Spread the love
ಉಡುಪಿಯಲ್ಲಿ ಕೊರೋನಾ ಹೆಚ್ಚಳ – ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಗೆ ತಾತ್ಕಾಲಿಕ ತಡೆ
ಉಡುಪಿ: ಉಡುಪಿಯಲ್ಲಿ ಪ್ರತಿನಿತ್ಯ ಕೊರೋನಾ ಪೀಡಿತರ ಸಂಖ್ಯೆ ಏರುತ್ತಲೇ ಹೋಗುತ್ತಿರುವುದರಿಂದ ಉಡುಪಿಯ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝನ್ನು ತಾತ್ಕಾಲಿಕವಾಗಿ ತಡೆಯಿಡಿಯಲಾಗಿದೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.
ಕೊರೋನಾ ನಿಯಂತ್ರಣದ ಕಾರಣ ಸರಕಾರ ಇತ್ತೀಚೆಗೆ ಜಾರಿಗೊಳಿಸಿದ ಆದೇಶದಂತೆ ಧಾರ್ಮಿಕ ಆರಾಧನಾಲಯಗಳಲ್ಲಿ 20ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಜೊತೆಗೆ ಉಡುಪಿಯಲ್ಲಿ ಪ್ರತಿನಿತ್ಯ ಕೊರೋನಾ ಪೀಡಿತರ ಸಂಖ್ಯೆ ಏರುತ್ತಲೇ ಹೋಗುತ್ತಿರುವುದು ಆತಂಕಕಾರಿಯಾಗಿದೆ. ಆದುದರಿಂದ ಮುಂಜಾಗೃತಾ ಕ್ರಮವಾಗಿ ನಗರ ಪ್ರದೇಶದಲ್ಲಿರುವ ಉಡುಪಿ ಜಾಮಿಯಾ ಮಸೀದಿಯ ಎಲ್ಲಾ ರೀತಿಯ ಸಾಮೂಹಿಕ ನಮಾಝನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಆದುದರಿಂದ ಮನೆಯಲ್ಲಿಯೇ ನಮಾಝನ್ನು ನಿರ್ವಹಿಸುವಂತೆ ಮತ್ತು ಆಡಳಿತ ಸಮಿತಿಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
Spread the love