ಉಡುಪಿಯಲ್ಲಿ ಮುಂದುವರೆದ ಕೊರೋನಾರ್ಭಟ ಮತ್ತೆ 27 ಮಂದಿಗೆ ಪಾಸಿಟಿವ್
ಉಡುಪಿ: ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್ (ಕೋವಿಡ್-19) ಪ್ರಕರಣದ ಸಂಖ್ಯೆ ಜಿಲ್ಲೆಯಲ್ಲಿ ಮತ್ತೆ ಏರಿಕೆ ಕಂಡಿದ್ದುಗುರುವಾರ ಮತ್ತೆ 27 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸದ್ಯ ಜಿಲ್ಲೆಯ ಪಾಸಿಟಿವ್ ಪ್ರಕರಣದ ಸಂಖ್ಯೆ 147 ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಗುರುವಾರ ಮಧ್ಯಾಹ್ನ ಬಿಡುಗಡೆಗೊಳಿಸಿದ ಬುಲೆಟಿನ್ನಲ್ಲಿ ಜಿಲ್ಲೆಯಲ್ಲಿ 27 ಮಂದಿಯಲ್ಲಿ ಕೊರೊನಾ ಸೋಂಕು ಇರುವುದಾಗಿ ದೃಢಪಡಿಸಿದೆ.
ಗುರುವಾರ ಪತ್ತೆಯಾದ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದವರದ್ದೇ ಮಹಾಪಾಲು ಇದ್ದು ಒಟ್ಟು 24 ಮಂದಿಯಿದ್ದಾರೆ. ಉಳಿದಂತೆ 2 ತೆಲಂಗಾಣ ಮತ್ತು ಒರ್ವ ಕೇರಳದಿಂದ ಬಂದ ವ್ಯಕ್ತಿ ಕೊರೋನಾ ಸೋಂಕು ಪತ್ತೆಯಾಗಿದೆ.
ಸೋಂಕಿತರಲ್ಲಿ 18 ಪುರುಷರು, 8 ಮಹಿಳೆಯರು ಒಂದು ಹೆಣ್ಣು ಮಗು ಸೇರಿದೆ