ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ : ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಸಮಾರೋಪ
ಉಡುಪಿ: ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತನ್ನ ದಿಟ್ಟ ನಿಲುವುಗಳಿಂದ ಇಂದಿಗೂ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಮಹಿಳೆ ಎನಿಸಿಕೊಂಡವರು ದಿ.ಮಾಜಿ ಪ್ರಧಾನಿ ಇಂದಿರಗಾಂಧಿ ಎಂದು ಆಹಾರ ಸಚಿವ ಯು.ಟಿ ಖಾದರ್ ಬಣ್ಣಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶನಿವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಇಂದಿರ ಗಾಂಧಿ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಮಿಕರು, ಮಹಿಳೆಯರು, ರೈತರು, ಹಿಂದುಳಿದ ವರ್ಗ ತಲೆ ಎತ್ತಿ ಬದುಕುವಂತೆ ದೇಶದ ಸಮಾಜಿಕ ಸ್ಥಿತಿಗತಿಗಳನ್ನು ಬದಲಾಹಿಸಿದ ಕೀರ್ತಿ ಇಂದಿರ ಅವರಿಗೆ ಸಲ್ಲುತ್ತದೆ ಎಂದರು. ದೇಶದ ಪ್ರತೀ ಗ್ರಾಮದಲ್ಲಿ ಇಂದಿರ ಅವರ ಆದರ್ಶವನ್ನು, ಅವರ ದಿಟ್ಟತನದ ಗುಣವನ್ನು ಮಹಿಳೆಯರು ರೂಡಿಸಿಕೊಂಡು ಸಬಲರಾಗಬೇಕು ಈ ಮೂಲಕ ಸದೃಡ ಸಮಾಜ ನಿರ್ಮಾಣಕ್ಕಾಗಿ ಮಹಿಳೆಯರು ಮಹತ್ವದ ಪಾತ್ರ ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಇಂದಿರ ಗಾಂಧಿ ಅವರ ಗರೀಭಿ ಹಠಾವೋ ಎಂಬ ಮೂಲ ಚಿಂತನೆ ಅಳವಡಿಸಿಕೊಂಡು ರಾಜ್ಯಾದ್ಯಂತ ಹಸಿದವರಿಗೆ ಅನ್ನ ನೀಡುವ ಇಂದಿರ ಕ್ಯಾಂಟಿನ್ ಆರಂಭಿಸಿದ್ದೇವೆ. ಸದೃಡ ದೇಶ ನಿರ್ಮಾಣದ ಆಶಯ ಹೊಂದಿದ್ದ ಇಂದಿರ ಅವರ ಕನಸು ಮತ್ತು ಚಿಂತನೆಯನ್ನು ಸಕಾರಗೊಳಿಸಲು ಕಾಂಗ್ರೆಸ್ ಪಕ್ಷವು vಳಮಟ್ಟದಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ದೇಶದ ಜನರನ್ನು ಮತ್ತು ದೇಶದ ಮಣ್ಣನ್ನು ಅತೀವವಾಗಿ ಪ್ರೀತಿಸುತಿದ್ದ ಏಕೈಕ ಪ್ರಧಾನಿ ಇಂದಿರಗಾಂದಿಯಾಗಿದ್ದರು. ದೇಶದ ನಿವಾಸಿಗಳಿಗೆ ಸ್ವಂತ ಭೂಮಿ ಹೊಂದಲು, ಹಿಂದುಳಿದ ಜನರ ಶ್ರೇಯೋಭಿವೃದ್ಧಿಗಾಗಿ, ದೇಶದ ಆರ್ಥಿಕ ಅಭಿವೃದ್ಧಿಗಾಗಿ ವಿಶೇಷ ಕಾನೂನುಗಳನ್ನು ಜಾರಿಗೆ ತಂದವರು. ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತೆಗಾಗಿ ಮಹತ್ವದ ಒಪ್ಪಂದಗಳ ಮೂಲಕ ದಿಟ್ಟತನ ಮೆರೆದವರು ಎಂದು ಬಣ್ಣಿಸಿದರು.
ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್ ಅವರಿಗೆ ಇಂದಿರ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಮುನ್ನ ಅಜ್ಜರಕಾಡು ಹುತಾತ್ಮ ಸ್ಮಾರಕದಿಂದ ಪುರಭವನವರೆಗೆ ಮೆರವಣಿಗೆ ನಡೆಸಲಾಯಿತು. ಕಾಂಗ್ರೆಸ್ ಮುಖಂಡರಾದ , ಮೀನಾಕ್ಷಿ ಮಾಧವ ಬನ್ನಂಜೆ, ಅಮೃತ್ ಶೆಣೈ, ಸಂಧ್ಯಾ ತಿಲಕ್ ರಾಜ್, ನವೀನ್ ಚಂದ್ರ ಶೆಟ್ಟಿ, ಜನಾರ್ಧನ ತೋನ್ಸೆ, ಗೋಪಾಲ ಭಂಡಾರಿ, ಚಂದ್ರಿಕಾ ಶೆಟ್ಟಿ, ಸರಳ ಕಾಂಚನ್, ಜ್ಯೋತಿ ಹೆಬ್ಬಾರ್, ವೆರೋನಿಕ ಕರ್ನೇಲಿಯೋ, ಗೀತ ವಾಗ್ಳೆ, ಶ್ಯಾಮಲ ಪೂಜಾರಿ, ಸರಸು ಬಂಗೇರ, ಜಯಶ್ರೀ ಕೃಷ್ಣರಾಜ್, ಜನಾರ್ದನ್ ತೋನ್ಸೆ, ವಿಶ್ವಾಸ್ ಅಮೀನ್, ನರಸಿಂಹ ಮೂರ್ತಿ, ಜಿ.ಎ ಬಾವ, ಕ್ರಿಸ್ಟನ್ ಡಿ’ಆಲ್ಮೇಡಾ ಸುನಿತ ಶೆಟ್ಟಿ ನಿರೂಪಿಸಿದರು.
indirajee is a great lady of the millennium.