ಉಡುಪಿಯಲ್ಲಿ ಪ್ರತಿಭಟನೆ ವೇಳೆ ಪರಿಸ್ಥಿತಿ ಉದ್ವಿಗ್ನ; ಒರ್ವರಿಗೆ ಗುಂಡೇಟು, ಪೊಲೀಸರಿಗೂ ಗಾಯ, ಇದು ಅಣಕು ಕಾರ್ಯಾಚರಣೆ

Spread the love

ಉಡುಪಿ: ಉಡುಪಿಯಲ್ಲಿ ಮಂಗಳವಾರ ಸರ್ಕಾರದ ಧೋರಣೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದು ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಗುಂಡಿನ ಧಾಳಿ ನಡೆಸಿದ್ದಾರೆ. ಗುಂಡೇಟಿಗೆ ಓರ್ವ ಗಂಭೀರ ಗಾಯಗೊಂಡಿದ್ದಾನೆ. ಪ್ರತಿಭಟನಾಕಾರರು ಪೊಲೀಸ ಲಾಠಿಚಾರ್ಜ್ಗೆ ಬಗ್ಗದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾ ಕಾರರ ಮೇಲೆ ಗುಂಡು ಹಾರಿಸಲು ಸೂಚನೆ ನೀಡಿದರು. ಗಾಯಗೊಂಡವನ ಪರಿಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಹಲವು ಮಂದಿ ಪೊಲೀಸರೂ ಗಾಯಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೂ ಪಾಸ್ಥಿಗೂ ಹಾನಿಯಾಗಿದೆ. ಪೊಲೀಸ್ ವಾಹನಗಳೂ ಘಟನೆಯಲ್ಲಿ ಬೆಂಕಿಗಾಹುತಿಯಾಗಿದೆ. ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದ್ದಾರೆ.

ಇದು ಮಂಗಳವಾರ ನಗರದ ಪೊಲೀಸ್ ಕವಾಯತು ಮೈದಾನ ಚಂದು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಪೊಲೀಸರು ನಡೆಸಿದ ಅಣಕು ಕಾರ್ಯಾಚರಣೆಯ ವರದಿ.
ಸಾರ್ವಜನಿಕ ಪ್ರತಿಭಟನೆಗಳು ಗಂಭೀರ ಸ್ವರೂಪ ಪಡೆದಾಗ ಯಾವ ರೀತಿ ಪೊಲೀಸರು ಪ್ರತಿಭಟನೆಯನ್ನು ತಡೆಯುತ್ತಾರೆ ಎಂಬ ಬಗ್ಗೆ ಅಣಕು ಕಾರ್ಯಾಚರಣೆಯ ಮೂಲಕ ಪೊಲೀಸರು ಸಾರ್ವಜನಿಕರಿಗೆ ತೋರಿಸಿಕೊಟ್ಟರು.

police_mok_drill 28-04-2015 17-24-32 police_mok_drill 28-04-2015 17-28-19 police_mok_drill 28-04-2015 17-34-25 police_mok_drill 28-04-2015 17-45-58 police_mok_drill 28-04-2015 17-51-37 police_mok_drill 28-04-2015 17-52-36 police_mok_drill 28-04-2015 17-52-39 police_mok_drill 28-04-2015 17-52-46 police_mok_drill 28-04-2015 17-53-28

ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ ಮೊದಲು ಅವರಿಗೆ ಪ್ರತಿಭಟನೆ ನಿಲ್ಲಿಸುವಂತೆ ಕೆಂಪು ಬಾವುಟ ತೋರಿಸಲಾಗುತ್ತದೆ. ಆದರೂ ಪ್ರತಿಭಟನೆ ನಿಲ್ಲಿಸದಿದ್ದಾಗ ಮೊದಲಿಗೆ ಸಣ್ಣ ಪ್ರಮಾಣದ ಗ್ರಾನೈಡ್ಗಳನ್ನು ಪ್ರತಿಭಟನಾಕಾರರತ್ತ ಎಸೆಯಲಾಗುತ್ತದೆ. ಅದಕ್ಕೂ ಬಗ್ಗದಿದ್ದರೆ, ಡೈ ಮೇಕರ್ ಗ್ರಾನೈಡ್ಗಳನುನ ಹಾರಿಸಲಾಗುತ್ತದೆ. ಲಾಟಿ ಚಾರ್ಜ್ ಮಾಡಲಾಗುತ್ತದೆ. ಯಾವುದಕ್ಕೂ ಬಗ್ಗದಿದ್ದಾಗ ಕೊನೆಯದಾಗ ಪ್ರತಿಭಟಾಕಾರರ ಕಾಲಿಗೆ ಗುಂಡು ಹಾರಿಸಲಾಗ್ತುದೆ. ಗುಂಡೇಟಾದರೆ ಪೊಲೀಸರೇ ಅವರರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುತ್ತಾರೆ ಎಂಬುದನ್ನು ಕಾರ್ಯಾಚರಣೆಯಲ್ಲಿ ತೋರಿಸಲಾಯಿತು.

ಜಿಲ್ಲಾ ಪೊಲೀಸರ ಬಳಿಯಿರುವ ಪ್ರಮುಖ ನಾಯಿಗಳಾದ ಅರ್ಜುನ್, ಐಕಾನ್,ಬ್ರೂಟಸ್ ನಿಂದ ಕಳ್ಳನ ಪತ್ತೆ, ಬಾಂಬ್ ಪತ್ತೆ, ಮೊದಲಾದ ಕಸರತ್ತುಗಳು ನಡೆದವು.

ಪೊಲೀಸರ ಬಳಿಯಿರುವ ಸುಸಜ್ಜಿತ `ಗುರುಡಾ ವಾಹನ’ ವನ್ನು ಪ್ರದರ್ಶಿಸಿದರು. ಕ್ಯಾಮರಾ ಹೊಂದಿರುವ ಈ ವಾಹನದಲ್ಲಿ ಇಂಟನ್ ನೆಟ್ ವ್ಯವಸ್ಥೆಯಿದ್ದು, ಕ್ಯಾಮರಾ ಚಿತ್ರೀಕರಣ ನೇರವಾಗಿ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನೋಡಲು ಸಾಧ್ಯವಾಗುತ್ತದೆ.

ಕಾರ್ಯಾಚರಣೆ ಸಂದರ್ಭದಲ್ಲಿ ಜಿಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೆ, ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್, ಪೊಲೀಸ್ ನಿರೀಕ್ಷರಕಾರ ಉಮೇಶ್, ಸೀನಪ್ಪ ನಾಯಕ್, ಶೇಖ್ ಅಲಿ ,ಪುಟ್ಟಣ್ಣ, ಮಧು, ಟ್ರಾಫಿಕ್ ಇನ್ಸ್ಪೆಕ್ಟರ್ ಗೋಪಾಲ್, ಜಯ ಮೊದಲಾದವರು ಉಪಸ್ಥಿತರಿದ್ದರು.


Spread the love