ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸಿದ್ದಾರೆ: ಜಯಪ್ರಕಾಶ್ ಹೆಗ್ಡೆ
ಉಡುಪಿ: ಸರಕಾರದ ಅಭಿವೃದ್ದಿ ಯೋಜನೆಗಳನ್ನು, ಕಾರ್ಯಗತಗೊಳಿಸುವುದು ಸಂಸದರ ಕರ್ತವ್ಯˌಈ ನಿಟ್ಟಿನಲ್ಲಿ ನನ್ನ ಹಿಂದಿನ ಅವಧಿಯಲ್ಲಿ ಆದ ಅಭಿವೃದ್ಧಿಯನ್ನು ಪರಿಗಣಿಸಿ ಜನತೆ ನನ್ನನ್ನು ಬೆಂಬಲಿಸುವ ಆಶಾವಾದ ನನ್ನಲ್ಲಿದೆ. ಮುಂದಿನ ದಿನಗಳಲ್ಲಿಯೂ ನಾನು ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಿದ್ದೇನೆˌ ಹಿಂದುಳಿದ ಆಯೋಗದ ವರದಿಯಲ್ಲಿ ಅತಿ ಬಡವರನ್ನು ಗುರುತಿಸಿ ಸೇರ್ಪಡೆಗೊಳಿಸಿದ್ದೇನೆ ವ್ಯಕ್ತಿಯ ಸಿಂಪ್ಲಿಸಿಟಿ ಎಂಬುದು ಚುನಾವಣೆಯ ವಿಷಯವಲ್ಲ. ಅಭಿವೃದ್ಧಿಯ ಕೆಲಸಗಳನ್ನು ಮಾಡುವುದಕ್ಕೆ ಆದ್ಯತೆ ನೀಡುವುದು ಮುಖ್ಯ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯನ್ನು ನೆನಪಿಸಿಕೊಳ್ಳಬೇಕಾಗಿದೆˌಜನತೆಯಲ್ಲಿ ಬದಲಾವಣೆಬೇಕು ಎಂಬ ಅಭಿಪ್ರಾಯ ಬಂದಿದೆ, ಚುನಾವಣೆಗಾಗಿ ವಿವಿಧ ಸಮಿತಿಗಳ ರಚನೆ ಮಾಡಬೇಕಾಗಿದೆˌ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿಗಳಾದ ಕೆ. ಜಯಪ್ರಕಾಶ್ ಹೆಗ್ಡೆಯವರು ಹೇಳಿದರುˌ
ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡುವೂರವರು ಮಾತನಾಡುತ್ತಾ ಕಾಂಗ್ರೆಸ್ ಜನಪರ ಪಕ್ಷ ಬಡ ಬಗ್ಗರˌ ದೀನದಲಿತರ ಬಗ್ಗೆ ಚಿಂತನೆ ಮಾಡುವ ಪಕ್ಷ ˌ ಪಕ್ಷ ನೀಡಿದ ಆಶ್ವಾಸನೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಕೇವಲ ಆರು ತಿಂಗಳ ಅವಧಿಯಒಳಗೆ ಕಾರ್ಯಗತಗೊಳಿಸಿದೆ ˌಈ ಐದು ಗ್ಯಾರಂಟಿ ಫಲಾನುಭವಿಗಳನ್ನು ಪಕ್ಷದ ಮತವಾಗಿ ಪರ್ವತಿಸಿಕೊಳ್ಳಬೇಕಾದು ನಮ್ಮ ಕಾರ್ಯಕರ್ತರ ಎಲ್ಲರ ಕರ್ತವ್ಯ ಎಂದರುˌ
