ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ
ಉಡುಪಿ : ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆಯು ಮಂಗಳವಾರ ನಡೆಯಿತು .
ವಂದೇ ಮಾತರಂ ಗೀತೆಯೊ೦ದಿಗೆ ಆರ೦ಭವಾದ ಸಭೆಯನ್ನು ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಸ್ವಾಗತಿಸಿದರು .
ಶ್ರೀಲಂಕಾದಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಲಾಯಿತು ಮತ್ತು ಮಡಿದವರಿಗಾಗಿ ಸ೦ತಾಪ ವ್ಯಕ್ತಪಡಿಸಲಾಯಿತು .
ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರದ ವೇಳೆ ಮಾಜೀ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಹೇಳಿದ ರಾಜೀವ್ ಗಾಂಧಿಯವರು ಭ್ರಷ್ಟಾಚಾರ ಮಾಡಿ ಮಡಿದರು ಎ೦ಬ ಹೇಳಿಕೆಯನ್ನು ಇಡೀ ಸಭೆಯು ಒಕ್ಕೊರಲಿನಿಂದ ಖಂಡಿಸಿತು ಮತ್ತು ಖಂಡನಾ ನಿರ್ಣಯವನ್ನು ಮಾಡಲಾಯಿತು .
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ‘ ಗಾಂಧಿ 150’ ಕಾರ್ಯಕ್ರಮದ ಅ೦ಗವಾಗಿ ಹಮ್ಮಿಕೊಂಡ ಬಡ ಅಶಕ್ತ 2 ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಯೋಜನೆಗೆ ರೂಪುರೇಷೆಗಳನ್ನು ಸಿದ್ದಪಡಿಸಲಾಯಿತು .
ಹಿರಿಯಡ್ಕ ಬ್ಲಾಕ್ ಸಂಯೋಜಕಿ , ಜಿ ಪ೦ ಸದಸ್ಯೆ ಚ೦ದ್ರಿಕಾ ಕೇಳ್ಕರ್ ಅವರು ತಮ್ಮ ಕಾರ್ಯದೊತ್ತಡದ ಕಾರಣ ನೀಡಿದ್ದರಿ೦ದ ಲಕ್ಷ್ಮೀ ನಾರಾಯಣ್ ಅವರನ್ನು ಹಿರಿಯಡ್ಕ ಬ್ಲಾಕ್ ಸಂಯೋಜಕರನ್ನಾಗಿ ನೇಮಕ ಮಾಡಲಾಯಿತು .
ಹೆಬ್ರಿ ಬ್ಲಾಕ್ ಸಂಯೋಜಕ ಸುರೇಶ್ ಶೆಟ್ಟಿಯವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಶಶಿಕಲಾ ಡಿ ಪೂಜಾರಿ ಅವರನ್ನು ನೇಮಕ ಮಾಡಲಾಯಿತು . ಈ ಸ೦ದರ್ಭ ಉಪಸ್ಥಿತರಿದ್ದ ಕೆ ಪಿ ಸಿ ಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ , ಜಿಲ್ಲಾ ಕಾ೦ಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಆದೇಶಪತ್ರವನ್ನು ನೂತನ ಸಂಯೋಜಕರಿಗೆ ಹಸ್ತಾಂತರಿಸಿದರು .
ಹಿರಿಯಡ್ಕ ಬ್ಲಾಕ್ ನಿಕಟ ಪೂರ್ವ ಸಂಯೋಜಕಿ ಚ೦ದ್ರಿಕಾ ಕೇಳ್ಕರ್ ಅವರನ್ನು ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಅವರು ಎಲ್ಲಾ ಸಂಯೋಜಕರೊ೦ದಿಗೆ ಗೌರವಿಸಿದರು .
ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದ ಎಲ್ಲಾ ಸದಸ್ಯರಿಗೂ ಅಭಿನ೦ದನೆ ಸಲ್ಲಿಸಲಾಯಿತು .
ಸಭೆಯಲ್ಲಿ ಜಿಲ್ಲಾ ಸಹ ಸಂಯೋಜಕಿ ಮೇರಿ ಡಿ’ ಸೋಜಾ , ಸುನಿತಾ ಶೆಟ್ಟಿ , ಎಲ್ಲಾ ಬ್ಲಾಕ್ ಸಂಯೋಜಕರುಗಳು, ಜಿಲ್ಲ ಪಂಚಾಯತ್ ಸಂಯೋಜಕರುಗಳು ಉಪಸ್ಥಿತರಿದ್ದರು .