ಉಡುಪಿ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ವಿಶ್ವಾಸ್ ಶೆಟ್ಟಿ ನೇಮಕ
ಉಡುಪಿ: ಉಡುಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿ ವಿಶ್ವಾಸ್ ಶೆಟ್ಟಿ ಇವರನ್ನು ನೇಮಕ ಮಾಡಿ ರಾಜ್ಯಧ್ಯಕ್ಷರಾದ ಡಾ. ಶಾಂತವೀರ ನಾಯ್ಕ ಆದೇಶ ಮಾಡಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜನಾರ್ದನ ತೋನ್ಸೆ ಇವರ ಶಿಫಾರಸ್ಸಿನ ಮೇರೆಗೆ ಈ ಆದೇಶವನ್ನು ಹೊರಡಿಸಿದ್ದು, ಕಾಂಗ್ರೆಸ್ ಪಕ್ಷದ ತತ್ವ ಶಿಸ್ತಿಗೆ ಒಳಪಟ್ಟಿ ಕಾರ್ಯ ನಿರ್ವಹಿಸುವುದರೊಂದಿಗೆ ಜಿಲ್ಲಾ ಅಸಂಘಟಿಕ ಕಾರ್ಮಿಕ ಕಾಂಗ್ರೆಸಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಪಕ್ಷ ಸಂಘಟನೆಯ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಿ ಸಂಘಟಿಸಿ ಸದಸ್ಯರನ್ನಾಗಿ ಮಾಡಿ ಅವರ ಕಲ್ಯಾಣಕ್ಕಾಗಿ ಶ್ರಮಿಸಲು ಸೂಚಿಸಲಾಗಿದೆ.
ಈ ಮೊದಲು ವಿಶ್ವಾಸ್ ಶೆಟ್ಟಿಯವರು ಉಡುಪಿ ಜಿಲ್ಲಾ ಐಟಿ ಸೆಲ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.