ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ. ಉಡುಪಿ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ಆಯೋಜಿಸುವ ಉಡುಪಿಯಲ್ಲಿ 2016, ಜನವರಿ 18ರಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಐತಿಹಾಸಿಕ ಐದನೇ ಪರ್ಯಾಯದ ಅಂಗವಾಗಿ ‘ವಿಶ್ವವರ್ಣ’ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಥಮ ರೂ. 10,000=00 ದ್ವಿತೀಯ ರೂ.5,000=00,ತೃತೀಯ, ರೂ.3,000-00 ನಗದು ಹಾಗೂ ಐದು ಜನರರಿಗೆ ತೀರ್ಪುಗಾರರ ಮೆಚ್ಚುಗೆ ಗಳಿಸಿದ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಆಕರ್ಷಕ ಸ್ಮರಣಿಕೆ ನೀಡಲಾಗುವುದು.
ಮಂಗಳವಾರ ಖ್ಯಾತ ಛಾಯಾಚಿತ್ರಗ್ರಾಹಕ ಎ.ಈಶ್ವರಯ್ಯಾ ಹಾಗು ಕಲಾವಿದ ರಮೇಶ್ ರಾವ್ ಉಡುಪಿ ಅಧಿತಿ ಗ್ಯಾಲರಿಯಲ್ಲಿ ನಡೆದ ತೀರ್ಪುಗಾರಿಯಲ್ಲಿ ಸಹಕರಿಸಿದರು. ಬಹುಮಾನಗಳ ವಿವರ: ಪ್ರಥಮ ಸತೀಶ್ ಸೇರಿಗಾರ್, ದ್ವಿತೀಯ ಸಂದೀಪ್ ನಾಯಕ್, ತೃತೀಯ ನಿದೇಶ್ ಕುಮಾರ್ ಹಾಗು ತೀರ್ಪುಗಾರರ ಮೆಚ್ಚುಗೆ ಗಳಿಸಿದ ಬಹುಮಾನವನ್ನು
ಶೈಲಾ ಮಿನೇಜಸ್, ಪ್ರದೀಪ್ ಉಪ್ಪೂರ್, ವಿಜಯೇಂದ್ರ ಅಂಬಲಪಾಡಿ, ಪ್ರಸನ್ನ ಪೆರ್ಡೂರ್, ಪ್ರೇಮ್ ಮಿನೇಜಸ್ ಪಡೆದಿರುತ್ತಾರೆ ಎಂದು ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು ತಿಳಿಸಿರಿತ್ತಾರೆ.
Very nice..Than Q Team mangalorean