ಉಡುಪಿ ಜಿಲ್ಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಸಕಲ ಸಿದ್ದತೆ: ಜಿಪಂ ಅಧ್ಯಕ್ಷ ದಿನಕರ ಬಾಬು ದಿನಕರ ಬಾಬು

Spread the love

ಉಡುಪಿ ಜಿಲ್ಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಸಕಲ ಸಿದ್ದತೆ: ಜಿಪಂ ಅಧ್ಯಕ್ಷ ದಿನಕರ ಬಾಬು ದಿನಕರ ಬಾಬು

ಉಡುಪಿ : ಜೂನ್ 25 ರಿಂದ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಎಲ್ಲಾ ರೀತಿಯ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಹಾಜರಾಗಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 13526 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು , ಹೊರ ಜಿಲ್ಲೆಯಿಂದ ಪರೀಕ್ಷೆ ಬರೆಯುವವರು 586, ಹೊರ ಜಿಲ್ಲೆಯಿಂದ ಇಲ್ಲಿ ಪರೀಕ್ಷೆ ಬರೆಯುವವರು 82. ಅದರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳೂ-12520, ರೆಗ್ಯೂಲರ್ ಪುನರಾವರ್ತಿತ ವಿದ್ಯಾರ್ಥಿಗಳು-485, ಖಾಸಗಿ ವಿದ್ಯಾರ್ಥಿಗಳು-376, ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳೂ 145.

ಯಾವುದೇ ಪರೀಕ್ಷಾ ಕೇಂದ್ರವು ಕಂಟೈನ್ ಮೆಂಟ್ ಝೋನ್ ಎಂದು ಡಿಕ್ಲೇರ್ ಆದಲ್ಲಿ ಬದಲಿ ಕೇಂದ್ರವನ್ನು ಗುರುತಿಸುವ ಬಗ್ಗೆ – ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದಲ್ಲಿ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಒಟ್ಟು ಜಿಲ್ಲೆಯಲ್ಲಿ 10 ಹೆಚ್ಚುವರಿ ಕೇಂದ್ರಗಳನ್ನು ಸಿದ್ದತೆಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 82 ಬಸ್ಸುಗಳನ್ನು ಖಾಸಗಿ ಶಾಲೆಯಿಂದ ಪಡೆಯಲಾಗಿದೆ. ಈ ಬಸ್ಸುಗಳಿಗೆ ಇಂಧನವೆಚ್ಚವನ್ನು ಮಾತ್ರ ಇಲಾಖೆಯಿಂದ ಭರಿಸಲಾಗುತ್ತದೆ. ಈಗಾಗಲೇ ಪ್ರಸ್ತಾವನೆಯನ್ನು ಎಸ್ ಎಸ್ ಎಲ್ ಸಿ ಬೋರ್ಡಿಗೆ ಕಳುಹಿಸಲಾಗಿದ್ದು, ಪ್ರತಿ ತಾಲೂಕಿನಲ್ಲಿ 5 ವಾಹನಗಳನ್ನು ಹೆಚ್ಚುವರಿಯಾಗಿ ತಹಶಿಲ್ದಾರರ ಹಂತದಲ್ಲಿ ಕಾಯ್ದಿರಿಸಲು ಕ್ರಮವಹಿಸಲಾಗಿದೆ. ಶಿಕ್ಷಣ ಇಲಾಖೆ ಹಂತದಲ್ಲೂ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಾಹನ ಹೊಂದಿರುವ ಚಾಲಕರನ್ನು ಗುರುತಿಸಿ ಆಪತ್ಕಾಲಕ್ಕೆ ಬಳಸಿಕೊಳ್ಳಲು ವ್ಯವಸ್ಥೆಗೊಳಿಸಲಾಗಿದೆ.

ಪ್ರತಿ ವಿದ್ಯಾರ್ಥಿಗಳನ್ನು ಶಾಲಾ ಹಂತದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಸಾರಿಗೆ ವ್ಯವಸ್ಥೆ ಬಗ್ಗೆ ವಿಚಾರಿಸಲಾಗಿದ್ದು ಅಗತ್ಯಬಿದ್ದವರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷಾ ಹಿಂದಿನ ದಿನ ಎಲ್ಲಾ ಸಿಬ್ಭಂದಿಗಳು ಕೇಂದ್ರಕ್ಕೆ ಆಗಮಿಸಲು ಸೂಚಿಸಿದೆ. ಪರೀಕ್ಷಾ ಎಲ್ಲಾ ಮಾಹಿತಿಯನ್ನು , ಸುರಕ್ಷತೆ, ಸಾಮಾಜಿಕ ಅಂತರ, ಆರೋಗ್ಯ ತಪಾಸಣೆದ ಬಗ್ಗೆ ಕೇಂದ್ರ ಸಿಬ್ಭಂದಿಗಳಿಗೆ ಮಾಹಿತಿ ನೀಡಲು ಕ್ರಮವಹಿಸಲಾಗಿದೆ.

