Home Mangalorean News Kannada News ಉಡುಪಿ: ಗ್ಯಾಲರಿ ಅದಿತಿಯಲ್ಲಿ ಕಲಾವಿದೆ ಪ್ರವೀಣಾ ಮೋಹನ್‍ರ ಕಲಾಪ್ರದರ್ಶನ `ಕೃಷ್ಣ’ À ಉದ್ಘಾಟನೆ

ಉಡುಪಿ: ಗ್ಯಾಲರಿ ಅದಿತಿಯಲ್ಲಿ ಕಲಾವಿದೆ ಪ್ರವೀಣಾ ಮೋಹನ್‍ರ ಕಲಾಪ್ರದರ್ಶನ `ಕೃಷ್ಣ’ À ಉದ್ಘಾಟನೆ

Spread the love

ಉಡುಪಿ: ಕೃಷ್ಣನ ಜೀವನವೇ ವರ್ಣಮಯವಾಗಿದ್ದು, ಆತನನ್ನು ಚಿತ್ರಿಸುವುದು ಕಷ್ಟದ ಕೆಲಸ. ನಿಪುಣರಿಗಷ್ಟೇ ಆತನನ್ನು ಚಿತ್ರಿಸಲು ಸಾಧ್ಯ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

Krishna

ಬುಧವಾರ ಉಡುಪಿಯ ಗ್ಯಾಲರಿ ಅದಿತಿಯಲ್ಲಿ ಕಲಾವಿದೆ ಪ್ರವೀಣಾ ಮೋಹನ್ ಅವರ ಕಲಾಪ್ರದರ್ಶನ `ಕೃಷ್ಣ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕೃಷ್ಣನಮಗೆ ರಾಜಕಾರಣಿಯಾಗಿ, ವೇಣುನಾದಪ್ರಿಯನಾಗಿ, ಬಾಲಕನಾಗಿ, ಹದಿನಾರು ಸಾವಿರ ಸ್ತ್ರೀಯರಿಗೆ ಪತಿಯಾಗಿ ಕಾಣಿಸುತ್ತಾನೆ. ಕೃಷ್ಣ ಅಂದರೆ ಕಪ್ಪು ಎಂದು ಹೇಳುತ್ತಾರೆ ಆದರೆ ಕೃಷ್ಣ ಎಂದರೆ ಆಕರ್ಷಣೆ. ಕೃಷ್ಣ ಎಲ್ಲರನ್ನೂ ಆಕರ್ಷಿಸುತ್ತಾನೆ. ಅದಕ್ಕೆ ಆತನಿಗೆ ಕೃಷ್ಣ ಎಂಬ ಹೆಸರು ಅ್ವನ್ವರ್ಥಕವಾಗಿ ಬಂದಿದೆ.
ಮಣಿಪಾಲ ಗ್ರೂಪ್‍ನ ಎಂಡಿ ಟಿ. ಗೌತಮ್ ಪೈ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಶುಭಾ ಹಾರೈಸಿದರು.
ಛಾಯಾಗ್ರಾಹಕ ಆಸ್ಟ್ರೋ ಮೋಹದ್ ಅವರ `ಪಿಕ್ಟೋರಿಯಲ್ ಜರ್ನಿ ಟು ಉಡುಪಿ-ಮಣಿಪಾಲ’ ಪುಸ್ತಕದ ರಕ್ಷಾ ಪುಟವನ್ನು ಸೋದೆ ಸ್ವಾಮೀಜಿಯವರು ಈ ವೇಳೆ ಅನಾವರಣಗೊಳಿಸಿದರು.
ಕಲಾವಿದೆ ಪ್ರವೀಣಾ ಮೋಹನ್ ಅವರು ಮಾತನಾಡಿ, ಕೃಷ್ಣ ಆಸಕ್ತಿಯ ವಿಷಯವಾಗಿದ್ದು, ನಾವು ಆತನಿಗೆ ಯಾವ ಬಣ್ಣ ಕೊಡುತ್ತೇವೆಯೋ ಆ ಬಣ್ಣದಲ್ಲಿ ಕೃಷ್ಣ ಆಕರ್ಷಕವಾಗಿ ಕಾಣುತ್ತಾನೆ ಎಂದರು.
ಅದಿತಿ ಗ್ಯಾಲರಿಯ ಟ್ರಸ್ಟಿ ಕಿರಣ್ ಆಚಾರ್ಯ ಉಪಸ್ಥಿತರಿದ್ದರು.
ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಕಲಾ ಪ್ರದರ್ಶನದಲ್ಲಿ ಕೃಷ್ಣನ 24 ಆರ್ಕಲಿಕ್ ಚಿತ್ರಗಳು, ಒಂದು ಉಬ್ಬುಶಿಲ್ಪ ಹಾಗೂ ಒಂದು ಬಟ್ಟೆಯಲ್ಲಿ ಮೂಡಿ ಬಂದ ಕೃಷ್ಣನ ಚಿತ್ರಗಳಿವೆ. ಡಿ.27ರ ವರೆಗೆ ಬೆಳಗ್ಗೆ 10ರಿಂದ ಸಾಯಂಕಾಲ 7ರ ವರೆಗೆ ಸಾರ್ವಜನಿಕರಿಗೆ ಚಿತ್ರ ಪ್ರದರ್ಶನ ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.


Spread the love

Exit mobile version