ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಮತೆಯ ತೊಟ್ಟಿಲು ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

Spread the love

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಮತೆಯ ತೊಟ್ಟಿಲು ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

ಉಡುಪಿ: ಬಾಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಅದ್ಬುತ ಕ್ಷಣವಾಗಿರುತ್ತದೆ. ಇಲ್ಲಿ ಕಲಿಯುವ ಒಳ್ಳೆಯ ಗುಣ, ಶಿಕ್ಷಣ ಭವಿಷ್ಯದ ಯಶಸ್ಸಿಗೆ ಮೆಟ್ಟಿಲಾಗುತ್ತದೆ. ಮುಗ್ದ ಮನಸಿನ ಮಕ್ಕಳಿಗೆ ಜಾತಿ, ವರ್ಗಗಳ ಭೇದ-ಭಾವವಿಲ್ಲ, ಮೇಲು-ಕೀಳು ಎಂಬ ತಾರತಮ್ಯವಿಲ್ಲ. ಎಂಬ ಭಾವನೆಯೊಂದಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹಾರಲಾಲ್ ನೆಹರೂರವರ ಜನ್ಮದಿನಾಚರಣೆಯಾದ ಮಕ್ಕಳ ದಿನಾಚರಣೆಯನ್ನು ಬುಧವಾರ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಕೃಷ್ಣಾನುಗ್ರಹ ದತ್ತುಸ್ವೀಕಾರ ಮತ್ತು ಪಾಲನಾ ಕೇಂದ್ರದ ವತಿಯಿಂದ ನಡೆಸಲ್ಪಡುವ ಮಮತೆಯ ತೊಟ್ಟಿಲು ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಇದರ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರು ಜವಾಹರ ಲಾಲ್ ನೆಹರೂ ರವರು ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೆಹರೂರವರ ಜನ್ಮ ದಿನಾಚರಣೆಯನ್ನು ಮಾದರಿಯಾಗಿ ಆಚರಿಸಿದೆ ಎಂದರು.

ಇದೇ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೃಷ್ಣಾನುಗ್ರಹ ದತ್ತುಸ್ವೀಕಾರ ಮತ್ತು ಪಾಲನಾ ಕೇಂದ್ರಕ್ಕೆ ಮಕ್ಕಳಿಗೆ ಅಗತ್ಯವಿರುವ ದಿನಬಳಕೆಯ ವಿವಿಧ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಕೆ. ವಿಘ್ನೇಶ್ ಕಿಣಿ, ಇಮ್ರಾನ್ ಕಾಪು, ಶರೀಫ್ ಹೆಜಮಾಡಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಜ್, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ, ದಾನಿಗಳಾದ ಪುರಂದರ ಸಾಲಿಯಾನ್, ಶಾಲಿನಿ ಪುರಂದರ ಸಾಲಿಯಾನ್, ಸವಿತಾ ಅಮೃತ್ ಶೆಣೈ, ಯುವ ಕಾಂಗ್ರೆಸ್ ನಾಯಕರಾದ ನೀರಜ್ ಪಾಟೀಲ್, ಸಂಜಯ್ ಆಚಾರ್ಯ, ಜೊಯೆಲ್ ಸೋನ್ಸ್, ಆಕಾಶ್ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love