ಉಡುಪಿ: ಕನ್ನಡ ವಿಜ್ಞಾನ ಲೇಖಕರ ತರಬೇತಿ ಶಿಬಿರ

Spread the love

ಉಡುಪಿ,:- ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಷಾನ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರಿಗೆ ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು, ವರದಿಗಾರರಿಗೆ ಜನಪ್ರಿಯ ವಿಜ್ಞಾನ ಬರವಣಿಗೆಯ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.

ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರು ಶಿಬಿರದಲ್ಲಿ ಭಾಗವಹಿಸಬಹುದು.

ಶಿಬಿರವು ಜೂನ್ ಮಾಹೆಯಲ್ಲಿ ಕೊಪ್ಪಳ ಅಥವಾ ಬಳ್ಳಾರಿ ಜಿಲ್ಲೆಯಲ;ಲಿ ಜರುಗುವುದು. ನುರಿತ ವಿಜ್ಞಾನ ಬರಹಗಾರರು/ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್ಞಾನ ಬರವಣಿಗೆಯ ಕುರಿತ ವಿವಿಧ ಕೌಶಲ್ಯ, ಆಕರ, ಶಬ್ದ ಬಳಕೆ, ಅನುವಾದ, ವಿಜ್ಞಾನ ಪತ್ರಕೋದ್ಯಮ, ಮುಂತಾದ ಅಂಶಗಳಲ್ಲಿ ತರಬೇತಿ ಒದಗಿಸಲಾಗುವುದು. ಶಿಬಿರಾರ್ಥಿಗಳಿಂದ ಭಾಗವಹಿಸಲಿಚ್ಛಿಸುವವರು ವಿಜ್ಞಾನ ಸಂವಹನದಲ್ಲಿ ವಿಶೇಷ ಆಸಕ್ತಿ ಹೊಂದಿರಬೇಕು. ವ್ಯಕ್ತಿ ವಿವರದೊಂದಿಗೆ ಈಗಾಗಲೇ ಒಂದು ಸ್ವ ರಚಿತ ಕನ್ನಡ ವ್ಶೆಜ್ಞಾನಿಕ ಲೇಖನದ ಪ್ರತಿಯೊಂದಿಗೆ ಅರ್ಜಿಯನ್ನು ಡಾ|| ವಸುಂಧರಾ ಭೂಪತಿ, ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನಭವನ, ನಂ24/2,21 ನೇ ಮುಖ್ಯರಸ್ತೆ, ಬನಶಂಕರಿ 2 ನೇ ಹಂತ, ಬೆಂಗಳೂರು 560070. ಇ-ಮೈಲ್ krvp.info@gmail.comಈ ವಿಳಾಸಕ್ಕೆ ತಲುಪುವಂತೆ ಜೂನ್ 22 ರೊಳಗೆ ಸಲ್ಲಿಸಬೇಕು. ಕರಾವಿಪ ಸಂಘಟಿಸಿದ ಲೇಖಕರ ಶಿಬಿರಗಳಲ್ಲಿ ಈಗಾಗಲೇ ಭಾಗವಹಿಸಿದವರು ಅರ್ಜಿ ಸಲ್ಲಿಸುವಂತಿಲ್ಲ.

ಆಯ್ಕೆಯಾದ ಅಭ್ಯರ್ಥಿಗಳಿಗೆ ನೋಂದಣಿ ಉಚಿತವಾಗಿದ್ದು, ಪರಿಷತ್ತು ಊಟೋಪಚಾರ, ವಾಸ್ತವ್ಯ ಓ.ಓ.ಡಿ. ಸೌಲಭ್ಯವನ್ನು ಕಲ್ಪಿಸುವುದು ಹಾಗೂ ನಿಖರವಾದ ದಿನಂಕ ಮತ್ತು ಸ್ಥಳವನ್ನು ಪತ್ರದ ಮುಖೇನ ತಿಳಿಸಲಾಗುವುದು. 20 ರಿಂದ 45 ವಯೋಮಾನದವರಿಗೆ ಆಧ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ಕಚೇರಿ ದೂರವಾಣಿ ಸಂಖ್ಯೆ: 080-26718938 / 26718939 / 26718962 ಫ್ಯಾಕ್ಸ್ 080-26718959 ನ್ನು ಹಾಗೂ ಡಾ|| ಸಂಗಮೇಶ್ ಎಸ್. ಹಿರೇಮಠ, ಸಂಯೋಜಕರು, 30 ನೇ ಅಖಿಲ ಕರ್ನಾಟಕ ಉದಯೋನ್ಮುಖ ಜನಪ್ರಿಯ ಕನ್ನಡ ವಿಜ್ಞಾನ ಲೇಖಕರ ತರಬೇತಿ ಶಿಬಿರ, ಮೊ. 9448219830 ಅಥವಾ ಶ್ರೀ ಕೊಟ್ರುಸ್ವಾಮಿ ಸಮಿತಿ ಸದಸ್ಯರು, ಕರಾವಿಪ ಮೊ.9449628680 ಇವರನ್ನು ಸಂಪರ್ಕಿಸುವುದು.


Spread the love