Home Mangalorean News Kannada News ಉಡುಪಿ: ಈ ಬಾರಿ ನಾಗರ ಪಂಚಮಿ ಸಾಮೂಹಿಕ ಆಚರಣೆಗೆ ಅವಕಾಶವಿಲ್ಲ-ಜಿಲ್ಲಾಧಿಕಾರಿ

ಉಡುಪಿ: ಈ ಬಾರಿ ನಾಗರ ಪಂಚಮಿ ಸಾಮೂಹಿಕ ಆಚರಣೆಗೆ ಅವಕಾಶವಿಲ್ಲ-ಜಿಲ್ಲಾಧಿಕಾರಿ

Spread the love

ಉಡುಪಿ: ಈ ಬಾರಿ ನಾಗರ ಪಂಚಮಿ ಸಾಮೂಹಿಕ ಆಚರಣೆಗೆ ಅವಕಾಶವಿಲ್ಲ-ಜಿಲ್ಲಾಧಿಕಾರಿ

ಉಡುಪಿ: ತುಳುನಾಡಿಗೆ ದೊಡ್ಡ ಹಬ್ಬವೆಂದೇ ಕರೆಯಲಾಗುವ ಶ್ರಾವಣ ಮಾಸದ ನಾಗರ ಪಂಚಮಿ ಆಚರಣೆ ಈ ಬಾರಿ ಕೊರೊನಾ ವೈರಸ್ ಅಡ್ಡಿ ಮಾಡಿದೆ, ಈ ತಿಂಗಳ 25ರಂದು ಬರುವ ನಾಗ ಪಂಚಮಿ ಹಬ್ಬ ಸಾಮೂಹಿಕವಾಗಿ ನಡೆಸದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ

ಅತೀ ಹೆಚ್ಚು ಕೋವಿಡ್ ದೃಢ ಪ್ರಕರಣಗಳಿರುವ ರಾಜ್ಯದ 11 ಜಿಲ್ಲೆಗಳ ಜಿಲ್ಲಾಧಿಕಾರಿ ಅವರೊಂದಿಗೆ ಸೋಮವಾರ ವಿಡಿಯೋ ಕಾನ್ಸರೆನ್ಸ್ ನಡೆಸಿರುವ ಮುಖ್ಯಮಂತ್ರಿಗಳು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಸೇರಿದಂತೆ ಒಟ್ಟು 11 ಜಿಲ್ಲೆಗಳ ವೀಡಿಯೋ ಕಾನ್ಫರೆನ್ಸ್ ನಲ್ಲಿ 2-3 ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಜಿಲ್ಲೆಯವರು ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ಕೇಂದ್ರ ಸರಕಾರದಿಂದ ಬಂದಿರುವ ಎಸ್ಒಪಿಯಲ್ಲಿ ದೇವಸ್ಥಾನಗಳಿಗೆ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ಹಬ್ಬ ಹರಿದಿನಗಳನ್ನು ಮಾಡಲು ಅವಕಾಶವಿಲ್ಲ. ಆದ್ದರಿಂದ ಸಾರ್ವಜನಿಕವಾಗಿ ಯಾವುದೇ ಹಬ್ಬ ಹರಿದಿನಗಳನ್ನು ನಡೆಸಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟವಾಗಿ ಹೇಳಿದ್ದಾರೆ.

ಇದರಿಂದ ಯಾವುದೇ ಹಬ್ಬ ಹರಿದಿನಗಳನ್ನು ಮನೆಗಳಲ್ಲಿ ಮಾತ್ರ ಆಚರಿಸ ಬಹುದಾಗಿದೆ. ಹಾಗಾಗಿ ಮುಂದೆ ಶ್ರಾವಣ ಮಾಸದಲ್ಲಿ ಬರುವ ಯಾವುದೇ ಹಬ್ಬಗಳು ಸಾಮೂಹಿಕವಾಗಿ ನಡೆಯುವುದಿಲ್ಲ. ಈ ಬಾರಿ ನಾಗರಪಂಚಮಿ ಹಬ್ಬ ಕೂಡ ಸಾಮೂಹಿಕವಾಗಿ, ನಡೆಸಲು ಅವಕಾಶವಿಲ್ಲ ಎಂದು   ಅವರು ತಿಳಿಸಿದ್ದಾರೆ.


Spread the love

Exit mobile version