Home Mangalorean News Kannada News ಉಡುಪಿಯ ಮಾಧ್ಯಮ ಮಿತ್ರರಿಂದ ನೆರೆ ಸಂತ್ರಸ್ತರಿಗೆ ಎರಡನೇ ಹಂತದ ನೆರವು ಹಸ್ತಾಂತರ

ಉಡುಪಿಯ ಮಾಧ್ಯಮ ಮಿತ್ರರಿಂದ ನೆರೆ ಸಂತ್ರಸ್ತರಿಗೆ ಎರಡನೇ ಹಂತದ ನೆರವು ಹಸ್ತಾಂತರ

Spread the love

ಉಡುಪಿಯ ಮಾಧ್ಯಮ ಮಿತ್ರರಿಂದ ನೆರೆ ಸಂತ್ರಸ್ತರಿಗೆ ಎರಡನೇ ಹಂತದ ನೆರವು ಹಸ್ತಾಂತರ

ಉಡುಪಿ: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಅವರ ನೆರವಿಗೆ ಉಡುಪಿ ಪ್ರೆಸ್ ಕ್ಲಬ್ ಮಾಧ್ಯಮ ಮಿತ್ರರ ತಂಡ ಎರಡನೇ ಹಂತದಲ್ಲಿ ಸುಮಾರು ರೂ 3 ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಶುಕ್ರವಾರ ಬೆಳಗಾವಿ ಜಿಲ್ಲೆಗೆ ರೋಟರಿ ಕ್ಲಬ್ ಉಡುಪಿ ರೋಯಲ್ ಸದಸ್ಯರ ಮೂಲಕ ಕಳುಹಿಸಿದರು.

ಉಡುಪಿ ಜಿಲ್ಲಾ ವಾರ್ತಾದಿಕಾರಿ ಖಾದರ್ ಶಾ ಅವರು ಪರಿಹಾರ ಸಾಮಾಗ್ರಿ ವಸ್ತುಗಳಿಗೆ ಪ್ರೆಸ್ ಕ್ಲಬ್ ಬಳಿ ಹಸಿರು ನಿಶಾನೆ ತೋರಿದರು.

ವಿವಿಧ ಟಿವಿ ವಾಹಿನಿಗಳು ನೀಡಿದ ಕರೆಯಂತೆ ಉಡುಪಿ ಪ್ರೆಸ್ ಕ್ಲಬ್ ಸಹಕಾರದೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಂತ್ರಸ್ಥರ ಅಗತ್ಯ ಬಳಕೆಗೆ ಬೇಕಾದ ಬಟ್ಟೆ, ನೀರು, ಅಕ್ಕಿ, ದಿನೋಪಯೋಗಿ, ವಸ್ತುಗಳು, ಔಷಧಿ, ಹಿಟ್ಟು, ಬೇಳೆ, ಬಿಸ್ಕತ್, ಚಾಪೆ, ಅಡುಗೆ ಎಣ್ಣೆ, ನೀರಿನ ಬಾಟೆಲ್, ಸೋಪು, ಚಹಾ ಪುಡಿ ಸೇರಿ ರೂ. 3 ಲಕ್ಷ ಮೌಲ್ಯದ ನೆರವು ನೀಡಿದ್ದಾರೆ.

ಸಂಗ್ರಹಿಸಿದ ವಸ್ತುಗಳ ಸುಮಾರು ರೂ ಎರಡು ಲಕ್ಷದ ವಸ್ತುಗಳ ಮೊದಲ ಕಂತನ್ನು ಸೋಮವಾರ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಗೆ ವಾಹನದ ಮೂಲಕ ಕಳುಹಿಸಲಾಗಿತ್ತು.

ಪ್ರೆಸ್ ಕ್ಲಬ್ಬಿನ ಸಂಚಾಲಕ ನಾಗಾರಾಜ್ ರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಸಹಕಾರ್ಯದರ್ಶಿ ಮೈಕಲ್ ರೊಡ್ರಿಗಸ್, ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೇಚ್ಚಾರ್, ಪತ್ರಕರ್ತರಾದ ಶಶಿಧರ ಮಾಸ್ತಿಬೈಲು, ಅಂಕಿತ್ ಶೆಟ್ಟಿ, ಹರೀಶ್ ಬಲಾಯಿಪಾದೆ, ದೀಪಕ್ ಜೈನ್, ಅನೀಶ್ ಡಿಸೋಜಾ, ಚೇತನ್ ಮಟಪಾಡಿ, ರಾಜೇಶ್ ಶೆಟ್ಟಿ, ವಿರೇಶ್, ಸೂರಜ್ ಸಾಲಿಯಾನ್, ಪಲ್ಲವಿ ಸಂತೋಷ್ ರಹೀಮ್ ಉಜಿರೆ, ಸಂದೀಪ್ ಪೂಜಾರಿ, ಅಭಿಷೇಕ್ ಹಾಗೂ ರೋಟರಿ ಪದಾಧಿಕಾರಿಗಳಾದ ಯಶವಂತ್ ಬಿಕೆ, ದಿನೇಶ್ ಹೆಗ್ಡೆ ಅತ್ರಾಡಿ, ರತ್ನಾಕರ್ ಇಂದ್ರಾಳಿ, ಮಂಜುನಾಥ್ ಮಣಿಪಾಲ್, ವಿಜಯ್ ಕುಮಾರ್ ಉಡುಪಿ ಇತರರು ಉಪಸ್ಥಿತರಿದ್ದರು.


Spread the love

Exit mobile version