ಉಡುಪಿ ಜಿಲ್ಲಾ ಜೆ.ಡಿ.ಎಸ್ ವತಿಯಿಂದ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ
ಉಡುಪಿ: ಲಡಾಖ್ ನ ಗುರುವಾನ್ ಕಣಿವೆಯಲ್ಲಿ ಚೀನಾ ದೇಶದ ಸೈನಿಕರ ಜೊತೆ ಹೋರಾಡುತ್ತ ವೀರ ಮರಣವನ್ನು ಹೊಂದಿದ ಹುತಾತ್ಮ ಯೋಧರಿಗೆ ಉಡುಪಿ ಜಿಲ್ಲಾ ಜನತಾದಳ ಜಾತ್ಯತೀತ ಪಕ್ಷದ ಜಿಲ್ಲಾ ಕಛೇರಿ ಕುಮಾರ ಕೃಪದಲ್ಲಿ ಬುಧವಾರದಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾಧ್ಯಕ್ಷರಾದ ಯೋಗೇಶ್. ವಿ.ಶೆಟ್ಟಿಯವರು ಮಾತನಾಡುತ್ತಾ ಸರಕಾರ ಪಕ್ಷ ಯಾವುದೇ ಇರಲಿ ದೇಶದ ಹಿತ, ರಕ್ಷಣೆಯ ವಿಷಯ ಬಂದಾಗ ನಾವು ಸರಕಾರ ಮತ್ತು ಸೈನಿಕರ ಜೊತೆ ನಿಲ್ಲಬೇಕು. ಚೀನಾದ ನರಿ ಬುದ್ಧಿಗೆ ತಕ್ಕ ಪಾಠವನ್ನು ಕಲಿಸಬೇಕು. ದೇಶಕ್ಕೆ ದೇಶವೇ ಒಂದಾಗಬೇಕು. ನಮ್ಮ ಯುವಕರು ಹೆಚ್ಚಾಗಿ ಸೈನ್ಯಕ್ಕೆ ಸೇರಬೇಕು. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಯುವಕರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ದೇಶ ಪ್ರೇಮ ಕೇವಲ ಮಾತಿನಲ್ಲಿ ಆಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ವಾಸುದೇವ್ ರಾವ್, ನಾಯಕರುಗಳಾದ ಕಿಶೋರ್ ಕುಂದಾಪುರ, ರಂಜಿತ್ ಶೆಟ್ಟಿ ಬೈಂದೂರ್, ನಾಗರಾಜ್ ಭಟ್ ಕೆಮ್ತೂರ್, ಖಾದರ್ ಕುಂಜಾಲು, ಶೇಕರ್ ಕೋಟ್ಯಾನ್, ಪ್ರಕಾಶ್ ಶೆಟ್ಟಿ, ರಝಾಕ್ ಉಚ್ಚಿಲ, ಹಮೀದ್ ಯೂಸುಫ್, ರಫೀಕ್, ಇಬ್ರಾಹಿಂ ತವಕ್ಕಲ್, ಶ್ರೀಕಾಂತ್ ಹೆಬ್ರಿ, ಚೆರೆ ಮೋನ್, ಇಕ್ಬಾಲ್ ಉಚ್ಚಿಲ, ಬಾಲಕೃಷ್ಣ ಕೆಪ್ಪೆಟ್ಟು, ಹರಿಣಿ, ಮಮತಾ, ವಸುಮತಿ ಸಾಲಿಗ್ರಾಮ, ರಂಗನಾಥ್ ಕೋಟ್ಯಾನ್, ಸನವರ್ ಹಾಗೂ ಇನ್ನಿತರ ನಾಯಕ ನಾಯಕಿಯರು ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.