Home Mangalorean News Kannada News ಉಡುಪಿಯಲ್ಲಿ ಮಕರ ಸಂಕ್ರಾಂತಿ‌ ಉತ್ಸವ; ಅದ್ದೂರಿ ತ್ರಿರಥೋತ್ಸವ

ಉಡುಪಿಯಲ್ಲಿ ಮಕರ ಸಂಕ್ರಾಂತಿ‌ ಉತ್ಸವ; ಅದ್ದೂರಿ ತ್ರಿರಥೋತ್ಸವ

Spread the love

ಉಡುಪಿಯಲ್ಲಿ ಮಕರ ಸಂಕ್ರಾಂತಿ‌ ಉತ್ಸವ; ಅದ್ದೂರಿ ತ್ರಿರಥೋತ್ಸವ

ಉಡುಪಿ: ಮಕರ ಸಂಕ್ರಮಣದ ಅಂಗವಾಗಿ ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಸೋಮವಾರ ರಾತ್ರಿ ನಡೆದ ಅದ್ದೂರಿ ತ್ರಿರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ವಿದ್ಯುತ್ ದೀಪ ಮತ್ತು ಬಣ್ಣ ಬಣ್ಣದ ಪತಾಕೆಗಳಿಂದ ಅಲಂಕೃತಗೊಂಡ ಮೂರು ರಥಗಳು ಒಟ್ಟಾಗಿ ಸಾಗಿ ಬಂದ ದೃಶ್ಯ ನಯನ ಮನೋಹರವಾಗಿತ್ತು. ಬಾನೆತ್ತರಕ್ಕೆ ಹಾರಿ ಸಿಡಿದ ಸಿಡಿಮದ್ದುಗಳು ಮೂಡಿಸಿದ ಚಿತ್ತಾರ ಗಮನ ಸೆಳೆಯಿತು.

ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರ ಉತ್ಸವ ಮೂರ್ತಿಯನ್ನು ಚಿನ್ನದ ಪರ್ಯಾಯ ಪಲಿಮಾರು ಮಠದ ಸ್ವಾಮೀಜಿಗಳು ಕೃಷ್ಣನ ಮೂರ್ತಿಯನ್ನು ಬೃಹ್ಮರಥದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿ ತ್ರಿರಥೋತ್ಸವಕ್ಕೆ ಚಾಲನೆ ನೀಡಿದರು. ರಥಗಳನ್ನು ಎಳೆದ ನೂರಾರು ಭಕ್ತರು ಧನ್ಯತೆ ಅನುಭವಿಸಿದರು.

ರಥೋತ್ಸವ ನೋಡಲು ಭಾರಿ ಜನಸ್ತೋಮವೇ ನೆರೆದಿತ್ತು ರಥೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಿಡಿಮದ್ದು ಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು.

ಪೇಜಾವರ, ಅದಮಾರು, ಕೃಷ್ಣಾಪುರ, ಸೋದೆ ಮಠದ ಸ್ವಾಮೀಜಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.


Spread the love

Exit mobile version