ಉಡುಪಿ: 69ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಪ್ರಯುಕ್ತ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆ ವತಿಯಿಂದ ಶ್ರಮದಾನ ಕಾರ್ಯಕ್ರಮ ನೇರವೇರಿತು.
ಹಾಗೆಯೇ ಬುಲೇಟ್ ಕ್ಲಬ್ ಫ್ರೆಂಡ್ಸ್ ಸಹಯೋಗದೊಂದಿಗೆ ಗಿಡ ನೆಡುವ ಮುಖಾಂತರ ವನಮಹೋತ್ಸವ ಆಚರಿಸಲಾಯಿತು. 8.45ಕ್ಕೆ ಶಾಲಾ ಆವರಣದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ರವಿಶೆಟ್ಟಿ ಧ್ವಜಾರೋಹಣ ನೇರವೇರಿಸಿ ಮಕ್ಕಳಿಗೆ ಸ್ವಾತಂತ್ರ್ಯ ಬಗ್ಗೆ ವಿವರಿಸಿ ಸೇನೆಗೆ ಸೇರುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಮಕ್ಕಳಿಗೆ ಉತ್ತೇಜಿಸಿ ಭ್ರಷ್ಟಾಚಾರ ವಿರೋಧಿಸುವಂತೆ ಕರೆ ನೀಡಿದರು.
ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಡಾ|| ಅರವಿಂದ್ ನಾಯಕ್ ಅಮ್ಮುಂಜೆ ಮಾತನಾಡಿ ಸಂಘಟನೆಗಳು ಮಕ್ಕಳನ್ನು ಪ್ರೋತ್ಸಾಹಿಸಿರುವುದು ನಮ್ಮ ಶಾಲೆಗೆ ಹೆಮ್ಮೆಯ ವಿಷಯ ಹಾಗೂ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಉತ್ತಮ ಸಮಾಜ ನಿರ್ಮಿಸೋಣ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿಯಿಂದ ಏಳನೇ ತರಗತಿಯ ಮಕ್ಕಳಿಗೆ ಓದು, ಕಲೆ ಗುರುತಿಸಿ ಕಾರ್ಮಿಕರ ವೇದಿಕೆ ವತಿಯಿಂದ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ವೇದಿಕೆಯ ರೈತ ಕವಿ ವೀರಣ್ಣ ಕುರುವತ್ತಿ ಗೌಡರು ಶಿಕ್ಷಣದ ಬಗ್ಗೆ ಲಾವಣಿ ಹಾಡಿ ಮಕ್ಕಳಿಗೆ ಓದುವುದರ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಹೆಚ್. ಕಾಳು ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಶೇಖರ್ .ಜಿ. ಅಮೀನ್, ಆಡಳಿತ ಮಂಡಳಿಯ ಉಪಾಧ್ಯಕ್ಷ ಡಾ|| ಅರವಿಂದ್ ನಾಯಕ್ ಅಮ್ಮುಂಜೆ, ವೇದಿಕೆಯ ಉಪಾಧ್ಯಕ್ಷರಾದ ಕೆ. ಸುರೇಶ್ ಸೇರಿಗಾರ್, ಪ್ರಧಾನ ಕಾರ್ಯದರ್ಶಿಯಾದ ರವಿಶಾಸ್ತ್ರಿ ಬನ್ನಂಜೆ ಕಾರ್ಯದರ್ಶಿಯಾದ ಮೊಹಮ್ಮದ್ ಆರೀಫ್, ಸಹ ಕಾರ್ಯದರ್ಶಿ ಪ್ರವೀಣ್ ಹಿರಿಯಡ್ಕ, ರೈತ ಮುಖಂಡ ವಿ.ನಾ. ಕುರುವತ್ತಿ ಗೌಡರು, ಅಲ್ಪ ಸಂಖ್ಯಾತ ಮುಖ0ಡ ನಬೀಲ್, ಯುವ ಸದಸ್ಯರಾದ ಗೌತಮ್, ಜಾವಿದ್ , ಕುಮಾರಿ ಪವಿತ್ರ, ಕುಮಾರಿ ದೀಕ್ಷಿತಾ, ಪ್ರಸಾದ್, ಮಂಜುನಾಥ, ಹನುಮಂತ ಹಾಗೂ ಬುಲೆಟ್ ಕ್ಲಬ್ ಸರ್ವಸದಸ್ಯರು ಭಾಗವಹಿಸಿದರು. ಮುಖ್ಯೋಪಾಧ್ಯಾಯರಾದ ಕಾಳು ಶೆಟ್ಟಿ ಸ್ವಾಗತಿಸಿ ಸಹಶಿಕ್ಷಕಿಯರು ವಂದಿಸಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.