ಉಡುಪಿ: ಗ್ರಾಮ ಪಂಚಾಯತ್ ಚುನಾವಣೆ ನೀತಿ ಸಂಹಿತೆ

Spread the love

ಉಡುಪಿ, ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಿ ಆದೇಶಿಸಿದೆ. ಸದರಿ ಆದೇಶದಲ್ಲಿ ತಿಳಿಸಿರುವಂತೆ ಸದಾಚಾರ ಸಂಹಿತೆಯು ಚುನಾವಣೆಯಿಂದ ಹೊರತು ಪಡಿಸಿರುವ ಗ್ರಾಮ ಪಂಚಾಯಿತಿಗಳು ಅಂದರೆ, ಆಗಸ್ಟ್-2015 ರ ನಂತರ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳು, ನ್ಯಾಯಾಲಯದ ತಡೆಯಾಜ್ಞೆಯ ಕಾರಣ ಚುನಾವಣೆಯಿಂದ ಹೊರತುಪಡಿಸಿರುವ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಲಾಗುತ್ತಿರುವ ಕಾರಣಕ್ಕಾಗಿ ಚುನಾವಣೆಯಿಂದ  ಹೊರತುಪಡಿಸಲಾಗಿರುವ ಗ್ರಾಮ ಪಂಚಾಯಿತಿಗಳು ಸೇರಿದಂತೆ, ರಾಜ್ಯದ ಎಲ್ಲಾ ಗ್ರಾಮ / ತಾಲೂಕು/ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 10 ರ ಬೆಳಗ್ಗೆ 8.00 ಗಂಟೆಯಿಂದ ಜೂನ್ 7 ರವರೆಗೆ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.


Spread the love