ಆರೋಗ್ಯ ಸಿಬ್ಭಂದಿಗಳೂ ಕೇಂದ್ರಕ್ಕೆ ಹಿಂದಿನ ದಿನ 8.30ಕ್ಕೆ ಹಾಜರಿರಲು ಸೂಚಿಸಿದೆ. ಆ ದಿನ ವಿದ್ಯಾರ್ಥಿಗಳೂ ಕೇಂದ್ರಕ್ಕೆ ಬಂದು ಅವರ ಕೊಠಡಿ/ಆಸನಗಳನ್ನು ಮುಂಚಿತವಾಗಿ ಬಂದು ತಿಳಿಯಲು ಅವಕಾಶ ಕಲ್ಪಿಸಲಾಗಿದೆ.
ಸೆಕ್ಷನ್ ಜಾರಿ/ಝೇರಾಕ್ಸ್ ಅಂಗಡಿ ಮುಚ್ಚುವ ಬಗ್ಗೆ ಕ್ರಮವಹಿಸಲಾಗಿದೆ, ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸೇಶನ್ ಮಾಡಲು ಗ್ರಾಮ ಪಂಚಾಯತ್/ ನಗರ ಸಭೆ ಮುಖ್ಯಾದಿಕಾರಿಗಳಿಗೆ ಸೂಚನೆ ನೀಡಲಾಗಿದೆ, ವಿದ್ಯಾರ್ಥಿಗಳು 4 ಸಾಲುಗಳಲ್ಲಿ ಬರಲು ಪರೀಕ್ಷಾ ಕೇಂದ್ರಗಳಲ್ಲಿ ಬಾಕ್ಸಗಳನ್ನು ಹಾಕಲು ಕ್ರಮವಹಿಸಲಾಗಿದೆ ಆರೋಗ್ಯ ತಪಾಸಣೆಯು ಸಾಲಲ್ಲಿ ಆಗಲಿದೆ. 200 ಮಕ್ಕಳಿಗೆ ಒಂದರAತೆ ಥರ್ಮಲ್ ಗನ್ ಕೇಂದ್ರಗಳಿಗೆ ಬಂದಿರುತ್ತದೆ. ಇಬ್ಬರು ಆರೋಗ್ಯ ಕಾರ್ಯಕರ್ತರೂ ಪರೀಕ್ಷಾ ಕರ್ತವ್ಯದಲ್ಲಿರುವುದರಿಂದ ಅವರೂ ಥರ್ಮಲ್ ಗನ್ ತರಲು ಸೂಚಿಸಿದೆ.

ಪರೀಕ್ಷಾ ಕೇಂದ್ರಗಳಿಗೆ, ಪ್ರಶ್ನೆ ಪತ್ರಿಕೆ ರವಾನೆ, ಉತ್ತರ ಪತ್ರಿಕೆ ದಾಸ್ತಾನು ಕೊಠಡಿಗಳಿಗೆ ಭದ್ರತೆ ವಹಿಸುವ ಬಗ್ಗೆ ಪೋಲೀಸ್ ಇಲಾಖೆ ಕ್ರಮವಹಿಸಿದೆ. ಪರೀಕ್ಷಾ ದಿನ ಅವ್ಯವಹಾರ ತಡೆಗಟ್ಟಲು ಸ್ಥಾನಿಕ ಜಾಗ್ರತ ದಳ, ಅನ್ಯ ಇಲಾಖಾ ಆದಿಕಾರಿಗಳ ನಿಯೋಜನೆ, ಉಪನಿರ್ದೇಶಕರ ನೇತೃತ್ವದಲ್ಲಿ 2 ಜಾಗ್ರತ ದಳ , ಡಯಟ್ ನ ಸಿಬ್ಬಂದಿಗಳನ್ನ್ನೂ ಬಳಸಿಕೊಳ್ಳಲಾಗಿದೆ.

ಎಲ್ಲಾ 51 ಕೇಂದ್ರಗಳ ಪರಿಶೀಲನೆ ಆಗಿ, 4 ಬಾರಿ ಕೇಂದ್ರ ಮುಖ್ಯಸ್ಥರ ಹಾಗೂ ಪ್ರೌಢಶಾಲಾ ಮುಖ್ಯಸ್ತರ ಸಭೆ ಕರೆದು, ಸಾರಿಗೆ ವ್ಯವಸ್ಥೆ, ಸುರಕ್ಷತೆ, ಸಾಮಾಜಿಕ ಅಂತರ, ಥರ್ಮಲ್ ಸ್ಕಾನಿಂಗ್, ಪೋಷಕರ ನಿಯಂತ್ರಣ, ಪ್ರತಿಯೊಬ್ಬರ ಜವಾಬ್ಧಾರಿ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿ ಕೇಂದ್ರಕ್ಕೂ ಹಾಗೂ ಪ್ರತಿ ಪ್ರೌಢಶಾಲೆಗಳಿಗೂ ಚೆಕ್ ಲಿಸ್ಟ್ ನೀಡಿ ವ್ಯವಸ್ಥೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದು ದಿನಕರ ಬಾಬು ತಿಳಿಸಿದ್ದಾರೆ.


Spread the love