ಉಡುಪಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಇದರ ವತಿಯಿಂದ ನಗರದ ಬೋರ್ಡ್ ಹೈಸ್ಕೂಲ್‍ನಲ್ಲಿ ಆಯೋಜಿಸಲಾದ 10 ದಿನಗಳ ಸಾಬೂನು ಹಾಗೂ ಇತರ ಉತ್ಪನ್ನಗಳ ಪ್ರದರ್ಶನ ಮತ್ತು ರಿಯಾಯತಿ ದರದ ಮಾರಾಟ ಮೇಳ “ಸಾಬೂನು ಮೇಳ” ಶುಕ್ರವಾರ ಉದ್ಘಾಟನೆಗೊಂಡಿತು.
ಮೇಳವನ್ನು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ದೀಪ ಬೆಳಗಿಸಿ ಉದ್ಘಾಟಿಸಿದರೆ ಮಾರಾಟ ಕೌಂಟರನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉಡುಪಿ-ಚಿಕಮಗಳೂರು ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.
ಪ್ರಮೋದ್ ಮಧ್ವರಾಜ್ ಮಾತನಾಡಿ ವಿಶ್ವೇಶ್ವರಯ್ಯ ಸ್ಥಾಪಿಸಿದ ಕಾರ್ಖನೆಯ ಉತ್ಪನ್ನವನ್ನು ಬಳಸುವುದು ಹೆಮ್ಮೆಯ ವಿಚಾರವಾಗಿದ್ದು ಇತಿಹಾಸದ¯್ಲÉ ಮೊದಲಬಾರಿಗೆ ಸಂಸ್ಥೆಯು ಈ ಸಾಬೂನು ಮೇಳ ಉಡುಪಿಯಲ್ಲಿ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಸಂಸ್ಥೆಯು ಉಡುಪಿ ನಗರದಲ್ಲಿ ಒಂದು ಅಂಗಡಿ ತೆರೆಯ ಬೇಕು ಈ ನಿಟ್ಟಿನಲ್ಲಿ ನಗರಸಭೆ ಆಯುಕ್ತರು ಮತ್ತು ಅದ್ಯP್ಷÀರ ಬಳಿ ಮನವಿ ಮಾಡುತ್ತೇನೆ ಎಂದರು.ಎಲ್ಲ ಮನೆಗಳಲ್ಲಿ ಸಂಸ್ಥೆಯ ಮೈಸೂರóï ಸ್ಯಾಂಡಲï ಸೋಪï ಇರಲಿ,ಉಡುಪಿಯ ಜನತೆ ಸಂಸ್ಥೆಯ ಈ ರಿಯಾಯಿತಿ ಮಾರಾಟ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮಾಜಿ ಸಂಸದ ಜಯ ಪ್ರಕಾಶï ಹೆಗ್ಡೆ ಮಾತನಾಡಿ ಸಂಸ್ಥೆ ಒಂದು ಕಾಲದಲ್ಲಿ ಬಾಗಿಲು ಹಾಕಿ ಮಾರಾಟವಾಗುವಂತ ಪರಿಸ್ಥಿತಿಗೆ ಬಂದಿತ್ತು ಬೆಂಗಳೂರು ಯಶವಂತಪುರದಲ್ಲಿರುವ ಕಾರ್ಖಾನೆ ಮತ್ತದರ ಜಾಗವನ್ನು ರಿಯಲï ಎಸ್ಟೇಟï ಉದ್ಯಮಿಗಳ ಕೈಗೆ ಕೊಡುವಲ್ಲಿ ಕೆಲವರು ಸಂಚು ರೂಪಿಸಿದ್ದರು ನಾವು ಸಂಸ್ಥೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊರಾಟ ನಡೆಸಿz್ದÉವು ಅಲ್ಲಿಂದ ಇಲ್ಲಿವರೆಗು ಸಂಸ್ಥೆ ಬೆಳೆದ ರೀತೀ ಅನನ್ಯ ಹೆಮ್ಮೆ ಪಡುವ ವಿಚಾರ ಎಂದರು.ಇದಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರನ್ನು ಅಭಿನಂದಿಸುತ್ತೇನೆ ಸೋಪï ಸಂತೆ ಕಾರ್ಯಕ್ರಮ ಜಿ¯್ಲÁ ಮತ್ತು ತಾಲುಕು ಮಟ್ಟದಲ್ಲಿ ಆಗಾಗ ಏರ್ಪಡಿಸಬೇಕು.ಖಾಸಗಿ ಕಂಪೆನಿಗಳ ಅಬ್ಬರದಲ್ಲಿ ಸ್ಪರ್ದೆಯು ಅನಿವಾರ್ಯವಾಗಿದ್ದು ಸಂಸ್ಥೆಯು ತನ್ನ ಉತ್ಪನ್ನಗಳ ಜಾಯಿರಾತನ್ನು ಬಹಳ ಪರಿಣಾಮಕಾರಿಯಾಗಿಸ ಬೇಕು ಪ್ರತಿ ಮನೆಗು ಈ ಉತ್ತಮ ಗುಣಮಟ್ಟದ ಉತ್ಪನ್ನ ತಲುಪಬೇಕು ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ಕೇಶವ ಮೂರ್ತಿ ಪ್ರಸ್ಥಾವಿಕವಾಗಿ ಮಾತನಾಡಿ ಬಹುರಾಷ್ಟ್ರಿಯ ಸಂಸ್ಥೆಯ ತೀವ್ರ ಪೈಪೆÇೀಟಿಯ ನಡುವೆಯು ಸಂಸ್ಥೆ ಹೆಚ್ಚಿನ ವಹಿವಾಟು ಹೊಂದಿದೆ.2014-15 ನೇ ಸಾಲಿನಲ್ಲಿ 406 ಕೋಟಿ ವಹಿವಾಟು ನಡೆಸಿದ್ದು 45.19 ಕೋಟಿ ನಿವ್ವಳ ಲಾಭ ಗಳಿಸಿದೆ ಪ್ರಸಕ್ತ ಸಾಲಿನಲ್ಲಿ 500 ಕೋಟಿ ವಹಿವಾಟಿನ ಗುರಿ ಹೊಂದಿದೆ ಎಂದರು.
ಗ್ರಾಹಕರಿಗೆ ಅಂತಾರಾಷ್ಟ್ರಿಯ ಗುಣಮಟ್ಟದ ಉತ್ಪನ್ನಗಳನ್ನು ನೀಡುವಲ್ಲಿ ಸಂಸ್ಥೆಯು ಯಶಸ್ಚಿಯಾಗಿದ್ದು ಗ್ರಾಹಕರಿಂದ ಉತ್ಪನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಕೆಎಸ್‍ಡಿಎಲ್ ನ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷೆ ಸುನೀತಾ ನಾಯ್ಕ, ಉಪಾಧ್ಯಕ್ಷ ಗಣೇಶ್ ಕುಮಾರ್, ನಗರಸಭೆಯ ಅಧ್ಯಕ್ಷ ಯುವರಾಜ್, ಆಯುಕ್ತ ಮಂಜುನಾಥಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಲ್ಲಿಕಾ ಅಶೋಕ್, ಐಡಾ ಗಿಬ್ಬಾ ಡಿ’ಸೋಜಾ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ದಿನೇಶ್ ಪುತ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.