ ಸಲಹೆ ಮತ್ತು ಗ್ರಾಹಕರ ಸಹಕಾರದಿಂದ, ಈ ಹಿಂದಿನ ಆಡಳಿತ ಮಂಡಳಿ ಆರಂಭಿಸಿದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ, ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಈ ಕೆಳಗಿನ ಕಾರ್ಯಕ್ರಮಗಳನ್ನೂ ಒಂದೊಂದಾಗಿ ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.

ಬ್ಯಾಂಕ್‌ನ್ನು ಪ್ರಗತಿಪಥದತ್ತ ಕೊಂಡೊಯ್ಯುವುದೇ ಮಂಡಳಿಯ ಉದ್ದೇಶವಾಗಿದೆ. ಇದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಸದ್ಯ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಎಟಿಎಂ ವ್ಯವಸ್ಥೆಯಿದ್ದು, ಇನ್ನೂ ನಾಲ್ಕು ಬ್ಯಾಂಕ್‌ಗಳಿಗೆ ಎಟಿಎಂ ಅಳವಡಿಸಲು ಆರ್‌ಬಿಐ ಅನುಮತಿ ನೀಡಿದೆ ಎಂದರು.

ಬ್ಯಾಂಕ್‌ನ ಸಿಬ್ಬಂದಿ ವರ್ಗಕ್ಕೆ ಕೌಶಲ ತರಬೇತಿ, ಅವರ ವೇತನದಲ್ಲಿ ಪರಿಷ್ಕರಣೆ, ಸವಲತ್ತುಗಳು ವಿತರಣೆಯಲ್ಲದೆ, 18 ವರ್ಷ ಪ್ರಾಯದವರೆಗಿನ ವಿದ್ಯಾರ್ಥಿಗಳಿಗೆ ವಿಶೇಷ ಉಳಿತಾಯ ಖಾತೆಯ ಯೋಜನೆ ರೂಪಿಸಲಾಗುವುದು. ಸಮುದಾಯದ ಅಭಿವೃದ್ಧಿಗೆ ಸಿಎಸ್‌ಆರ್ ಫಂಡ್‌ನಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅನಿಲ್ ಲೋಬೊ ವಿವರಿಸಿದರು.

ಆಡಳಿತ ಮಂಡಳಿಯ ಚುನಾವಣೆಯ ಸಂದರ್ಭ ಅನೇಕ ಭರವಸೆಗಳನ್ನು ನೀಡಲಾಗಿತ್ತು. ಅದನ್ನು ಪ್ರಾಮಾಣಿಕವಾಗಿ ಈಡೇರಿಸಲು ಕ್ರಮ ಜರುಗಿಸಲಾಗುವುದು ಎಂದು ಅನಿಲ್ ಲೋಬೊ ತಿಳಿಸಿದರು.


Spread the love

Exit mobile version