ಪಕ್ಷದ ಮುಖಂಡರಾದ ಎಮ್ .ಎ . ಗಪೂರ್. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಶಾಸಕರಾದ ಬಿ. ಎಂ .ಸುಕುಮಾರ ಶೆಟ್ಟಿ. ವೆರೋನಿಕೋ ಕರ್ನೆಲಿಯೋ ˌಪ್ರಸಾದ್ ರಾಜ್ ಕಾಂಚನ್ ನೀರೆಕೈಷ್ಣ ಶೆಟ್ಟಿˌ ˌ ರಾಜ ಪೂಜಾರಿ, ರಮೇಶ್ ಕಾಂಚನ್ ˌ ವಿಕಾಸ ಹೆಗ್ಡೆ ಸಲಹೆ ಸೂಚನೆಗಳನ್ನು ನೀಡಿದರುˌ
ಸಭೆಯಲ್ಲಿ ಪಕ್ಷದ ಮುಖಂಡರುಗಳಾದ ಕಿಶನ್ ಹೆಗ್ಡೆ ಕೋಳ್ಕೆಬೈಲ್ˌ ಸುಧೀರ್ ಕುಮಾರ್ ಮರೋಳಿˌಉದಯಕುಮಾರ್ ಶೆಟ್ಟಿ ಮುನಿಯಾಲು ˌ ಮಲ್ಯಾಡಿ ಶಿವರಾಮ್ ಶೆಟ್ಟಿ ˌ ಗೀತ ವಾಗ್ಳೆ ˌ ದಿನೇಶ್ ಹೆಗ್ಡೆ ಮುಳವಳ್ಳಿ ˌ ಕಾಪು ದಿವಾಕರ ಶೆಟ್ಟಿ ˌ ಸಂತೋಷ್ ಕುಲಾಲ್ ˌ ನವೀನ್ ಚಂದ್ರ ಶೆಟ್ಟಿ ˌ ಹರೀಶ್ ಕಿಣಿˌ ಜ್ಯೋತಿ ಹೆಬ್ಬಾರ್ ˌ ದಿನೇಶ್ ಪುತ್ರನ್ ˌ ನವೀನ್ ಚಂದ್ರ ಸುವರ್ಣˌ ಸದಾಶಿವ ದೇವಾಡಿಗˌ ಹರಿಪ್ರಸಾದ್ ಶೆಟ್ಟಿ ˌಪ್ರಖ್ಯಾತ್ ಶೆಟ್ಟಿ ˌ ಕುಶಲ ಶೆಟ್ಟಿˌ ˌ ಬಿಪಿನ್ ಚಂದ್ರಪಾಲ್ ನಕ್ರೆˌ ಶಬೀರ್ ಅಹ್ಮದ್ˌ ಸುನಿತಾ ಶೆಟ್ಟಿ ˌರೋಶನ್ ಒಲಿವರಾ ˌ ಸರಸ್ ಬಂಗೇರ ˌಮುರಳಿ ಶೆಟ್ಟಿ ˌ ಜಯಕುಮಾರ್ˌ ಕೀರ್ತಿ ಶೆಟ್ಟಿ ˌ ಕಿಶೋರ್ ಕುಮಾರ್ ಎರ್ಮಾಳ್ ˌ ಶಶಿಧರ್ ಶೆಟ್ಟಿ ಎಲ್ಲೂರು ˌ ಮಹಾಬಲ ಕುಂದರ್. ವೈ .ಸುಕುಮಾರ್ˌ ಬಾಲಕೃಷ್ಣ ಪೂಜಾರಿˌ ವಿನಯ ಬಲ್ಲಾಳ್ ˌ ರೋಷನ್ ಶೆಟ್ಟಿ ˌಅಬ್ದುಲ್ ಅಜೀಜ್ˌ ˌ ಸುರೇಶ್ ಶೆಟ್ಟಿ ಬನ್ನಂಜೆ ˌ ಚಂದ್ರಶೇಖರ್ ಶೆಟ್ಟಿ ˌ ಅಬೀಬ್ ಆಲಿˌ ದಿವಾಕರ್ ಕುಂದರ್ˌ ಕಿರಣ ಹೆಗ್ಡೆˌ ಮಲ್ಲಿಕಾ ಪೂಜಾರ್ತಿ ˌಜಯಾನಂದ್ˌ ಶೇಕ್ ವಹೀದ್ ˌ ಇಸ್ಮಾಯಿಲ್ ಅತ್ರಾಡಿˌ ಕೇಶವ ಕೋಟ್ಯಾನ್ ˌ ಸೌರಭ್ ಬಲ್ಲಾಳ್ ˌ ಮುಂತಾದವರು ಉಪಸ್ಥಿತರಿದ್ದರು ˌ
ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ಸ್ವಾಗತಿಸಿದರು ˌ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು