Spread the love
ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ವಿಶ್ವಾಸದ ಮನೆಯಲ್ಲಿ ದೀಪಾವಳಿ ಆಚರಣೆ
ಉಡುಪಿ: ಉಡುಪಿ ಜಿಲ್ಲಾ ರಾಷ್ಟ್ರೀಯ ವಿದ್ಯಾರ್ಥಿ ಯುವ ಕಾಂಗ್ರೆಸ್ ವತಿಯಿಂದ ದೀಪಾವಳಿ ಸಂಭ್ರಮವನ್ನು ಕಟಪಾಡಿ ಬಳಿಯ ಶಂಕರಪುರ ವಿಶ್ತಾಸದ ಮನೆಯ ಅಶಕ್ತ ಮತ್ತು ಅನಾಥರೊಂದಿಗೆ ಗುರುವಾರ ಆಚರಿಸಲಾಯಿತು.
ದೀಪಾವಳಿಯ ಪ್ರಯುಕ್ತ ಅನಾಥಶ್ರಮದಲ್ಲಿನ ಮಕ್ಕಳಿಗೆ ಹಾಗೂ ವೃದ್ದರಿಗೆ ಸಿಹಿ ತಿಂಡಿ, ಪಾಯಸ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು ಮತ್ತು ಅವರೊಂದಿಗೆ ಸುಡುಮದ್ದುಗಳನ್ನು ಹಚ್ಚಿ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಆಲ್ಮೇಡಾ ಮಾತನಾಡಿ ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಪ್ರತಿಯೊಬ್ಬರ ಜೀವನದಲ್ಲಿ ಅಡಗಿರುವ ಕತ್ತಲನ್ನು ದೂರಗೊಳಿಸಿ ಸಂತೋಷದ ಬೆಳಕು ಮೂಡುವಂತಾಗಲಿ ಎಂದು ಹಾರೈಸಿದರು.
ಈ ವೇಳೆ ಅರ್ಥರ್ ಚಾರ್ಲಸ್, ಎನ್ ಎಸ್ ಯು ಐ ಸದಸ್ಯರಾದ ಪ್ರಜ್ವಲ್ ಕುಂದರ್, ಮಾರ್ಸ್ ಸಿಕ್ವೇರಾ, ಮೊಹಮ್ಮದ್ ಸ್ವಲಾಹ್, ದೀರಜ್, ಆಶೀಶ್ ಹಾಗೂ ಇತರರು ಉಪಸ್ಥಿತರಿದ್ದರು.
Spread the love