ಉಡುಪಿ: ಆದರ್ಶ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

Spread the love

ಉಡುಪಿ: ಉಡುಪಿಯ ಆದರ್ಶ ಆಸ್ಪತೆ ಸುಪರ್ ಸ್ಪೆಷಾಲಿಟಿ ಸೆಂಟರ್‍ನಲ್ಲಿ ಭಾನುವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ , ಕಾಯಿಲೆಗಳು ಬಂದ ಬಳಿಕ ಗುಣಪಡಿಸುವುದಕ್ಕಿಂತ ಕಾಯಿಲೆಗಳು ಬರದಂತೆ ತಡೆಯುವುದು ಉತ್ತವಾಗಿದೆ. ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಮ್ಮ ದೇಹದಲ್ಲಿ ಯಾವುದಾದರೂ ತೊಂದರೆಯಿದೆಯೇ ಎಂದು ತಿಳಯುತ್ತದೆ . ಆಗ ಅದಕ್ಕೆ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಬಹುದು. ನಾವು ಆಯ್ಕೆ ಮಾಡುವ ಆಸ್ಪತ್ರೆ ಮತ್ತು ವೈದ್ಯರ ಬಗ್ಗೆ ನಮಗೆ ನಂಬಿಕೆಯಿದ್ದರೆ ನಮ್ಮ ಕಾಯಿಲೆ ಅರ್ಧ ಗುಣವಾದ ಹಾಗೆ ಎಂದರು.

FullSizeRender FullSizeRender_1
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಮಾತನಾಡಿ, ನಾವು ತಿನ್ನು ಆಹಾರದಲ್ಲಿ ವ್ಯತ್ಯಾಸವಾಗಿರುವುದೇ ಇಂದಿನ ಎಲ್ಲಾ ಕಾಯಿಲೆಗಳಿಗೂ ಕಾರಣ. ಅಲ್ಲದೆ ಸಾಂಕ್ರಾಮಿಕ ರೋಗಳನ್ನು ಗೆಲ್ಲಲು ಪ್ರಯತ್ನ ಮಾಡುತ್ತಿz್ದÉೀವೆ ಆದರೂ ಅಲ್ಲಲಿ ಸೋಲುತ್ತಿz್ದÉೀವೆ.ಕಾಯಿಲೆಗಳನ್ನು ಕಂಡು ಹಿಡಿದು ಸೂಕ್ತ ಔಷಧೋಪಚಾರ ಮಾಡಿದರೆ ಅನಾಹುತಗಳನ್ನು ತಡೆಗಟ್ಟಬಹುದು. ಇಂದು ದೇಹಕ್ಕೆ ವ್ಯಾಯಾಮವೂ ಕಡಿಮೆಯಾಗುತ್ತಿದ್ದು ಅನಾರೋಗ್ಯಕ್ಕೆ ಕಾರಣವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಅಂತರ್‍ಶ್ರಾವಿಗ್ರಂಥಿಗಳ ರೋಗ ತಜ್ಞ ಡಾ. ಗುರುರಾಜ್, ಹೃದ್ರೋಗ ತಜ್ಞ ಡಾ. ಶ್ರೀಕಾಂತ ಕೃಷ್ಣ, ಹಿರಿಯ ವೈದ್ಯಕೀಯ ತಜ್ಞ ಡಾ. ಉದಯ್ ಕುಮಾರ್ ಪ್ರಭು ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಯಬಿಟೀಸ್, ಹೃದ್ರೋಗ, ಬೊಜ್ಜುತನ, ಥೈರಾಯ್ಡ್ ಗ್ರಂಥಿಗಳ ಉಚಿತ ತಪಾಸಣೆಯನ್ನು ಮಾಡಲಾಯಿತು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿದರು. ಆಸ್ಪತ್ರೆಯ ಮ್ಯಾನೇಜರ್ ಡೀಗೋ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು.


Spread the love