ಉಡುಪಿ: ಜಗತ್ತಿನಲ್ಲಿ ಭಾರತದ ಸಂಸ್ಕೃತಿ ಆದರ್ಶನಿಯ ; ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಅರೆ ಮಾದನಹಳ್ಳಿ ಸ್ವಾಮೀಜಿ

Spread the love

ಉಡುಪಿ: ಜಗತ್ತಿನಲ್ಲಿ ಭಾರತದ ಸಂಸ್ಕೃತಿ ಆದರ್ಶನಿಯವಾಗಿದ್ದು ,ವೈಧಿಕ ತಳಹದಿ, ಶಿಲ್ಪಾ ಮತ್ತು ಬ್ರಾಹ್ಮಣ್ಯದಿಂದಾಗಿ ಹಿಂದು ಧರ್ಮ ಜಗತ್ತಿನಲ್ಲಿ ಬದ್ರವಾಗಿ ನಿಂತಿದೆ ಎಂದು ಹಾಸನದ ಅರೆ ಮಾದನಹಳ್ಳಿ ಸುಜ್ಣಾನಪ್ರಭು ಪೀಠ ವಿಶ್ವಕರ್ಮ ಜಗದ್ಗುರು  ಶ್ರೀ ಗುರು ಶಿವಸುಜ್ಣಾನತೀರ್ಥ ಸ್ವಾಮೀಜಿ ಹೇಳಿದರು.

ಅವರು ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ನಡೆದ ವಿಶ್ವಾಬ್ರಾಹ್ಮಣರ ಮಹಿಳಾ ಜಾಗೃತಿ ಸಮಾವೇಶದಲ್ಲಿ ಆಶಿರ್ವಚನ ನೀಡಿದರು.

ಮಹಿಳೆಗೆ ಸ್ವಾತಂತ್ರ್ಯ ಬೇಕು ಆದರೆ ಅದು ಸ್ವೆಚ್ಚಾಚಾರ ಮೀರಬಾರದು ಏಕೆಂದರೆ ಧರ್ಮ ಸಂಸ್ಕ್ರುತಿ ವಿಚಾರದ ಉಳಿವಿಗೆ ಮಾತೆಯರ ಪಾತ್ರ ಹಿರಿದಾಗಿದೆ ಇವು ಮುಂದಿನ ಪೀಳಿಗೆಗೆ ಪಸರಿಸುವುದರಲ್ಲಿ ಹೆಣ್ಣಿನ ಪಾತ್ರ ಪ್ರಮುಖ ಎಂದರು. ಪ್ರಸ್ತುತ ಸಮುದಾಯದ ಮೇಲೆ ಅಘಾತಕಾರಿ ಪ್ರಶ್ನೆಗಳು ಬೀಳುತ್ತಿವೆ ನಮ್ಮ ವೈಧಿಕತೆ, ಭ್ರಾಹ್ಮಣ್ಯ, ಪರಂಪರೆಗಳನ್ನು  ಪ್ರಶ್ನಿಸಿ ಇದು ಇವತ್ತಿನ ಲೌಖಿಕ ಜಗತ್ತಿನಲ್ಲಿ ಅಘಾತವನ್ನುಂಟು ಮಾಡುತ್ತಿದೆ ಈ ನಿಟ್ಟಿನಲ್ಲಿ ಸಮಾಜದ ತಾಯಂದಿರು ಚಿಂತಿಸಬೇಕಿದೆ ಎಂದರು.

ಕೋಟಿ ಹಣ ಸಂಪಾದಿಸಿ ಎಷ್ಟು ಹಣ ಸಂಪಾದಿಸಿದರು ನೆಮ್ಮದಿ ಇರುವುದಿಲ್ಲ ಮೊದಲು ಧಾರ್ಮಿಕ ತಳಹದಿಯನ್ನು ಸುಭದ್ರಗೊಳಿಸುವ ಕೆಲಸವಾಗಬೇಕಿದೆ ಈ ನಿಟ್ಟಿನಲ್ಲಿ ವಿಶ್ವ ಮಹಿಳಾ ಜಾಗೃತಿ ಸಮಾವೇಶ ಸಾರ್ಥಖ್ಯವಾಗಿದ್ದು ಮಹಿಳೆಯರನ್ನು ಜಾಗೃತರನ್ನಾಗಿ ಮಾಡುವ ಕಣ್ತೆರೆಸುವ ಕಾರ್ಯಕ್ರಮ ಇದಾಗಲಿ ಎಂದು ಆಶಿರ್ವಚಿಸಿದರು.

