Home Mangalorean News Kannada News ಉಡುಪಿಯಲ್ಲಿ ದಾಖಲೆಯಿಲ್ಲದ 2 ಸಾವಿರ ಮುಖಬೆಲೆಯ 71ಲಕ್ಷ ರೂ. ಹಣ ಪತ್ತೆ

ಉಡುಪಿಯಲ್ಲಿ ದಾಖಲೆಯಿಲ್ಲದ 2 ಸಾವಿರ ಮುಖಬೆಲೆಯ 71ಲಕ್ಷ ರೂ. ಹಣ ಪತ್ತೆ

Spread the love

ಉಡುಪಿಯಲ್ಲಿ ದಾಖಲೆಯಿಲ್ಲದ 2 ಸಾವಿರ ಮುಖಬೆಲೆಯ 71ಲಕ್ಷ ರೂ. ಹಣ ಪತ್ತೆ

 ಉಡುಪಿ: ಕಾರ್ಕಳ ತಾಲೂಕಿನ ಬೈಲೂರಿನಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳಲ್ಲಿರುವ 71 ಲಕ್ಷ ರೂ ಹಣವನ್ನು ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಕುದ್ರೋಳಿಯ ಇಮ್ರಾನ್, ದೀಪಕ್ ಹಾಗೂ ಆಸೀಫ್ ಅವರನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 ಮಂಗಳೂರಿನಿಂದ   ಕೆ.ಎ. 19 ಎಂ.ಸಿ.7249 ನಂಬರಿನ   ಕಾರಿನಲ್ಲಿ ಹೊಸ ನೋಟುಗಳನ್ನು ಸಾಗಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಸರ್ಕಲ್ ಇನ್ಸ್ ಪೆಕ್ಟರ್ ಜಾನ್ ಅಂಟೋನಿ, ಎಸ್‍ಐ ರಫೀಕ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಹಣ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಮಂಗಳೂರಿನ ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.


Spread the love

Exit mobile version