Home Mangalorean News Kannada News ಉಡುಪಿಯಿಂದ ಹುಟ್ಟೂರು ಉತ್ತರಪ್ರದೇಶಕ್ಕೆ 1440 ವಲಸೆ ಕಾರ್ಮಿಕರನ್ನು ಹೊತ್ತು ಹೊರಟ ಶ್ರಮಿಕ್ ರೈಲು

ಉಡುಪಿಯಿಂದ ಹುಟ್ಟೂರು ಉತ್ತರಪ್ರದೇಶಕ್ಕೆ 1440 ವಲಸೆ ಕಾರ್ಮಿಕರನ್ನು ಹೊತ್ತು ಹೊರಟ ಶ್ರಮಿಕ್ ರೈಲು

Spread the love

ಉಡುಪಿಯಿಂದ ಹುಟ್ಟೂರು ಉತ್ತರಪ್ರದೇಶಕ್ಕೆ 1440 ವಲಸೆ ಕಾರ್ಮಿಕರನ್ನು ಹೊತ್ತು ಹೊರಟ ಶ್ರಮಿಕ್ ರೈಲು

ಉಡುಪಿ: ಉಡುಪಿ ಜಿಲ್ಲೆಯಿಂದ ಮೊದಲ ಶ್ರಮಿಕ ರೈಲು ಭಾನುವಾರ ಸಂಜೆ ಉತ್ತರ ಪ್ರದೇಶಕ್ಕೆ ಹೊರಟಿತು. ಸುಮಾರು 1400 ಮಂದಿಯನ್ನು ಹೊತ್ತ ರೈಲು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಹೊರಟಿತು.

ಉಡುಪಿ, ಕಾಪು ಮತ್ತು ಬ್ರಹ್ಮಾವರ ಕುಂದಾಪುರ, ಕಾರ್ಕಳ ಮತ್ತು ಬೈಂದೂರು ತಾಲೂಕಿನಿಂದ ಸುಮಾರು 2500 ಕ್ಕೂ ಅಧಿಕ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಂದಿದ್ದರು. ಆದರೆ ಸೇವಾ ಸಿಂಧು ಆ್ಯಪ್ ಮೂಲಕ ನೋಂದಣಿಯಾದ ಹಾಗೂ ರೈಲ್ವೆ ನಿಲ್ದಾಣದಲ್ಲಿ ತೆರೆದ ವಿಶೇಷ ಕೌಂಟರ್ ನಲ್ಲಿ ನೊಂದಾಯಿಸಿಕೊಂಡ ಸುಮಾರು 1440 ಮಂದಿ ಕಾರ್ಮಿಕರಿಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಲಭಿಸಿತು.

ಸುಮಾರು 1000 ದಷ್ಟು ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಅವಕಾಶ ಸಿಗದೆ ತವರಿಗೆ ಹೊರಟವರಿಗೆ ಭಾರಿ ನಿರಾಶೆಗೆ ಕಾರಣವಾಯಿತು. ಸ್ಥಳದಲ್ಲಿ ಉಪಸ್ಥಿರಿದ್ದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಡಿವೈಎಸ್ಪಿ ಜೈಶಂಕರ್ ಹಾಗೂ ಇತರ ಅಧಿಕಾರಿಗಳು ಸಮಾಧಾನ ಪಡಿಸಿದ್ದಲ್ಲದೆ ಶೀಘ್ರವೇ ಜಿಲ್ಲಾಡಳಿತದಿಂದ ಎರಡನೇ ಟ್ರೈನ್ ವ್ಯವಸ್ಥೆಗೊಳಿಸುವ ಭರವಸೆ ನೀಡಿದರು.

ಈ ನಡುವೆ ಭಾನುವಾರ ಬೆಳಿಗ್ಗಿನಿಂದಲೂ ಸಾವಿರಾರು ವಲಸೆ ಕಾರ್ಮಿಕರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರಿಂದ ಕಾರ್ಮಿಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟರು.

ಎಲ್ಲಾ ವಲಸೆ ಕಾರ್ಮಿಕರಿಗೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಆಹಾರದ ಬಾಕ್ಸ್ ಗಳನ್ನು ವಿತರಣೆ ಮಾಡಲಾಯಿತು.


Spread the love

Exit mobile version