ಸಂಸದೆ ಶೋಭ ಕಾರಂದ್ಲಾಜೆ ಮಾತನಾಡಿ ಪಾರಂಪರಿಕವಾಗಿ ಕಷ್ಟಪಟ್ಟು ದುಡಿದು ಜೀವನ ಮುನ್ನಡೆಸುವ ಸಮುದಾಯವಿದು ಇಲ್ಲಿ ಬಡವರು ಮತ್ತು ಶ್ರೀಮಂತರು ಇದ್ದಾರೆ ಮಹಿಳೆಯರು ಕಲೆ ಶಿಕ್ಷಣ ಸಾಹಿತ್ಯದಲ್ಲಿ ಹೆಸರು ಮಾಡಿ ಸಮಾಜಕ್ಕೆ ಕೊಡುಗೆ ನೀಡಿದವರಿದ್ದಾರೆ ಎಂದರು ಸಮುದಾಯದಲ್ಲಿ ಕೆಳಸ್ತರದಲ್ಲಿರುವ ಹೆಣ್ಣುನ್ನು ಗುರುತಿಸಿ ಶೈಕ್ಷಣಿಕವಾಗಿ,ಆರ್ಥಿಕವಾಗಿ ಸಹಕಾರ  ಕೊಡಬೇಕಿದೆ ಎಂದರು.ಚಿಕ್ಕ ಸಮುದಾಯವದ್ದರಿಂದ ರಾಜಕಿಯದಲ್ಲಿ ಪ್ರಶಾಸ್ಯ್ತ ಸಿಗುತ್ತಿಲ್ಲ , ಓಟï ಬ್ಯಾಂಕï ಗಾಗಿ ದೊಡ್ಡ ಸಮುದಾಯಗಳನ್ನು ಒಲೈಸುವ ಪವೃತ್ತಿ ಈಗಿನ ರಾಜಕಿಯದಲ್ಲಿದೆ. ಈ ನಿಟ್ಟಿನಲ್ಲಿ ವಿಶ್ವಬ್ರಾಹ್ಮಣ ಸಮುದಾಯದ ಮಹಿಳೆಯರು ರಾಜಕೀಯ  ಪ್ರವೇಶಿಸಬೇಕು ನೀವು ಸಮುದಾಯದ ಪ್ರತಿನಿಧಿಯಾಗಿ ಜನಸೇವೆ ಮಾಡಬೇಕು ಸಮಾಜದ ಮುಖ್ಯವಾಹಿನಿಯ ಎಲ್ಲಾ ಕ್ಷೇತ್ರಗಳಲ್ಲು ತೊಡಗಿಸಿಕೊಳ್ಳ:ಬೇಕು ಎಂದು ಸಲಹೆ ನೀಡಿದರು.

ಮನೆಯ ಒಳಗೆ ಮತ್ತು ಹೊರಗೆ ಕೆಲಸ ಮಾಡುವ ಏಕೈಕ ಶಕ್ತಿ ಎಂದರೆ ಅದು ಹೆಣ್ಣು, ತಾಳ್ಮೆ, ಪ್ರೀತಿ ಶಕ್ತಿ ಇವಳಿಗೆ ಮಾತ್ರ.ಇಡಿ ಜಗತ್ತಿನಲ್ಲಿ ಇರದ ವಿಷಿಷ್ಟ ಕುಟುಂಬ ಪದ್ದತಿ ಭಾರತದಲ್ಲಿದೆ ಇಲ್ಲಿನ ಮಕ್ಕಳು ಸತ್ಪ್ರಜೆಗಳಾಗಿದ್ದಾರೆ ಮಾನಸಿಕ ವಿಕಾಸನದಿಂದ ಮಕ್ಕಳು ಬುದ್ದಿವಂತರಾಗುತಿದ್ದಾರೆ ಇದಕ್ಕೆ ಕಾರಣ ಮಾತೃವಾತ್ಸಲ್ಯ.ನಮ್ಮಲ್ಲಿನ ಸಂಸ್ಕ್ರುತಿ ಆಚಾರ ವಿಚಾರಗಳನ್ನು ತಾಯಿ ಆದವಳು ಮಗುವಿಗೆ ಗೊತ್ತಿಲ್ಲದೆ ಕಲಿಸಿರುತ್ತಾಳೆ ಪ್ರತಿ ಮಗುವಿನಲ್ಲು ಇದು ಪರಿಣಾಮ ಬೀರಿ ಬಾವನಾತ್ಮಕವಾಗಿ ಬೇರೂರಿರುತ್ತದೆ ಎಂದರು.ಮಹಿಳಾ ಸಮುದಾಯ ಒಗ್ಗಟ್ಟು ಪ್ರದರ್ಶನ ನಮ್ಮ ಮಾತೃ ಸಂಸ್ಕ್ರುತಿಯನ್ನು ಬಿಂಬಿಸುವಲ್ಲಿ ಈ ಕಾರ್ಯಕ್ರಮ ಸಾಥರ್ಕವಾಗಲಿದೆ ಎಂದರು.

ಸಮಾವೇಶದಲ್ಲಿ ವಿಶ್ವಾ ಬ್ರಾಹ್ಮಣ ಮಹಿಳಾ ಜಾಗೃತಿ ಮತ್ತು ಸಬಲೀಕರಣದ ಸಾದ್ಯತೆ,ಪ್ರಸ್ತುತ ವಿಶ್ವಬ್ರಾಹ್ಮಣ ಮಹಿಳೆಯರ ಪಾತ್ರ ಈ ಕುರಿತು ವಿಚಾರಗೊಷ್ಟಿ ನಡೆಯಿತು.

ಈ ಸಂದರ್ಭದಲ್ಲಿ ವಿಶ್ವಬ್ರಾಹ್ಮಣ ಮಹಿಳೆಯರ ಸುಮಾರು 7 ಪ್ರಮುಖ ಬೇಡಿಕಗಳ ಮನವಿಯನ್ನು ಸಂಸದೆ ಶೋಭ ಕಾರಂದ್ಲಾಜೆ ಅವರಿಗೆ ಸಲ್ಲಿಸಿದರು.

ಉಡುಪಿ ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ವಂದನಾ ಆಚಾರ್ಯ,ಉಡುಪಿ ನಗರ ಸಭೆ ಉಪಾದ್ಯಕ್ಷೆ ಅಮೃತ ಕೃಷ್ಣಮೂರ್ತಿ ಅಚಾರ್ಯ, ವೀಣ ವಿಶ್ವನಾಥï ರಾವï ಇನ್ನಿತರರು ಉಪಸ್ಥಿತರಿದ್ದರು

 

 

 

 

 


Spread the love