ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವೆ ಡಾ. ಜಯಮಾಲ ಪ್ರವಾಸ

Spread the love

ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವೆ ಡಾ. ಜಯಮಾಲ ಪ್ರವಾಸ

ಉಡುಪಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಜನವರಿ 22 ರಿಂದ 27 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜನವರಿ 22 ರಂದು ರಾತ್ರಿ 10.30 ಕ್ಕೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡುವರು.

23 ರಂದು ಬೆಳಿಗ್ಗೆ 9 ಕ್ಕೆ ಕಾಪು ಮಾರಿಗುಡಿ ದೇವಾಲಯ ಜೀರ್ಣೋದ್ದಾರ ಹಾಗೂ ಶಿಲಾನ್ಯಾಸ ಕಾರ್ಯಕ್ರಮ, ಮಧ್ಯಾಹ್ನ 2 ಕ್ಕೆ ಉಡುಪಿ ಸಕ್ರ್ಯೂಟ್ ಹೌಸ್ನಲ್ಲಿ ಸಾರ್ವಜನಿಕ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ, ಸಂಜೆ 4 ಕ್ಕೆ ಬ್ರಹ್ಮಾವರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ವಾಸ್ತವ್ಯ.

24 ರಂದು ಬೆಳಗ್ಗೆ 10.30 ಕ್ಕೆ ಕಾರ್ಕಳ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ವೀಕ್ಷಣೆ, ಮಧ್ಯಾಹ್ನ 2 ಕ್ಕೆ ಉಡುಪಿ ನಗರ ಸಭೆಯಲ್ಲಿ ನಗರೋತ್ಥಾನದ ವತಿಯಿಂದ 3 ನೇ ಹಂತದ ವಿವಿಧ ಪೂರ್ಣ ಗೊಂಡ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ವಾಸ್ತವ್ಯ.

25 ರಂದು ಮಧ್ಯಾಹ್ನ 3.30 ಕ್ಕೆ ಬಾರಕೂರಿನಲ್ಲಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳು ಜಂಟಿಯಾಗಿ ಆಯೋಜಿಸಿರುವ ಅಳುಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

26 ರಂದು ಬೆಳಗ್ಗೆ 8.30 ಕ್ಕೆ ಉಡುಪಿ ಬೀಡಿನ ಗುಡ್ಡೆಯ ಮಹಾತ್ಮಾ ಗಾಂಧೀ ಬಯಲು ರಂಗ ಮಂದಿರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

27 ರಂದು ಬಾರಕೂರಿನಲ್ಲಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳು ಜಂಟಿಯಾಗಿ ಆಯೋಜಿಸಿರುವ ಅಳುಪೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ನಂತರ ಬೆಂಗಳೂರಿಗೆ ತೆರಳುವರು.


Spread the love