Home Mangalorean News Kannada News ಉಡುಪಿಯಲ್ಲಿ ಜೆನರ್ಮ್ ಬಸ್ ಬಸ್ಸುಗಳ ಓಡಾಟಕ್ಕೆ ಸಚಿವ ಪ್ರಮೋದ್ ಹಸಿರು ನಿಶಾನೆ

ಉಡುಪಿಯಲ್ಲಿ ಜೆನರ್ಮ್ ಬಸ್ ಬಸ್ಸುಗಳ ಓಡಾಟಕ್ಕೆ ಸಚಿವ ಪ್ರಮೋದ್ ಹಸಿರು ನಿಶಾನೆ

Spread the love

ಉಡುಪಿಯಲ್ಲಿ ಜೆನರ್ಮ್ ಬಸ್ ಬಸ್ಸುಗಳ ಓಡಾಟಕ್ಕೆ ಸಚಿವ ಪ್ರಮೋದ್ ಹಸಿರು ನಿಶಾನೆ

ಉಡುಪಿ : ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರೀಕರ ಹಿತವನ್ನು ಗಮನದಲ್ಲಿರಿಸಿ ಉಡುಪಿಯಲ್ಲಿ ನೂತನ ಅತ್ಯಾಧುನಿಕ ಜೆನರ್ಮ್ 14 ಬಸ್ಸುಗಳು ಇಂದಿನಿಂದ ಓಡಾಡಲಿವೆ ಎಂದು ರಾಜ್ಯ ಮೀನುಗಾರಿಕೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

low-floor-JNNURM-buses-udupi-20160907-00

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ಇಂದು ಮಧ್ಯಾಹ್ನ ಮಹಾತ್ಮಗಾಂಧಿ ಬಯಲು ರಂಗಮಂದಿರ ಬೀಡಿನಗುಡ್ಡೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಸ್ಸುಗಳ ಓಡಾಟಕ್ಕೆ ಬಲೂನು ಹಾರಿಬಿಡುವ ಮೂಲಕ ಸಚಿವರು ಹಸಿರು ನಿಶಾನೆ ತೋರಿದರು.

ಮಣಿಪಾಲ-ಉಡುಪಿ- ಆದಿಉಡುಪಿ-ಮಲ್ಪೆ,- ತೊಟ್ಟಂ-ಹೊಡೆ, ಉಡುಪಿ-ನಿಟ್ಟೂರು-ಸಂತೆಕಟ್ಟೆ-ಕೆಮ್ಮಣ್ಣು-ಹೊಡೆ,ರಜತಾದ್ರಿ-ಮಣಿಪಾಲ-ಉಡುಪಿ-ಮಿಷನ್ ಕಂಪೌಂಡ್-ಕರಂಗಲಪಾಡಿ-ಅಲೆವೂರು, ಕಲ್ಯಾಣಪುರ-ಸಂತೆಕಟ್ಟೆ-ಉಡುಪಿ-ದೊಡ್ಡಣಗುಡ್ಡೆ-ಚಕ್ರತೀರ್ಥ-ಎಂಜಿಎಂ-ಉಡುಪಿ-ರಜತಾದ್ರಿ, ಪರ್ಕಳ-ಮಣಿಪಾಲ-ಉಡುಪಿ-ಉದ್ಯಾವರ-ಪಿತ್ರೋಡಿ-ಕಮಾನು, ಕೆಳರ್ಕಳಬೆಟ್ಟು-ಮುಡುಬೆಟ್ಟು-ಉಡುಪಿ-ಮಣಿಪಾಲ-ಹೆರ್ಗ, ಉಡುಪಿ-ನಿಟ್ಟೂರು-ಸಂತೆಕಟ್ಟೆ-ಕೆಳರ್ಕಳಬೆಟ್ಟು-ಕೊಡವೂರು-ಮಲ್ಪೆ,ಅನಂತನಗರ-ಮಣಿಪಾಲ-ಎಂಜಿಎಂ-ಇಂದಿರಾನಗರ-ಕುಕ್ಕಿಕಟ್ಟೆ-ಉಡುಪಿ-ಮಲ್ಪೆ, ಮಲ್ಪೆ ಬೀಚ್ ರೂಟ್‍ಗಳಲ್ಲಿ ಬಸ್ ಸಂಚರಿಸಲಿದೆ.

ಉಡುಪಿ ನಗರಕ್ಕೆ 24 ಗಂಟೆ ವಿದ್ಯುತ್ ಹಾಗೂ ನರ್ಮ್ ಬಸ್ ಉಡುಪಿಗೆ ಎಂದು ಚುನಾವಣಾ ಪ್ರಚಾರ ವೇಳೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಾಗಿದೆ; ನುಡಿದಂತೆ ನಡೆದಿದ್ದೇನೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ ಶೇ. 25ರಷ್ಟು ಪ್ರಯಾಣ ದರದ ರಿಯಾಯಿತಿ, ನಿತ್ಯ ಪ್ರಯಾಣಿಕರಿಗೆ ಮಾಸಿಕ ರಿಯಾಯಿತಿ ಸೇರಿದಂತೆ ಕೆ ಎಸ್ ಆರ್ ಟಿಸಿ ನೀಡುತ್ತಿರುವ ಸೌಲಭ್ಯಗಳ ವಿವರಗಳನ್ನು ಸಚಿವರು ವಿವರಿಸಿದರು.

ನರ್ಮ್ ಬಸ್ಸಿನಲ್ಲಿ 7ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಾವಕಾಶ ಒದಗಿಸಲಾಗಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹತ್ತು ತಿಂಗಳಿಗೆ 600 ರೂ., ವಿದ್ಯಾರ್ಥಿನಿಯರಿಗೆ 500 ರೂ., ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಕಾಲೇಜು, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 900 ರೂ., ಉಳಿದ ವಿದ್ಯಾರ್ಥಿಗಳಿಗೆ 1,400, ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ 1,200 ರೂ. ನಿಗದಿಪಡಿಸಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಚಿವರು ಕರೆನೀಡಿದರು.

ನಗರಸಭೆ ಅಧ್ಯಕ್ಷ ಮೀನಾಕ್ಷಿ ಬನ್ನಂಜೆ, ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷ ವೆರೊನಿಕ ಕರ್ನೆಲಿಯೋ, ನಗರಸಭೆ ಸದಸ್ಯರು, ವಿದ್ಯಾಂಗ ಉಪನಿರ್ದೇಶಕರು ದಿವಾಕರ ಶೆಟ್ಟಿ, ಡಿಡಿಪಿಯು ಆರ್.ಬಿ.ನಾಯಕ್, ನಗರದ ಸುತ್ತಮುತ್ತಲಿನ ಶಾಲಾ ಕಾಲೇಜುಗಳ ಪ್ರಾಂಶುಪಾಲರು ವೇದಿಕೆಯಲ್ಲಿದ್ದರು. ವಿಭಾಗೀಯ ಸಂಚಾರಾಧಿಕಾರಿ ಜೈಶಾಂತ್, ನಗರಸಭಾ ಉಪಾಧಯಕ್ಷ ಸಂಧ್ಯಾ ತಿಲಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಕೌನ್ಸಿಲರ್‍ಗಳಾದ ಸೆಲಿನಾ ಕರ್ಕೇರಾ, ಶಾಂತಾರಾಂ ಸಾಲ್ವಂಕರ್ ಉಪಸ್ಥಿತರಿದ್ದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ ಸ್ವಾಗತಿಸಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version