ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಉದ್ಘಾಟನೆ
ಉಡುಪಿ: ಉಡುಪಿ ಸ್ವಿಮ್ಮಿಂಗ್ ಅಸೋಸಿಯೇಶನ್ ಹಾಗೂ ಸಿಲೋಮ್ ಪೂಲ್ಸ್ ಆಂಡ್ ಸಲ್ಯೂಷನ್ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಅಜ್ಜರಕಾಡಿನ ಈಜುಕೊಳದಲ್ಲಿ ರವಿವಾರ ಉದ್ಘಾಟನೆಗೊಂಡಿತು.
ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಈಜು ಸ್ಪರ್ಧೆಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು ಈಜುಗಾರ ಯಾವುದೇ ಅನಾಹುತ ಸಂಭವಿಸಿದಾಗ ಅದನ್ನು ಸಮರ್ಥ ಹಾಗೂ ಧ್ಯೇರ್ಯದಿಂದ ಎದುರಿಸುತ್ತಾನೆ. ಈಜು ಕಲಿಯುವುದರಿಂದ ಯಾವುದೇ ದುಷ್ಪರಿಣಾಮ ಇಲ್ಲ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಜಿಲ್ಲೆಯಲ್ಲಿ ಸುಮಾರು 9 ಕೋಟಿ ವೆಚ್ಚದಲ್ಲಿ ಕ್ರೀಡಾ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು ಕ್ರೀಡೆಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.
ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಕ್ಲೈನ್ ಫೆರ್ನಾಂಡಿಸ್, ರಮಾಕಾಂತ್ ಭಟ್, ಅಶೋಕ್ ಶೆಟ್ಟಿ, ಗಣೇಶ್ ಅಮೀನ್, ಬಿ ಶಂಕರ್ ಶೆಟ್ಟಿ, ಗಂಗಾಧರ್ ಬಿರ್ತಿ, ರಾಧಕೃಷ್ಣ ಮೆಂಡನ್, ಶಶಿಧರ್ ಕುಂದರ್, ಶಿವರಾಮ್ ರಾಥೋಡ್ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಥೆಯಲ್ಲಿ 7 ವರ್ಷದಿಂದ 70 ವರ್ಷ ವಯಸ್ಶಿನ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 120ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಸಿದ್ದರು.