ಉಡುಪಿ: ಗೋಡಂಬಿ ಖರೀದಿಸಿ ನಕಲಿ ಡಿಡಿ ನೀಡಿ ಉದ್ಯಮಿಯೋರ್ವರಿಗೆ ಮೋಸ ಮಾಡಿದ ಕುರಿತು ಉಡುಪಿ ನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಉದ್ಯಮಿ ಡಾ. ಕ್ರಿಸ್ಟೋಫರ್ ಡಿಸೋಜಾ (29), ತಂದೆ: ವಾಲ್ಟರ್‌ಡಿಸೋಜಾ, ವಿಳಾಸ: ರಾಣಿ ಚೆನ್ನಮ್ಮ ಮಾರ್ಗ ಅಜ್ಜರಕಾಡು ಮೂಡನಿಡಂಬೂರು ಗ್ರಾಮ ಉಡುಪಿ ಇವರು ಸೋಜಾ ಎಲೆಕ್ಟ್ರಾನಿಕ್ಸ್ ನ ಮ್ಯಾನೇಜಿಂಗ್ ಪಾರ್ಟ್‌ನರ್ ಆಗಿದ್ದು, ಸೋಜಾ ಕ್ಯಾಶ್ಯೂಸ್ ಎಂಬ ಅಂಗಡಿಯನ್ನು ಹೊಂದಿರುತ್ತಾರೆ. ಮಾರ್ಚ್ 18 ರಂದು ನರೇಂದ್ರ ಜೈನ್ ಹಾಗೂ ಮನೀಷ್ ಗಾಂಧಿ ಎಂಬುವವರು 200 ಕೆಜಿ ಗೊಡಂಬಿ ಹಾಗೂ 50 ಕೆಜಿ ಬಾದಾಮಿ ಡ್ರೈಪ್ರೋಟ್ಸ್ ಗಳನ್ನು ಖರೀದಿಸಲು ಬಂದಿದ್ದು ಕ್ರಿಸ್ಟೋಫರ್ ಡಿಸೋಜಾ ರವರು ಅವುಗಳ ದರಗಳನ್ನು ತಿಳಿಸಿದಾಗ ಆರೋಪಿತರು ಮುಂದೆ ಖರೀದಿಯ ಬಗ್ಗೆ ತಿಳಿಸುವುದಾಗಿ ಹೇಳಿ ಹೋಗಿರುತ್ತಾರೆ. ದಿನಾಂಕ ಎಪ್ರಿಲ್ 4 ರಂದು ನರೇಂದ್ರ ಜೈನ್ ಕ್ರಿಸ್ಟೋಫರ್ ಡಿಸೋಜಾ ರವರಿಗೆ ಕರೆ ಮಾಡಿ ಗೊಡಂಬಿ ಹಾಗೂ ಬಾದಾಮಿಯ ದರದ ಬಗ್ಗೆ ಚರ್ಚೆ ಮಾಡಿ 200 ಕೆಜಿ ಗೊಡಂಬಿ ಹಾಗೂ 40 ಕೆಜಿ ಬಾದಾಮಿ ಖರೀದಿಸುವುದಾಗಿ ಹೇಳಿದ್ದು ಅವುಗಳ ಒಟ್ಟು ಮೌಲ್ಯ 1,52,000/- ರೂಪಾಯಿ ಎಂದು ತಿಳಿಸಿದಾಗ ಹಣವನ್ನು ಡಿಡಿ ಮುಖಾಂತರ ನೀಡುವುದಾಗಿಯು ಹೇಳಿದ್ದು ಸೋಜಾ ಎಲೆಕ್ಟ್ರಾನಿಕ್ಸ್ ಹೆಸರಿನಲ್ಲಿ ಡಿಡಿ ತೆಗೆಯುವಂತೆ ಕ್ರಿಸ್ಟೋಫರ್ ಡಿಸೋಜಾ ರವರು ತಿಳಿಸಿರುತ್ತಾರೆ. ನರೇಂದ್ರ ಜೈನ್ ಎಪ್ರಿಲ್ 7 ರಂದು ಕರೆ ಮಾಡಿ ತನ್ನ ವಾಹನ ಹಾಳಾಗಿರುವುದಾಗಿಯೂ ಬೇರೆ ವಾಹನವನ್ನು ಡಿಡಿ ಸಮೇತ ಕಳುಹಿಸುವುದಾಗಿ ಆ ವಾಹನದಲ್ಲಿ ಗೊಡಂಬಿ ಮತ್ತು ಬಾದಾಮಿಯನ್ನು ಲೋಡ್ ಮಾಡಿ ಕಳುಹಿಸುವಂತೆ ವಿನಂತಿಸಿಕೊಂಡಿದ್ದು ಬೆಳಗ್ಗೆ 10:30 ಗಂಟೆಗೆ ಬಂದ KA 05 D 4175 ನೇ ಟವೇರ ವಾಹನದ ಚಾಲಕ ಪ್ರಕಾಶ್ ಡಿಡಿ ಯನ್ನು ಹಾಜರುಪಡಿಸಿದ್ದರಿಂದ ಕ್ರಿಸ್ಟೋಫರ್ ಡಿಸೋಜಾರವರ ಅಂಗಡಿಯ ಮ್ಯಾನೇಜರ್ ಗೊಡಂಬಿ ಹಾಗೂ ಬಾದಾಮಿಯನ್ನು ವಾಹನದಲ್ಲಿ ಲೋಡ್ ಮಾಡಿ ಕಳುಹಿಸಿರುತ್ತಾರೆ. ಡಿಡಿಯನ್ನು ಸಿಂಡಿಕೇಟ್ ಬ್ಯಾಂಕ್ ಉಡುಪಿ ಬ್ರಾಂಚ್ ನಲ್ಲಿ ನೀಡಿದಾಗ ಡಿಡಿಯು ನಕಲಿ ಎಂಬುದಾಗಿ ಬ್ಯಾಂಕ್ ನವರು ತಿಳಿಸಿದ್ದು ಆರೋಪಿತರು ಕ್ರಿಸ್ಟೋಫರ್ ಡಿಸೋಜಾ ರವರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ಡಿಡಿಯನ್ನು ಪ್ರಕಾಶ್ ರವರಲ್ಲಿ ಕಳುಹಿಸಿಕೊಟ್ಟು 1,52,000/- ರೂಪಾಯಿ ಮೌಲ್ಯದ ಗೊಡಂಬಿ ಮತ್ತು ಬಾದಮಿಯನ್ನು ಪಡೆದು ಮೋಸ ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.